ಬೆಂಗಳೂರಿನಲ್ಲಿ ಸ್ನೇಹಿತನಿಂದ ಸ್ನೇಹಿತನ ಮೇಲೆಯೇ ಆ್ಯಸಿಡ್ ದಾಳಿ! ಮೈಸೂರಿನಲ್ಲಿ ಆರೋಪಿ ಬಂಧನ

ಆ್ಯಸಿಡ್ ದಾಳಿಗೆ ಒಳಗಾದ ವ್ಯಕ್ತಿ ದೇಹ ಶೇಕಡಾ 30ರಷ್ಟು ಸುಟ್ಟು ಹೋಗಿದೆ. ಸದ್ಯ ಆರೋಪಿ ಜನತಾ ಅದಕ್​ನ ಪೊಲೀಸರು ಬಂಧಿಸಿದ್ದಾರೆ. ಮೈಸೂರು ಬಳಿ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಸ್ನೇಹಿತನಿಂದ ಸ್ನೇಹಿತನ ಮೇಲೆಯೇ ಆ್ಯಸಿಡ್ ದಾಳಿ! ಮೈಸೂರಿನಲ್ಲಿ ಆರೋಪಿ ಬಂಧನ
ಬಂಧಿತ ಆರೋಪಿ, ಆ್ಯಸಿಡ್ ದಾಳಿಗೆ ಒಳಗಾದ ವ್ಯಕ್ತಿ
Follow us
TV9 Web
| Updated By: sandhya thejappa

Updated on:May 31, 2022 | 1:00 PM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದ ಆ್ಯಸಿಡ್ (Acid) ದಾಳಿ ಘಟನೆ ಮಾಸುವ ಮುನ್ನಾ ಇನ್ನೊಂದು ಘಟನೆ ನಡೆದಿದೆ. ಕಬ್ಬನ್​ಪೇಟೆ 10ನೇ ಕ್ರಾಸ್​ನಲ್ಲಿ ಸ್ನೇಹಿತ ತನ್ನ ಗೆಳೆಯನ ಮೇಲೆಯೇ ಆ್ಯಸಿಡ್ ದಾಳಿ ಮಾಡಿದ್ದಾನೆ. ಪಶ್ಚಿಮ ಬಂಗಾಳ ಮೂಲದ ಜನತಾ ಅದಕ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಗಾಯಾಳು ಮತ್ತು ಆರೋಪಿ ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಆರೋಪಿ ಡೈಲೂಟೇಡ್ ಸೆಲ್ಫುರಿಕ್ ಆಸಿಡ್ ಎರಚಿದ್ದಾನೆ. ಗಾಯಾಳು ಮುಖ, ಎದೆಗೆ ಗಾಯವಾಗಿದ್ದು, ವಿಕ್ಟೋರಿಯಾ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆ್ಯಸಿಡ್ ದಾಳಿಗೆ ಒಳಗಾದ ವ್ಯಕ್ತಿ ದೇಹ ಶೇಕಡಾ 30ರಷ್ಟು ಸುಟ್ಟು ಹೋಗಿದೆ. ಸದ್ಯ ಆರೋಪಿ ಜನತಾ ಅದಕ್​ನ ಪೊಲೀಸರು ಬಂಧಿಸಿದ್ದಾರೆ. ಮೈಸೂರು ಬಳಿ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ರಾಷ್ಟ್ರಕವಿ ಕುವೆಂಪುರವರಿಗೆ ರೋಹಿತ್ ಚಕ್ರತೀರ್ಥರವರು ಅಪಮಾನ ಆರೋಪ ಪ್ರಕರಣ: ಆದಿಚುಂಚನಗಿರಿ ಶ್ರೀಗಳನ್ನ ಭೇಟಿ ಮಾಡಿದ ಶಿಕ್ಷಣ ಇಲಾಖೆ ಅಧಿಕಾರಿಗಳು

