ಬೆಂಗಳೂರು: ಎಐಸಿಸಿ (AICC) ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi) ಅವರ ವಿರುದ್ಧ ಕರ್ನಾಟಕ ಹೈಕೋರ್ಟ್ (Karnataka High court) ರಿಜಿಸ್ಟ್ರಾರ್ ಜನರಲ್ಗೆ ಗಿರೀಶ್ ಭಾರದ್ವಾಜ್ ಎಂಬುವರು ದೂರು ನೀಡಿದ್ದಾರೆ. ಹೈಕೋರ್ಟ್ ನ್ಯಾಯಮೂರ್ತಿ ಸಂದೇಶ್ ಅವರ ಹೇಳಿಕೆ ವೀಡಿಯೋವನ್ನು ಸಾಮಾಜಿಕ ಜಾಲಾತಣದಲ್ಲಿ (Social Media) ಬಳಸಿದ ಆರೋಪದಡಿ, ಇದು ನ್ಯಾಯಾಂಗ ಉಲ್ಲಂಘನೆ ಎಂದು ಆರೋಪಿಸಿ ಇಂದು (ಜುಲೈ 6) ದೂರು ನೀಡಿದ್ದಾರೆ.