CM Ibrahim: ದೇವೇಗೌಡ-ಕುಮಾರಸ್ವಾಮಿ ಜೊತೆ ಚರ್ಚೆ ಫಲಪ್ರದ, ಮಾತುಕತೆಯಿಂದ ಸಂತೋಷವಾಗಿದೆ ಎಂದ ಸಿ ಎಂ ಇಬ್ರಾಹಿಂ

| Updated By: ಸಾಧು ಶ್ರೀನಾಥ್​

Updated on: Mar 12, 2022 | 8:37 PM

HD Deve gowda: ನಾಳೆ ನಮ್ಮ ಸಮಾಜದ ಗುರುಗಳು ಮತ್ತು ಕೆಲವು ಪೀಠಾಧಿಪತಿಗಳ ಜೊತೆ ಚರ್ಚೆ ಮಾಡುವುದು ಇದೆ. ಅವರ ಜೊತೆ ಚರ್ಚೆ ಮಾಡಿ ಮುಂದಿನ ನಡೆ ಬಗ್ಗೆ ತೀರ್ಮಾನ ಮಾಡುತ್ತೇನೆ. ನಮ್ಮ ಸಮಾಜದ ಗುರುಗಳ ಅಪ್ಪಣೆ ಪಡೆಯಬೇಕಾಗುತ್ತದೆ. ಯಾವಾಗ ಜಾತ್ಯಾತೀತ ಜನತಾದಳ ಸೇರ್ಪಡೆ ಎಂಬ ಬಗ್ಗೆ ಇವತ್ತು ಚರ್ಚೆ ಮಾಡಿದ್ದೇವೆ -ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ

CM Ibrahim: ದೇವೇಗೌಡ-ಕುಮಾರಸ್ವಾಮಿ ಜೊತೆ ಚರ್ಚೆ ಫಲಪ್ರದ, ಮಾತುಕತೆಯಿಂದ ಸಂತೋಷವಾಗಿದೆ ಎಂದ ಸಿ ಎಂ ಇಬ್ರಾಹಿಂ
ದೇವೇಗೌಡ-ಕುಮಾರಸ್ವಾಮಿ ಜೊತೆಗಿನ ಚರ್ಚೆ ಫಲಪ್ರದ, ಮಾತುಕತೆಯಿಂದ ಸಂತೋಷವಾಗಿದೆ ಎಂದ ಸಿ ಎಂ ಇಬ್ರಾಹಿಂ
Follow us on

ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ (JDS) ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರ (HD Deve gowda) ಜೊತೆ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರ ಜೊತೆ ಫಲಪ್ರದ ಚರ್ಚೆ ಮಾಡಿದ್ದೇನೆ. ಮಾತುಕತೆಯಿಂದ ನಾನು ಸಂತೋಷವಾಗಿದ್ದೇನೆ ಎಂದು ಇಂದು ಮಧ್ಯಾಹ್ನ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಸಿ.ಎಂ. ಇಬ್ರಾಹಿಂ (MLC CM Ibrahim) ಹೇಳಿದ್ದಾರೆ. ದೇವೇಗೌಡ ಮತ್ತು ಕುಮಾರಸ್ವಾಮಿ (HD Kumaraswamy) ಜೊತೆ ಪದ್ಮನಾಭನಗರ ನಿವಾಸದಲ್ಲಿ ಚರ್ಚೆ ನಡೆಸಿದ ಬಳಿಕ ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಈ ಹೇಳಿಕೆ ನೀಡಿದ್ದಾರೆ.

ನಾಳೆ ನಮ್ಮ ಸಮಾಜದ ಗುರುಗಳು ಮತ್ತು ಕೆಲವು ಪೀಠಾಧಿಪತಿಗಳ ಜೊತೆ ಚರ್ಚೆ ಮಾಡುವುದು ಇದೆ. ಅವರ ಜೊತೆ ಚರ್ಚೆ ಮಾಡಿ ಮುಂದಿನ ನಡೆ ಬಗ್ಗೆ ತೀರ್ಮಾನ ಮಾಡುತ್ತೇನೆ. ನಮ್ಮ ಸಮಾಜದ ಗುರುಗಳ ಅಪ್ಪಣೆ ಪಡೆಯಬೇಕಾಗುತ್ತದೆ. ಯಾವಾಗ ಜಾತ್ಯಾತೀತ ಜನತಾದಳ ಸೇರ್ಪಡೆ ಎಂಬ ಬಗ್ಗೆ ಇವತ್ತು ಚರ್ಚೆ ಮಾಡಿದ್ದೇವೆ. ಸುತ್ತೂರು ಶ್ರೀ ಮತ್ತು ಇತರ ಕೆಲವು ಸ್ವಾಮೀಜಿಗಳ ಜೊತೆ ಚರ್ಚೆ ಮಾಡುತ್ತೇನೆ. ಅವರ ಜೊತೆ ಎಲ್ಲಾ ಚರ್ಚೆ ಮಾಡಿದ ಬಳಿಕ ಸೇರ್ಪಡೆ ದಿನಾಂಕ ನಿಗದಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಅದಕ್ಕೂ ಮೊದಲು ಜೆಡಿಎಸ್ ವರಿಷ್ಠ ಹೆಚ್‌ಡಿ ದೇವೇಗೌಡ ಮತ್ತು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರುಗಳನ್ನು ಬೆಂಗಳೂರಿನ ಪದ್ಮನಾಭನಗರದ ಹೆಚ್‌ಡಿಡಿ ನಿವಾಸದಲ್ಲಿ ಸಿ.ಎಂ.ಇಬ್ರಾಹಿಂ ಭೇಟಿಯಾದರು. ಇಂದು ಮಧ್ಯಾಹ್ನವಷ್ಟೇ ಕಾಂಗ್ರೆಸ್ ತೊರೆಯುವ ಬಗ್ಗೆ ಘೋಷಣೆ ಮಾಡಿದ್ದ ಇಬ್ರಾಹಿಂ ಜೆಡಿಎಸ್ ಸೇರ್ಪಡೆ ವಿಚಾರವಾಗಿ ದೇವೇಗೌಡರ ಜೊತೆ ಮಾತುಕತೆ ಸಲುವಾಗಿ ಭೇಟಿಯಾಗಿದ್ದರು.

C.M. Ibrahim : ಜೆಡಿಎಸ್ ಸೇರ್ಪಡೆ ವಿಚಾರ ಖಚಿತಪಡಿಸಿದ ಸಿ.ಎಂ.ಇಬ್ರಾಹಿಂ

Published On - 8:16 pm, Sat, 12 March 22