ಅಧಿಕಾರಿಗಳ ಜತೆ ಸಿಎಂ ಸಭೆ: 5 ಗ್ಯಾರೆಂಟಿ ಜಾರಿಗೆಗೆ ತಗಲುವ​ ಖರ್ಚು-ವೆಚ್ಚ ಲೆಕ್ಕ ಪಡೆದ ಸಿದ್ದರಾಮಯ್ಯ

|

Updated on: May 29, 2023 | 1:42 PM

ಐದು ಗ್ಯಾರೆಂಟಿ ಯೋಜನೆಗಳ ಜಾರಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಮೇ.29) ಆಹಾರ ಇಲಾಖೆ, ಕೌಶಲ್ಯಾಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರಿಗೆ ಇಲಾಖೆ, ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.

ಅಧಿಕಾರಿಗಳ ಜತೆ ಸಿಎಂ ಸಭೆ: 5 ಗ್ಯಾರೆಂಟಿ ಜಾರಿಗೆಗೆ ತಗಲುವ​ ಖರ್ಚು-ವೆಚ್ಚ ಲೆಕ್ಕ ಪಡೆದ ಸಿದ್ದರಾಮಯ್ಯ
ಸಿದ್ದರಾಮಯ್ಯ ಸಭೆ
Follow us on

ಬೆಂಗಳೂರು: ಐದು ಗ್ಯಾರೆಂಟಿ ಯೋಜನೆಗಳ ಜಾರಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramiah) ಅವರು ಇಂದು (ಮೇ.29) ಆಹಾರ ಇಲಾಖೆ, ಕೌಶಲ್ಯಾಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರಿಗೆ ಇಲಾಖೆ, ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪ್ರಮುಖವಾಗಿ 200 ಯೂನಿಟ್ ಉಚಿತ ವಿದ್ಯುತ್ (Free Electricity) ಜಾರಿ ಬಗ್ಗೆ ಅಧಿಕಾರಿಗಳಿಂದ ಸಿಎಂ ಸಿದ್ದರಾಮಯ್ಯ ಮಾಹಿತಿ ಪಡೆದಿದ್ದಾರೆ. ಈ ಬಗ್ಗೆ ವಿಸ್ತೃತವಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯಗೆ ಅಧಿಕಾರಿಗಳಿಂದ ಮಾಹಿತಿ

ಉಚಿತ ವಿದ್ಯುತ್​ ಯೋಜನೆಯಿಂದ 2.14 ಕೋಟಿ ಕುಟುಂಬಗಳಿಗೆ ಅನುಕೂಲವಾಗಿದೆ. ವಾರ್ಷಿಕ ಬಳಕೆಗೆ ಅಂದಾಜು 13,575 ಮಿಲಿಯನ್ ಯೂನಿಟ್ ಬೇಕು. ಈ ಯೋಜನೆಗೆ ಇಂಧನ ಶುಲ್ಕ ಅಂದಾಜು 8,008 ಕೋಟಿ ರೂ. ತಗಲುತ್ತದೆ. ಯೋಜನೆಗೆ ಒಟ್ಟು 12,038 ಕೋಟಿ ರೂಪಾಯಿ ಅಗತ್ಯವಿದೆ ಎಂದು ಮಾಹಿತಿ ನೀಡಿದ್ದಾರೆ.

200 ಯೂನಿಟ್ ಉಚಿತ ವಿದ್ಯುತ್ ಬಗ್ಗೆ ಕೆಇಆರ್‌ಸಿ ಮಾಜಿ ಸದಸ್ಯ ಕಳವಳ

ಇನ್ನು 200 ಯೂನಿಟ್ ಉಚಿತ ವಿದ್ಯುತ್ ಬಗ್ಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) ಮಾಜಿ ಸದಸ್ಯ ಪ್ರಭಾಕರ್ ಮಾತನಾಡಿ ಕರ್ನಾಟಕದಲ್ಲಿ ಗೃಹ ಬಳಕೆಗೆ ವಿದ್ಯುತ್​ ಉಪಯೋಗ ಮಾಡುವವರು 1 ಕೋಟಿ 97 ಲಕ್ಷ ಜನ ಇದ್ದಾರೆ. 200 ಯೂನಿಟ್ ಕೊಟ್ಟರೇ ತಿಂಗಳಿಗೆ 3800 ಮಿಲಿಯನ್‌ ಯೂನಿಟ್ ಬೇಕು. 3,509 ಕೋಟಿ ರೂ. ಒಂದು ತಿಂಗಳಿಗೆ ಬೇಕು. ವರ್ಷಕ್ಕೆ 40, 400 ಕೋಟಿ ಬೇಕು ಎಂದು ಟಿವಿ9ಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಸಚಿವ ಸ್ಥಾನ ಕೈತಪ್ಪಿದ ಬೆನ್ನಲ್ಲೇ ಲಕ್ಷ್ಮಣ ಸವದಿ ಮೊದಲ ಪ್ರತಿಕ್ರಿಯೆಯಲ್ಲಿ ಹೇಳಿದ್ದಿಷ್ಟು

ಸುಮಾರು 50ರಷ್ಟು ಜನರು 100 ಯೂನಿಟ್ ಕಡಿಮೆ ಬಳಸುವವರಿದ್ದಾರೆ. ಕೃಷಿ ಇಲಾಖೆಯ ಪಂಪ್‌ಸೆಟ್‌ಗೆ ವರ್ಷಕ್ಕೆ 14 ಸಾವಿರ ಕೋಟಿ ಬೇಕು. ಉಚಿತ ಹಿನ್ನೆಲೆಯಲ್ಲಿ ವಿದ್ಯುತ್ ಬಳಕೆದಾರರು ಇನ್ನಷ್ಟು ಹೆಚ್ಚಿಗೆ ಮಾಡಲಿದ್ದಾರೆ. ಗ್ಯಾಸ್ ಬದಲಾಗಿ ವಿದ್ಯುತ್ ಚಾಲಿತ ಒಲೆಗಳು ಹೆಚ್ಚಾಗಿ ಬಳಸಲಿದ್ದಾರೆ. ಇದರಿಂದ ಸರ್ಕಾರದ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇರುತ್ತೆ. ಒಟ್ಟಾರೆಯಾಗಿ 5 ಗ್ಯಾರಂಟಿಗಳಿಗೆ ಕಮ್ಮಿ ಅಂತ ಇಟ್ಟಿಕೊಂಡರು 50 ಸಾವಿರ ಕೋಟಿ ರೂ. ಬೇಕು. 5 ವರ್ಷಕ್ಕೆ ಸುಮಾರು 4 ರಿಂದ 5 ಲಕ್ಷ ಕೋಟಿ ರೂ. ಅಗತ್ಯ ಇದೆ ಎಂದರು.

ಸರ್ಕಾರದ ಬೊಗಸೆಯಲ್ಲಿ ಅಷ್ಟೊಂದು ದುಡ್ಡು ಇಲ್ಲ. ಸರ್ಕಾರ ಗ್ಯಾರಂಟಿ ಕಾರ್ಡ್‌ ಜಾರಿಗೆಗೆ ಸಾಲ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:39 pm, Mon, 29 May 23