ಬೆಂಗಳೂರು, ಆಗಸ್ಟ್.01: ಪ್ರತಿ ವರ್ಷ ಮಳೆಗಾಲ ಬಂದ್ರೆ ಸಾಕು ಎಳನೀರಿನ ಬೆಲೆ ತುಂಬ ಕಡಿಮೆ ಆಗುತ್ತಿತ್ತು. ಆದರೆ ಈ ವರ್ಷ ಮಳೆಗಾಲದಲ್ಲಿಯೂ ಎಳನೀರಿನ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಎಳನೀರು (Coconut Water) ಬೆಲೆ ಬೇಸಿಗೆಯಲ್ಲಿ 60 ರಿಂದ 70 ರೂಪಾಯಿ ದಾಟಿತ್ತು. ಆದಾದ ನಂತರ ಮಳೆಗಾಲ ಆರಂಭವಾದ ಮೇಲೆ 45 ರೂಪಾಯಿಗೆ ಇಳಿದಿತ್ತು. ಆದರೆ ಈಗ ಮಳೆಗಾಲವಿದ್ದರೂ 50 ರಿಂದ 60 ರೂಗೆ ಎಳನೀರು ಮಾರಾಟವಾಗುತ್ತಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈ ವರ್ಷದ ಬಿಸಿಲು ಕೊಟ್ಟಂತಹ ಎಫೆಕ್ಟ್ ಒಂದಲ್ಲ ಎರಡಲ್ಲ. ಒಂದು ಕಡೆ ನೀರಿನಿಂದಾಗಿ ಜರನು ಓದ್ದಾಡಿದ್ರೆ, ಮತ್ತೊಂದೆಡೆ ಬೇಸಿಗೆಯಲ್ಲಿ ಬೆಳೆದ ಬೆಳೆಗಳು ನೀರಿಲ್ಲದೇ ಸೊರಗಿ ಹೋದ್ವು. ಬಿಸಿಲಿನ ಬೇಗೆಗೆ ಜನ ಹೈರಾಣಾಗಿದ್ರು. ಇನ್ನು ಬೇಸಿಗೆಯಲ್ಲಿ ನೀರಿಲ್ಲದೆ ಈ ವರ್ಷದ ತೆಂಗಿನ ಫಸಲು ಸರಿಯಾಗಿ ಬಂದಿಲ್ಲ. ಹೀಗಾಗಿ ಸೋನೆ ಮಳೆ ಬಿದ್ರು, ಎಳ ನೀರಿಗೆ ಮಾತ್ರ ಡಿಮ್ಯಾಂಡ್ ಮಾತ್ರ ಕಡಿಮೆಯಾಗಿಲ್ಲ. ಹೀಗಾಗಿ 50, 60 ರೂಪಾಯಿಗೆ ಎಳನೀರು ಮಾರಾಟವಾಗುತ್ತಿದೆ. ಮಳೆಗಾಲದಲ್ಲಿಯೂ ಇಷ್ಟು ಬೆಲೆ ಇರುವುದನ್ನ ಕೇಳಿ ಗ್ರಾಹಕರು ಶಾಕ್ ಆಗ್ತಾ ಇದ್ದಾರೆ. ಪ್ರತಿವರ್ಷ ಮಳೆಗಾಲದಲ್ಲಿ 30 ರಿಂದ 40 ರೂಪಾಯಿ ಇರ್ತಿತ್ತು. ಆದರೆ ಈ ಬೇಸಿಗೆಯಿಂದ ಮಳೆಗಾಲದವರೆಗೂ ಒಂದೇ ಬೆಲೆ ಇದೆ. ಆರೋಗ್ಯದ ದೃಷ್ಟಿಯಿಂದ ಪ್ರತಿದಿನ ಎಳ ನೀರನ್ನ ಕುಡಿಯಲೇಬೇಕು. ಆದರೆ ಇಷ್ಟೊಂದು ಬೆಲೆ ಇದ್ದರೆ ಹೇಗೆ ಎಂದು ಗ್ರಾಹಕ ಗೀತಾರಾಮಚಂದ್ರ ಅವರು ಪ್ರಶ್ನಿಸಿದರು.
ಇದನ್ನೂ ಓದಿ: ಕಡಲ್ಕೊರೆತದಿಂದ ಮಂಗಳೂರು, ಉಡುಪಿಗೆ ಕಾದಿದೆ ಗಂಡಾಂತರ: 2040ಕ್ಕೆ ಶೇ 5ರಷ್ಟು ಭೂಮಿ ಸಮುದ್ರಪಾಲು
ಇನ್ನು, ಮಳೆಗಾಲ ಆರಂಭವಾಗಿರುವ ಹಿನ್ನೆಲೆ ಎಳ ನೀರು ಸರಿಯಾಗಿ ಬರ್ತಿಲ್ಲ. ಸಧ್ಯ ಮಳವಳ್ಳಿ, ಪಾಂಡವಪುರದಿಂದ ಮಾತ್ರ ಎಳ ನೀರು ಪೂರೈಕೆಯಾಗುತ್ತಿದೆ. ರಾಮನಗರ, ಮಂಡ್ಯ, ಮದ್ದೂರಿನಿಂದ ಬರುತ್ತಿದ್ದ ಎಳ ನೀರು ಸ್ಟಾಪ್ ಆಗಿದೆ. ಈ ವರ್ಷದ ಬಿಸಿಲಿನ ಎಫೆಕ್ಟ್ ನಿಂದಾಗಿ ಫಸಲು ಸರಿಯಾಗಿ ಬರ್ಲಿಲ್ಲ. ಹೀಗಾಗಿ ಫಸಲು ಕಡಿಮೆ ಬರುತ್ತಿದ್ದು, ಸಿಟಿಗೆ 30% ರಷ್ಡು ಎಳ ನೀರು ಮಾತ್ರ ಪೂರೈಕೆಯಾಗುತ್ತಿದೆ. ಎಳ ನೀರಿಗೆ ಬೆಲೆ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ದುಬಾರಿಯಾಗುವ ಸಾಧ್ಯತೆ ಇದೆ ಅಂತ ವ್ಯಾಪಾರಸ್ಥರು ಹೇಳ್ತಿದ್ದಾರೆ.
ಒಟ್ನಲ್ಲಿ, ಈ ವರ್ಷದ ಬಿಸಿಲಿನ ಎಫೆಕ್ಟ್ ನಿಂದಾಗಿ ಎಳ ನೀರಿನ ಬೆಲೆ ಏರಿಕೆಯಾಗುತ್ತಲೇ ಇದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