ಸಿಎಂ ಯಂಗ್ ಇದ್ದಾರೆ ಅದಕ್ಕೆ ನಡೆದುಕೊಂಡು ಹೋದ್ರು, ನಿಮಗೆ ಸ್ವಲ್ಪ ವಯಸ್ಸಾಗಿದೆ ಅದಕ್ಕೆ ಬೋಟ್ ನಲ್ಲಿ ಹೋದ್ರಿ -ಸಿದ್ದು ಕಾಲೆಳೆದ ಲಿಂಬಾವಳಿ
ಪ್ಟೆಂಬರ್ 8ರಂದು ಮಹದೇವಪುರ ಕ್ಷೇತ್ರದ ವ್ಯಾಪ್ತಿಯ ಎಪ್ಸಿಲಾನ್ ಲೇಔಟ್ಗೆ ಭೇಟಿ ನೀಡಿದ್ದೆ. ಎಪ್ಸಿಲಾನ್ ಲೇಔಟ್ಗೆ ದಿನ ನಿತ್ಯ ಓಡಾಡುತ್ತಿದ್ದ ರಸ್ತೆಯಲ್ಲಿ ಬೋಟ್ನಲ್ಲಿ ಹೋಗಿದ್ದೆ ಎಂದು ಸಿದ್ದರಾಮಯ್ಯ ಕಲಾಪದಲ್ಲಿ ಪ್ರಸ್ತಾಪಿಸಿದ್ರು.
ಬೆಂಗಳೂರು: ಕೇಂದ್ರ ಹವಾಮಾನ ಇಲಾಖೆ ಅಧಿಕ ಮಳೆಯಾಗಲಿದೆ ಎಂದು ಸಂದೇಶ ನೀಡಿದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಮುಂಜಾಗ್ರತಾ ಕ್ರಮಕೈಗೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ರು.
ಮಳೆ, ಪ್ರವಾಹದಿಂದ ಹಾನಿಯಾದವರಿಗೆ ಪರಿಹಾರ ನೀಡಬೇಕು. ರಾಜ್ಯದಲ್ಲಿ ಆಗಿರುವ ನಷ್ಟದ ಬಗ್ಗೆ ಕೇಂದ್ರಕ್ಕೆ ವರದಿ ನೀಡಬೇಕು. ಆರ್ಥಿಕ ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಒಣ ಬರ, ಹಸಿ ಬರದ ಬಗ್ಗೆ ಸದನದಲ್ಲಿ ಸಿದ್ದರಾಮಯ್ಯ ವಿವರಿಸಿದ್ರು.
ಈ ವೇಳೆ ಸಿದ್ದರಾಮಯ್ಯ, ಸೆಪ್ಟೆಂಬರ್ 8ರಂದು ಮಹದೇವಪುರ ಕ್ಷೇತ್ರದ ವ್ಯಾಪ್ತಿಯ ಎಪ್ಸಿಲಾನ್ ಲೇಔಟ್ಗೆ ಭೇಟಿ ನೀಡಿದ್ದೆ. ಎಪ್ಸಿಲಾನ್ ಲೇಔಟ್ಗೆ ದಿನ ನಿತ್ಯ ಓಡಾಡುತ್ತಿದ್ದ ರಸ್ತೆಯಲ್ಲಿ ಬೋಟ್ನಲ್ಲಿ ಹೋಗಿದ್ದೆ ಎಂದು ಸಿದ್ದರಾಮಯ್ಯ ಕಲಾಪದಲ್ಲಿ ಪ್ರಸ್ತಾಪಿಸಿದ್ರು. ಈ ವೇಳೆ ಮಹದೇವಪುರ ಕ್ಷೇತ್ರದ ಶಾಸಕ ಮಧ್ಯಪ್ರದೇಶಿಸಿ, ನಿಮ್ಮನ್ನು ದಾರಿ ತಪ್ಪಿಸಿದ್ದಾರೆ. ಅಲ್ಲಿಗೆ ಹೋಗಲು ಬೇರೆ ರಸ್ತೆ ಇತ್ತು ಎಂದರು. ಸಿಎಂ ಇನ್ನೂ ಯಂಗ್ ಇದ್ದಾರೆ ಅದಕ್ಕೆ ನಡೆದುಕೊಂಡು ಹೋದರು, ನಿಮಗೆ ಸ್ವಲ್ಪ ವಯಸ್ಸಾಗಿದೆಯಲ್ವಾ ಅದಕ್ಕೆ ಬೋಟ್ ನಲ್ಲಿ ಕರೆದುಕೊಂಡು ಹೋದರು ಎಂದು ಲಿಂಬಾವಳಿ ಸಿದ್ದು ಕಾಲೆಳೆದ್ರು.
ಈ ವೇಳೆ ಮಧ್ಯಪ್ರವೇಶಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಕೇವಲ ಒಂದೂವರೆ ಅಡಿ ನೀರಿನಲ್ಲಿ ಬೋಟ್ ಕರೆದೊಯ್ದ ಪುಣ್ಯಾತ್ಮ ಯಾರು ಎಂದು ಪ್ರಶ್ನಿಸಿದರು. ಸಿಎಂ ಬೊಮ್ಮಾಯಿ ಮಾತಿಗೆ ಕೃಷ್ಣ ಭೈರೇಗೌಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ರು. ವಿಪಕ್ಷ ನಾಯಕರು ಭೇಟಿ ನೀಡಿದ್ದಾಗ 7-8 ಅಡಿ ನೀರು ನಿಂತಿತ್ತು. ಹಾಗಾಗಿ NDRF ಬೋಟ್ನಲ್ಲಿ ತೆರಳಿದ್ದರು ಎಂದು ಕೃಷ್ಣ ಭೈರೇಗೌಡ ಸಿಎಂಗೆ ಕೌಂಟರ್ ಕೊಟ್ಟರು. ಜನರ ಬಳಕೆಗಾಗಿ ಬೋಟ್ ಇಟ್ಟಿದ್ದೆವು ಎಂದು ಸಿಎಂ ಹೇಳಿದಂತೆ ಕೇವಲ ಒಂದೂವರೆ ಅಡಿಗಿಂತ ನೀರು ಹೆಚ್ಚಿತ್ತು. ಸುಮಾರು 4-5 ಅಡಿ ನೀರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ವಾದಕ್ಕಿಳಿದರು. ಭೇಟಿ ವೇಳೆ ಮನೆಗಳು, ಕಾರುಗಳು ಮುಳುಗಿದನ್ನು ಗಮನಿಸಿದೆ. ಕಾರು ಮುಳುಗಿದೆ ಎಂದರೆ ಸುಮಾರು 5 ಅಡಿ ನೀರು ಇರಬೇಕು. ಸಾಮಾನ್ಯಜ್ಞಾನ ಇರುವವರಿಗೆ ಇದು ಅರ್ಥವಾಗುತ್ತೆ. ಕೆಲವು ಸಲ ಕಣ್ಣಿಗೆ ಆಳ ಗೊತ್ತಾಗಲ್ಲ, ಸಿಎಂ ಎಪ್ಸಿಲಾನ್ಗೆ ಹೋಗಿಲ್ಲ. ರೈವ್ಬೋ ಡ್ರೈವ್ ಲೇಔಟ್ಗೆ ಹೋಗಿರಬೇಕು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ರು.
Published On - 2:00 pm, Tue, 13 September 22