ಇದನ್ನೂ ಓದಿ
Image
Airtel vs Jio: ಏರ್ಟೆಲ್​​ನಿಂದ ಹೊಸ ಆಲ್-ಇನ್-ಒನ್ ಬ್ರಾಡ್‌ಬ್ಯಾಂಡ್‌ ಯೋಜನೆ: ಜಿಯೋ-ಏರ್ಟೆಲ್​ ಪ್ಲಾನ್​ನಲ್ಲಿ ಯಾವುದು ಬೆಸ್ಟ್?
Image
Viral Video: ಕಡಲತೀರದ ಬಂಡೆಯ ಮೇಲೆ ವಿಮಾನದ ರೆಕ್ಕೆಯಲ್ಲಿ ನಡೆಯುವ ಛಾಯಗ್ರಾಹಕನ ಸಾಹಸದ ವಿಡಿಯೋ ವೈರಲ್
Image
Hanuman Birth Place: ಕರ್ನಾಟಕದ ಅಂಜನಾದ್ರಿ ಬೆಟ್ಟವೇ ಹನುಮನ ಜನ್ಮಸ್ಥಳ ಗೋವಿಂದಾನಂದ ಸ್ವಾಮೀಜಿ ಹೇಳಿಕೆ
Image
Petrol Pump Owners Strike: ತೈಲ ಮಾರ್ಕೆಟಿಂಗ್ ಕಂಪೆನಿಯಿಂದ ಮೇ 31ಕ್ಕೆ ಪೆಟ್ರೋಲ್ -ಡೀಸೆಲ್ ಖರೀದಿಸಲ್ಲ; ಏಕೆ, ಏನು ಎಂಬ ಮಾಹಿತಿ ಇಲ್ಲಿದೆ

ಪ್ರೀತಿ ನಿರಾಕರಿಸಿದ್ದಕ್ಕೆ ಆ್ಯಸಿಡ್ ದಾಳಿ: ಈ ಹಿಂದೆ ನಗರದ ಸುಂಕದಕಟ್ಟೆಯಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆದಿತ್ತು. ಪ್ರೀತಿ ನಿರಾಕರಿಸಿದ್ದಕ್ಕೆ ಆರೋಪಿ ನಾಗೇಶ್ ಈ ಕೃತ್ಯ ಎಸಗಿದ್ದ. ಆ್ಯಸಿಡ್ ದಾಳಿ ನಡೆಸಿ ಸುಮಾರು 15 ದಿನಗಳ ಕಾಲ ನಾಪತ್ತೆಯಾಗಿದ್ದ. ಪೊಲೀಸರ ನಿರಂತರ ಕಾರ್ಯಚರಣೆಯಿಂದ ಆರೋಪಿಯನ್ನು ಬಂಧಿಸಿದ್ದರು.

ಇನ್ನೂ ಆ್ಯಸಿಡ್ ದಾಳಿಗೆ ಒಳಗಾದ ಯುವತಿ ಪರಿಸ್ಥಿತಿ ಒಂದೊಂದು ದಿನ ಒಂದೊಂದು ರೀತಿಯಲ್ಲಿದೆ. ಹಾಸ್ಪಿಟಲ್ನಲ್ಲಿ ಸಾವು- ಬದುಕಿನ ನಡುವೆ ಹೋರಾಟ ಮಾಡ್ತಿದ್ದಾಳೆ. ಆ್ಯಸಿಡ್ ಯುವತಿಯ ಮೇಲೆ ಶೇಕಡಾ 1/3rd (36%) ರಷ್ಟು ಶರೀರದ ಮೇಲೆ ಡೀಪ್ ಅಟ್ಯಾಕ್ ಆಗಿರುವುದರಿಂದಾಗಿ ಯುವತಿಗೆ ಸರ್ಜರಿ ಮಾಡುವಾಗ ಇನ್ಫೆಕ್ಷನ್ ಕಂಡು ಬರುತ್ತಿದೆ. ಅದರಿಂದಾಗಿ ಯುವತಿಯ ಪೋಷಕರ ಆತಂಕಕ್ಕೆ ಕಾರಣವಾಗುತ್ತಿದೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:46 pm, Tue, 31 May 22