ಬೆಂಗಳೂರು: ಮುಂದಿನ ಸಾರ್ವತ್ರಿಕ ಚುನಾವಣೆಯನ್ನು (general elections 2023) ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಕಾಂಗ್ರೆಸ್ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ. ಈ ಬದಲಾವಣೆಗಳ ಬೆನ್ನಿಗೆ ರಾಜ್ಯ ಕಾಂಗ್ರೆಸ್ ನಲ್ಲಿ ಇನ್ನೊಂದು ಶಕ್ತಿ ಕೇಂದ್ರ ಸ್ಥಾಪಿಸಿತಾ ಹೈಕಮಾಂಡ್? ಎಂಬ ದೊಡ್ಡ ಪ್ರಶ್ನೆ ಎದ್ದಿದೆ. ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರುಗಳ ಬಣ ರಾಜಕೀಯಕ್ಕೆ ಬ್ರೇಕ್ ಹಾಕಲು ಹರಿಪ್ರಸಾದ್ ನೇಮಕಾತಿ ಕರುಣಿಸಿತಾ ಎಂಬ ಅನುಮಾನ ಕಾಡತೊಡಗಿದೆ ಪಕ್ಷದ ಕಾರ್ಯಕರ್ತರಲ್ಲಿ. ಸಿದ್ದರಾಮಯ್ಯ ವರ್ಗಕ್ಕೆ ( siddaramaih) ಸೇರಿರುವ ಹಿಂದುಳಿದ ವರ್ಗದವರಾದ ಹರಿಪ್ರಸಾದ್ ಗೆ ವಿಪಕ್ಷ ನಾಯಕನ ಸ್ಥಾನ ನೀಡುವ ಮೂಲಕ ಸಿದ್ದರಾಮಯ್ಯ ಗೂ ಚೆಕ್ ನೀಡಲಾಗಿದೆ ಮೂಲ ಕಾಂಗ್ರೆಸ್ಸಿಗ ಹಾಗೂ ಹಿರಿತನಕ್ಕೆ ಮಣೆ ಹಾಕುವ ಮೂಲಕ ಡಿ ಕೆ ಶಿವಕುಮಾರ್ ಟೀಮ್ ಗೂ (dk shivakumar) ಸಿಗ್ನಲ್ ನೀಡಿದೆ ಹೈಕಮಾಂಡ್ ಎಂದು ವಿಶ್ಲೇಷಿಸಲಾಗುತ್ತಿದೆ.
ಅಲ್ಲಿಗೆ ರಾಜ್ಯ ಕಾಂಗ್ರೆಸ್ ನಲ್ಲಿ ಮೂಲ ಕಾಂಗ್ರೆಸ್ಸಿಗರು ವಿಚಾರ ಮತ್ತೆ ಗರಿಗೆದರಿ ನಿಂತಂತಿದೆ. ಕಾಂಗ್ರೆಸ್ ನಲ್ಲಿರುವ ಮೂರನೇ ಗುಂಪಿಗೆ ಕೆ ಹೆಚ್ ಮುನಿಯಪ್ಪ, ಬಿ ಕೆ ಹರಿಪ್ರಸಾದ್, ಹೆಚ್ ಕೆ ಪಾಟೀಲ್, ಡಾ ಜಿ ಪರಮೇಶ್ವರ್, ಎಲ್ ಹನುಮಂತಯ್ಯ, ಜಿ ಸಿ ಚಂದ್ರಶೇಖರ್ ಸೇರಿದಂತೆ ಹಿರಿಯ ನಾಯಕರ ತಂಡಕ್ಕೆ ಇದರಿಂದ ಶಕ್ತಿ, ಚೈತನ್ಯ ತುಂಬಿದಂತಾಗಿದೆ. ಈ ಹಿಂದೆ ಹಲವು ಬಾರಿ ರಹಸ್ಯ ಸಭೆಗಳನ್ನ ನಡೆಸಿದ್ದ ಮೂಲ ಕಾಂಗ್ರೆಸ್ಸಿಗರು
ಈಗ ಮರು ಚೈತನ್ಯ ಪಡೆದಂತಾಗಿದ್ದಾರೆ. ಲೋಕಸಭೆ-ವಿಧಾನಸಭಾ ಚುನಾವಣೆಗಳು ಸನಿಹದಲ್ಲೇ ಇರುವಾಗ ಇದು ಇನ್ನಷ್ಟು ಮಹತ್ವ ಪಡೆದುಕೊಳ್ಳುವ ಸಾಧ್ಯತೆಯಿದೆ.
ನುಚ್ಚು ನೂರಾದ ಸಿಎಂ ಇಬ್ರಾಹಿಂ ಕನಸು:
ಸಿದ್ದರಾಮಯ್ಯ ಬೆಂಬಲದೊಂದಿಗೆ ಪರಿಷತ್ ವಿಪಕ್ಷ ನಾಯಕನ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ಸಿಎಂ ಇಬ್ರಾಹಿಂಗೆ ಹೊಸ ಬೆಳವಣಿಗೆ ಮುಳುವಾಗಿದೆ. ಡಿ ಕೆ ಶಿವಕುಮಾರ್ ಬೆಂಬಲದ ನಿರೀಕ್ಷೆಯಲ್ಲಿದ್ದ ಇಬ್ರಾಹಿಂ ಡಲ್ ಹೊಡೆದಿದ್ದಾರೆ. ಬಿಕೆ ಹರಿಪ್ರಸಾದ್ ಹೈಕಮಾಂಡ್ ಸಂಪರ್ಕದ ಮುಂದೆ ಇಬ್ರಾಹಿಂ ಥಂಡಾ ಹೊಡೆದಿದ್ದಾರೆ. ಕಾಂಗ್ರೆಸ್ ನಲ್ಲೇ ಇರ್ತಾರಾ ಅಥವಾ ದಳದತ್ತ ಮುಖ ಮಾಡ್ತಾರಾ ಇಬ್ರಾಹಿಂ ಎಂಬುದು ಸದ್ಯದ ಕುತೂಹಲವಾಗಿದೆ. ಈ ಹಿಂದೆ ಜೆಡಿಎಸ್ ಗೆ ತೆರಳುವ ಬಗ್ಗೆ ಸ್ವತಃ ಇಬ್ರಾಹಿಂ ಅವರೆ ಮಾತನಾಡಿದ್ದರು ಎಂಬುದು ಗಮನಾರ್ಹ. ಕುಮಾರಸ್ವಾಮಿ ಜೊತೆಯೂ ಒಂದು ರೌಂಡ್ ಅನೌಪಚಾರಿಕ ಮಾತುಕತೆ ನಡೆಸಿದ್ದರು ಇಬ್ರಾಹಿಂ. ಆದರೆ ಪರಿಷತ್ ವಿಪಕ್ಷ ನಾಯಕನ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಕಾರಣ ಕಾಂಗ್ರೆಸ್ ನಲ್ಲೇ ಕಾದು ಕುಳಿತಿದ್ದರು ಇಬ್ರಾಹಿಂ. ಈಗೇನು ಮಾಡ್ತಾರೆ ನೋಡಬೇಕಿದೆ.
ಇದನ್ನೂ ಓದಿ:
Congress: ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂ.ಬಿ ಪಾಟೀಲ್ ನೇಮಕ
Published On - 10:20 am, Thu, 27 January 22