‘ಸಿಲಿಕಾನ್ ಸಿಟಿ’ಯನ್ನು ಬಿಜೆಪಿ ‘ಸಿಂಕಿಂಗ್ ಸಿಟಿ’ ಮಾಡಿದೆ: ಜಲಾವೃತಗೊಂಡ ರಸ್ತೆಯಲ್ಲಿ ರಬ್ಬರ್ ಟ್ಯೂಬ್ ಮೇಲೆ ಕೂತು ಪ್ರತಿಭಟನೆ ಮಾಡಿದ ನಲಪಾಡ್
ಸಿಲಿಕಾನ್ ಸಿಟಿ'ಯನ್ನು ಬಿಜೆಪಿ 'ಸಿಂಕಿಂಗ್ ಸಿಟಿ' ಮಾಡಿದೆ. ತೊಲಗಲಿ ತೊಲಗಲಿ, ಬಿಜೆಪಿ ತೊಲಗಲಿ ಎಂದು ಘೋಷಣೆ ಕೂಗುತ್ತ ಪ್ಲಾಸ್ಟಿಕ್ ಟ್ಯೂಬ್ ಮೇಲೆ ಕುಳಿತು ಮೊಹಮ್ಮದ್ ನಲಪಾಡ್ ಪ್ರತಿಭಟನೆ ನಡೆದಿದ್ದಾರೆ.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಮಳೆ ನೀರಿನ ದ್ವೀಪವಾಗಿದೆ(Bengaluru Rain). ನಗರದಲ್ಲಿ ಮಳೆಗೆ ಮನೆಗಳು, ವಾಹನಗಳು ರಸ್ತೆಗಳೆಲ್ಲ ಮುಳುಗಿ ಜನ ಜೀವನವೇ ಅಸ್ತವ್ಯಸ್ತವಾಗಿದೆ. ಮಳೆರಾಯನಿಂದ ಸಿಲಿಕಾನ್ ಸಿಟಿ ಜನ ನಿತ್ಯ ಸಂಕಷ್ಟಗಳನ್ನು ಎದುರಿಸುವಂತಾಗಿದೆ. ಹೀಗಾಗಿ ಸಿಲಿಕಾನ್ ಸಿಟಿಯಲ್ಲಿ ಜಲಾವೃತಗೊಂಡ ರಸ್ತೆಯಲ್ಲಿ ಗಾಳಿ ತುಂಬಿದ ರಬ್ಬರ್ ಟ್ಯೂಬ್ ಮೇಲೆ ಕೂತು ಸಂಚರಿಸುವ ಮೂಲಕ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹ್ಯಾರಿಸ್ ನಲಪಾಡ್(Mohammad Nalpad) ಪ್ರತಿಭಟನೆ ನಡೆಸಿದರು.
‘ಸಿಲಿಕಾನ್ ಸಿಟಿ’ಯನ್ನು ಬಿಜೆಪಿ ‘ಸಿಂಕಿಂಗ್ ಸಿಟಿ’ ಮಾಡಿದೆ. ತೊಲಗಲಿ ತೊಲಗಲಿ, ಬಿಜೆಪಿ ತೊಲಗಲಿ ಎಂದು ಘೋಷಣೆ ಕೂಗುತ್ತ ಪ್ಲಾಸ್ಟಿಕ್ ಟ್ಯೂಬ್ ಮೇಲೆ ಕುಳಿತು ಮೊಹಮ್ಮದ್ ನಲಪಾಡ್ ಪ್ರತಿಭಟನೆ ನಡೆದಿದ್ದಾರೆ. ನಲಪಾಡ್ಗೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಸಾಥ್ ನೀಡಿದರು. ಇದೇ ವೇಳೆ ಪೊಲೀಸರು ನಲಪಾಡ್ ನನ್ನು ವಶಕ್ಕೆ ಪಡೆದು ನಂತರ ಅವರನ್ನು ಬಿಡುಗಡೆ ಮಾಡಿದ್ದಾರೆ. ನಲಪಾಡ್ ರಸ್ತೆಯಲ್ಲಿ ನಡೆಸಿದ ವಿಭಿನ್ನ ಪ್ರತಿಭಟನೆ ದೃಶ್ಯಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
‘ಸಿಲಿಕಾನ್ ಸಿಟಿ’ಯನ್ನು ಬಿಜೆಪಿ ‘ಸಿಂಕಿಂಗ್ ಸಿಟಿ’ ಮಾಡಿದೆ. ಬಿಜೆಪಿ ಸರ್ಕಾರದ ಬೇಜವಾಬ್ದಾರಿತನದ ವಿರುದ್ಧ ಫ್ರೀಡಂ ಪಾರ್ಕ್ನಲ್ಲಿ ಕಾಂಗ್ರೆಸ್ ವತಿಯಿಂದ ನಡೆಸಲಾದ ಪ್ರತಿಭಟನೆಯ ಕ್ಷಣಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. pic.twitter.com/1bVjHbXoT4
— Mohammed Haris Nalapad (@nalapad) September 6, 2022
ಮಳೆ ನೀರಲ್ಲಿ ತೇಲಿದ ಐಷಾರಾಮಿ ಕಾರುಗಳು
ಬೆಂಗಳೂರು ಪ್ರವಾಹ ಪ್ರದೇಶದಂತಾಗಿದೆ. ಮನುಷ್ಯ ಮುಳುಗುವಂತೆ ಎದೆ ಎತ್ತರದಷ್ಟು ನೀರು ಆವರಿಸಿದೆ. ಐಷಾರಾಮಿ ಕಾರುಗಳು ನೀರಿನಲ್ಲಿ ಮುಳುಗಿವೆ. ಸದ್ಯ ಈಗ ಬಹುಕೋಟಿ ಬೆಲೆ ಬಾಳುವ ಬೆಂಟ್ಲಿ ಮತ್ತು ಲೆಕ್ಸಸ್ ಸೇರಿದಂತೆ ಐಷಾರಾಮಿ ಕಾರುಗಳು ಮುಳುಗಿರುವ ವಿಡಿಯೋ ವೈರಲ್ ಆಗಿದೆ. ಲೆಕ್ಸಸ್ NX SUV ಮತ್ತು ಲೆಕ್ಸಸ್ ಸೆಡಾನ್, ಬೆಂಟ್ಲಿ ಬೆಂಟೈಗಾ, ಆಡಿ ಕ್ಯೂ5 ಮತ್ತು ಲ್ಯಾಂಡ್ ರೋವರ್, ವಿಡಬ್ಲ್ಯೂ ಪೊಲೊ ಮತ್ತು ಹೋಂಡಾ ಸಿವಿಕ್ ಸೇರಿದಂತೆ ಅನೇಕ ಕಾರುಗಳು ಮುಳುಗಿವೆ.
ಮಳೆಗೆ ನಗರದ ಬೆಳ್ಳಂದೂರು, ವೈಟ್ ಫೀಲ್ಡ್, ಹೊರ ವರ್ತುಲ ರಸ್ತೆ, ಬಿಇಎಂಎಲ್ ಲೇಔಟ್, ಸರ್ಜಾಪುರ ರಸ್ತೆಗಳಲ್ಲಿ ಹೆಚ್ಚಿನ ಹಾನಿಯಾಗಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರಾಜ್ಯದಲ್ಲಿ ಸೆಪ್ಟೆಂಬರ್ 9 ರವರೆಗೆ ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿದೆ.