ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಮೊಹಮದ್ ನಲಪಾಡ್ ಪೊಲೀಸ್ ವಶಕ್ಕೆ, ದಂಡ ಕಟ್ಟಿಸಿಕೊಂಡು ಬಿಟ್ಟ ಪೊಲೀಸರು

| Updated By: guruganesh bhat

Updated on: Jun 05, 2021 | 9:25 PM

Mohamed Nalapad: ಈ ವೇಳೆ ಆಗಮಿಸಿದ ಪೊಲೀಸರು ಎನ್​ಡಿಎಂ ಕಾಯ್ದೆಯಡಿ ಶಾಸಕ ಎನ್​.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್​ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಳಿಕ ದಂಡ ಕಟ್ಟಿಸಿಕೊಂಡು ಬಿಟ್ಟು ಕಳಿಸಿದರು.

ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಮೊಹಮದ್ ನಲಪಾಡ್ ಪೊಲೀಸ್ ವಶಕ್ಕೆ, ದಂಡ ಕಟ್ಟಿಸಿಕೊಂಡು ಬಿಟ್ಟ ಪೊಲೀಸರು
ಡಿಕೆ ಶಿವಕುಮಾರ್ ‘ಮುಂದಿನ ಮುಖ್ಯಮಂತ್ರಿ’​ ಎಂದು ಬ್ಯಾಟ್​ ಬೀಸಿದ ಮಹಮ್ಮದ್ ನಲಪಾಡ್
Follow us on

ಬೆಂಗಳೂರು: ಕೊರೊನಾ ನಿಯಮ ಉಲ್ಲಂಘಿಸಿ ಪ್ರತಿಭಟನೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಶಾಸಕ ಎನ್​.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್​ರನ್ನು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ. ಒಪೆರಾ ಜಂಕ್ಷನ್​​ನಲ್ಲಿ ಧರಣಿಗೆ ಮುಂದಾಗಿದ್ದ ಮೊಹಮ್ಮದ್ ನಲಪಾಡ್ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.

ಈ ವೇಳೆ ಆಗಮಿಸಿದ ಪೊಲೀಸರು ಎನ್​ಡಿಎಂ ಕಾಯ್ದೆಯಡಿ ಶಾಸಕ ಎನ್​.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್​ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಳಿಕ ದಂಡ ಕಟ್ಟಿಸಿಕೊಂಡು ಬಿಟ್ಟು ಕಳಿಸಿದರು.

ಇನ್ನೂ ಎರಡು ವಾರ ಲಾಕ್​ಡೌನ್ ಮುಂದುವರಿಸಲು ಕಾಂಗ್ರೆಸ್ ನಾಯಕ ಜಿ.ಪರಮೇಶ್ವರ್ ಆಗ್ರಹ
ಕರ್ನಾಟಕದಲ್ಲಿ ಇನ್ನೂ 2 ವಾರ ಲಾಕ್‌ಡೌನ್ ಮುಂದುವರಿಸಬೇಕು ಎಂದು ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್​ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಲಾಕ್‌ಡೌನ್ ಮಾಡಿದರೆ ಕೊರೊನಾ ಚೈನ್ ಬ್ರೇಕ್ ಆಗುತ್ತೆ. ಹೀಗಾಗಿ ಲಾಕ್‌ಡೌನ್ ಮುಂದುವರಿಸಬೇಕು ಎಂದು ಅವರು ಆಗ್ರಹಿಸಿದರು. ರಾಜ್ಯ ಸರ್ಕಾರ ಶ್ರಮಿಕ ವರ್ಗಕ್ಕೆ ಪ್ಯಾಕೇಜ್ ಘೋಷಿಸಿದೆ. ಈ ಪರಿಹಾರದ ಹಣ ಶೀಘ್ರ ಫಲಾನುಭವಿಗಳ ಕೈ ಸೇರಬೇಕು ಎಂದು ಸಲಹೆ ಮಾಡಿದರು.

