BS Yediyurappa: ಸಿಎಂ ಹುದ್ದೆಗೆ ರಾಜೀನಾಮೆ? ಸುಳಿವು ನೀಡಿದ ಬಿಎಸ್ ಯಡಿಯೂರಪ್ಪ

| Updated By: sandhya thejappa

Updated on: Jul 22, 2021 | 1:56 PM

BS Yediyurappa Resign: ಮಠಾಧೀಶರಿಗೆ ಕೈ ಮುಗಿದು ತನಗೆ ಕೊಟ್ಟ ಪ್ರೀತಿಗೆ ಚಿರ ಋಣಿ. ನನ್ನ ಮುಂದಿರುವ ದಾರಿ ಪಕ್ಷ ಬಲಪಡಿಸಿ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು. ಅದಕ್ಕಾಗಿ ಹಗಲು ರಾತ್ರಿ ಕೆಲಸ ಮಾಡುತ್ತೇನೆ. ಎಲ್ಲರೂ ಸಹಕರಿಸಿ.

BS Yediyurappa: ಸಿಎಂ ಹುದ್ದೆಗೆ ರಾಜೀನಾಮೆ? ಸುಳಿವು ನೀಡಿದ ಬಿಎಸ್ ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ
Follow us on

CM BS yediyurappa – ಬೆಂಗಳೂರು: ಮೊದಲ ಬಾರಿಗೆ ಅಧಿಕಾರದಿಂದ ಇಳಿಯುವ ಸುಳಿವನ್ನು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೀಡಿದ್ದಾರೆ. ಇಂದು (ಜುಲೈ 22) ಬೆಂಗಳೂರು ಸಮೀಪ ಕಾಚರಕನಹಳ್ಳಿಯಲ್ಲಿ ನಡೆದ ಧನ್ವಂತರಿ ಹೋಮದಲ್ಲಿ ಪಾಲ್ಗೊಂಡ ಬಿ.ಎಸ್​.ಯಡಿಯೂರಪ್ಪ ಪೂಜೆ ಮುಗಿಸಿ ಹೊರಬಂದು, ದೊಡ್ಡ ಘೋಷಣೆ ಮಾಡಿದರು. ಈ ತಿಂಗಳು 25 ರಂದು ಹೈಕಮಾಂಡ್​ನಿಂದ ಸೂಚನೆ ಬರುತ್ತೆ. ಅದರ ಆಧಾರದ ಮೇಲೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ಮಠಾಧೀಶರಿಗೆ ಕೈ ಮುಗಿದು,  ಕೊಟ್ಟ ಪ್ರೀತಿಗೆ ಚಿರ ಋಣಿ. ಪಕ್ಷ ಬಲಪಡಿಸಿ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದು ನನ್ನ ಮುಂದಿರುವ ದಾರಿ. ಅದಕ್ಕಾಗಿ ಹಗಲು ರಾತ್ರಿ ಕೆಲಸ ಮಾಡುತ್ತೇನೆ. ಎಲ್ಲರೂ ಸಹಕರಿಸಿ ಎಂದು ಯಡಿಯೂರಪ್ಪ ಮನವಿ ಮಾಡಿದರು.

ನನ್ನ ಪರವಾಗಿ ಹೇಳಿಕೆ, ಹೋರಾಟ, ಯಾವುದನ್ನೂ ಮಾಡಬೇಡಿ ಎಂದು ಸಿಎಮ್​ ಕೋರಿದರು. ಭೈರತಿ ಬಸವರಾಜ್​ ಮತ್ತು ಬಿ.ಸಿ.ಪಾಟೀಲ್​ ಅವರ ಮಧ್ಯೆ ನಿಂತು ತಮ್ಮ ರಾಜಕೀಯ ಹೋರಾಟದ ನೀಲಿ ನಕ್ಷೆಯನ್ನು ಒಂದೇ ನಿಮಿಷದಲ್ಲಿ ಹೇಳಿ ಯಡಿಯೂರಪ್ಪ ಅಲ್ಲಿಂದ ನಿರ್ಗಮಿಸಿದರು. ಅವರ ಮಾತಿನ ಧ್ವನಿ ಹೇಗಿತ್ತು ಎಂದರೆ, 26 ಕ್ಕೆ ಅವರ ಸರಕಾರಕ್ಕೆ ಎರಡು ವರ್ಷ ತುಂಬುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಆ ನಂತರ ಅವರು ಪ್ರಾಯಶಃ ಮುಖ್ಯಮಂತ್ರಿ ಹುದ್ದೆಯಿಂದ ಇಳಿಯುವಂತೆ ಕಾಣುತ್ತಿದೆ. ಅವರ ಧ್ವನಿ ಈ ಕುರಿತಾಗಿ ಸ್ಪಷ್ಟವಾಗಿತ್ತು.

ಇದರೊಂದಿಗೆ ಎರಡು ತಿಂಗಳುಗಳಿಂದ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿದ್ದ ಅನಿಶ್ಚಿತತೆಗೆ ಒಂದು ತೆರೆ ಬೀಳುವ ಸಾಧ್ಯತೆ. ಇದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಈಗ ಮುಂದಿನ ನಾಯಕರು ಯಾರು ಎನ್ನುವ ಪ್ರಶ್ನೆ ಇದ್ದರೂ, ಯಾವ ನಾಯಕರೂ ದೆಹಲಿಗೆ ಹೋಗಿ ತಮಗೆ ಅಧಿಕಾರ ನೀಡಿ ಎಂದು ಹೇಳುವ ಸ್ಥಿತಿಯಲ್ಲಿ ಇಲ್ಲ.

ಈಗಾಗಲೇ ದೆಹಲಿಯ ನಾಯಕರು ಮುಂದಿನ ನಾಯಕ ಯಾರು ಎಂಬುದನ್ನು ಆಯ್ಕೆ ಮಾಡಿರುವ ಹಾಗೆ ಕಾಣುತ್ತಿದೆ.

Published On - 10:47 am, Thu, 22 July 21