ಬೆಂಗಳೂರು: ಉಕ್ರೇನ್ಗೆ (Ukraine) ವಿದ್ಯಾಭ್ಯಾಸಕ್ಕೆಂದು ತೆರಳಿದ್ದ ನವೀನ್ ರಷ್ಯಾ ದಾಳಿಗೆ ಬಲಿಯಾಗಿದ್ದಾರೆ. ಕನ್ನಡಿಗ ನವೀನ್ ಕುಟುಂಬಕ್ಕೆ ಪರಿಹಾರ ನೀಡುತ್ತೇವೆ ಅಂತ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದ್ದಾರೆ. ನವೀನ್ ಮೃತದೇಹ ಹೋಲುವ ಕೆಲ ಫೋಟೋ ಬಂದಿದೆ. ನವೀನ್ ಸ್ನೇಹಿತರು ಫೋಟೋಗಳನ್ನು ಕಳುಹಿಸಿದ್ದಾರೆ. ಈ ಬಗ್ಗೆ ಭಾರತದ ರಾಯಭಾರ ಕಚೇರಿ ಜತೆ ಚರ್ಚೆ ಮಾಡುತ್ತೇನೆ. ಮೃತದೇಹವನ್ನು ಭಾರತಕ್ಕೆ ತರಲು ಪ್ರಯತ್ನಿಸುತ್ತೇವೆ. ಯುದ್ಧ ನಡೆಯುತ್ತಿರುವ ಹಿನ್ನೆಲೆ ಸ್ವಲ್ಪ ಕಷ್ಟವಾಗುತ್ತಿದೆ ಅಂತ ಬೊಮ್ಮಾಯಿ ತಿಳಿಸಿದರು.
ಯುದ್ಧ ನೆಲೆಯಿಂದ ಕನ್ನಡಿಗರನ್ನು ಕರೆತರುತ್ತೇವೆ ಎಂದು ಬೆಂಗಳೂರಿನಲ್ಲಿ ಮಾತನಾಡಿದ ಬೊಮ್ಮಾಯಿ, ನವೀನ್ ಜತೆಗಿದ್ದ ಸ್ನೇಹಿತರ ಮಾಹಿತಿ ಕಲೆಹಾಕುತ್ತಿದ್ದೇವೆ. ಇಂತಹ ವಿಚಾರದಲ್ಲೂ ರಾಜಕೀಯ ಮಾಡಬಾರದು. ಯುದ್ಧದ ಸಮಯದಲ್ಲಿ ಕಾಂಗ್ರೆಸ್ ರಾಜಕಾರಣ ಮಾತನಾಡುತ್ತದೆ. ಅಂದರೆ ಕಾಂಗ್ರೆಸ್ ಎಷ್ಟು ತಳ ಮಟ್ಟಕ್ಕೆ ಹೋಗಿದೆ ಅನ್ನೋದು ಗೊತ್ತಾಗುತ್ತದೆ. ಈ ಹಿಂದೆ ಯುದ್ಧ ನಡೆದಾಗ ಒಬ್ಬರನ್ನು ಕರೆತರಲಿಲ್ಲ. ಈಗ ರಾಜಕಾರಣ ಮತನಾಡುತ್ತಿದ್ದಾರೆ ಅಂತ ಹೇಳಿದರು.
ಮೃತ ನವೀನ್ ಪಾರ್ಥಿವ ಶರೀರವನ್ನ ಭಾರತಕ್ಕೆ ತರುವ ಕೆಲಸ ಅಷ್ಟು ಸುಲಭವಲ್ಲ. ಯುದ್ಧದ ವಾತಾವರಣ ಸಂದರ್ಭದಲ್ಲಿ ಪಾರ್ಥಿವ ಶರೀರ ಹಸ್ತಾಂತರ ಮಾಡಲು ಕಷ್ಟ. ಪ್ರಯತ್ನಪಟ್ಟರೆ ಪಾರ್ಥಿವ ಶರೀರ ತರಬಹುದು ಅಂತ ಮೇಜರ್ ರಘುರಾಮ್ ಹೇಳಿದ್ದಾರೆ.
ನವೀನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ:
ನವೀನ್ ಓದಿದ ನಂಜನಗೂಡಿನ ಯೂನಿಟಿ ಕಾಲೇಜಿನಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಕಾಲೇಜಿನ ಅಧ್ಯಾಪಕರು, ವಿದ್ಯಾರ್ಥಿಗಳಿಂದ ನವೀನ್ಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಇದನ್ನೂ ಓದಿ
ದ್ವಿತೀಯ ಪಿಯು ಪರೀಕ್ಷೆ ವೇಳೆಯೇ JEE ಮುಖ್ಯ ಪರೀಕ್ಷೆ! ಸಂಕಷ್ಟಕ್ಕೆ ಸಿಲುಕಿದ ಕರ್ನಾಟಕ ವಿದ್ಯಾರ್ಥಿಗಳು
‘ನಾನು ಪ್ಯಾನ್ ಇಂಡಿಯಾ ನಟಿ ಆಗಬೇಕು’; ರಶ್ಮಿಕಾ ಮಂದಣ್ಣ ಹೀಗೆ ಹೇಳಲು ಇದೆ ಒಂದು ಮುಖ್ಯ ಕಾರಣ
Published On - 11:15 am, Wed, 2 March 22