ಮೈಸೂರಿನಲ್ಲಿ ಐಎಎಸ್ ಅಧಿಕಾರಿಗಳ ಕಿತ್ತಾಟದ ಬಗ್ಗೆ ಪ್ರಸ್ತಾಪಿಸಿದ ಅವರು, ಅಧಿಕಾರಿಗಳು ನಿಯಮಗಳ ಪ್ರಕಾರವೇ ಆಡಳಿತ ನಡೆಡುವಂತೆ ಸರ್ಕಾರ ನಡೆಸುವವರು ನೋಡಿಕೊಳ್ಳಬೇಕು. ಇದಕ್ಕಾಗಿಯೇ ಡಿಪಿಎಆರ್​ ಎಂಬ ಒಂದು ಇಲಾಖೆಯೇ ಇದೆ. ಇಬ್ಬರು ಐಎಎಸ್ ಅಧಿಕಾರಿಗಳು ಕಿತ್ತಾಡುತ್ತಾರೆ ಅಂದರೆ ಯಾಕೆ ಕಿತ್ತಾಡುತ್ತಾರೆ. ಜಿಲ್ಲಾಧಿಕಾರಿ ಅವರ ಮನೆಗೆ ಸ್ವಿಮಿಂಗ್ ಪೂಲ್ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಇದಕ್ಕೆ ಪರ್ಮಿಷನ್ ಯಾರು ಕೊಡೊದು? ಕಾರ್ಪೋರೇಷನ್ ಕೋಡಬೇಕು. ಕಾರ್ಪೋರೇಷನ್ ಮುಖ್ಯಸ್ಥರು ಕೋಡಬೇಕು. ಅಲ್ಲಿ ಸಮನ್ವಯ ಇಲ್ಲದಿದ್ದರೆ ಕಷ್ಟ ಅನುಭವಿಸುವವರು ಯಾರು? ಆಡಳಿತ ಹಿಂದೆ ಬೀಳುತ್ತದೆ. ಜನಗಳು ಕಷ್ಟ ಅನುಭವಿಸುತ್ತಾರೆ ಎಂದು ವಿಶ್ಲೇಷಿಸಿದರು.

ಇಬ್ಬರೂ ಅಧಿಕಾರಿಗಳಿಗೆ ಆಡಳಿತದ ಚುಕ್ಕಾಣಿ ಹಿಡಿದವರು ಎಚ್ಚರಿಕೆ ನೀಡಬೇಕು. ಈ ಕುರಿತು ಮುಖ್ಯಕಾರ್ಯದರ್ಶಿ ಎಚ್ಚರಿಕೆ ನೀಡಬೇಕು. ಇಬ್ಬರಿಗೂ ಸರಿಯಾಗಿ ಕೆಲಸ ಮಾಡಿ ಎಂದು ಸೂಚಿಸಬೇಕು. ಸರ್ಕಾರದ ನಿಯಮದಂತೆ ಅಧಿಕಾರಿಗಳು ನಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.

ಇದನ್ನೂ ಓದಿ:  CET 2021: ಪಿಯು ಪರೀಕ್ಷೆ ರದ್ದುಗೊಂಡರೂ ಸಿಇಟಿ ನಡೆಯಲಿದೆ: ಡಿಸಿಎಂ ಅಶ್ವತ್ಥ್ ನಾರಾಯಣ

ಅಸಂಘಟಿತ ವಲಯದ ಕಾರ್ಮಿಕರ ಬ್ಯಾಂಕ್ ಖಾತೆಗೆ ನೇರ ನಗದು ಜಮೆ ಮಾಡುವುದಕ್ಕೆ ಸಿಎಂ ಯಡಿಯೂರಪ್ಪ ಚಾಲನೆ
(Congress leader Mohamed Nalapad detained for protesting in the street by Bengaluru Police)