ಬೆಂಗಳೂರಿನಲ್ಲಿ ಕಾಂಗ್ರೆಸ್​​ ನಾಯಕರ ಪ್ರತಿಭಟನೆ: ಶಾಂತಿನಗರದ ಅಕ್ಕಪಕ್ಕದ ರಸ್ತೆಗಳಲ್ಲಿ ಫುಲ್​​​​​​​​ ಟ್ರಾಫಿಕ್​​ ಜಾಮ್​​

| Updated By: ವಿವೇಕ ಬಿರಾದಾರ

Updated on: Jun 13, 2022 | 2:16 PM

ಬೆಂಗಳೂರಿನಲ್ಲಿ ಕಾಂಗ್ರೆಸ್​​ ನಾಯಕರು ನಡೆಸುತ್ತಿರುವ ಪ್ರತಿಭಟನೆ ಹಿನ್ನೆಲೆ ಶಾಂತಿನಗರದ ಅಕ್ಕಪಕ್ಕದ ರಸ್ತೆಗಳಲ್ಲಿ ಬೆಳ್ಳಗ್ಗೆ 9 ಗಂಟೆಯಿಂದ ಟ್ರಾಫಿಕ್ ಜಾಮ್​ ಉಂಟಾಗಿದೆ. ಟ್ರಾಫಿಕ್​ ಜಾಮ್​​ನಲ್ಲಿ ಸಿಲುಕಿದ ವಾಹನ ಸವಾರರು ಪರದಾಡುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಾಂಗ್ರೆಸ್​​ ನಾಯಕರ ಪ್ರತಿಭಟನೆ: ಶಾಂತಿನಗರದ ಅಕ್ಕಪಕ್ಕದ ರಸ್ತೆಗಳಲ್ಲಿ ಫುಲ್​​​​​​​​ ಟ್ರಾಫಿಕ್​​ ಜಾಮ್​​
ಕಾಂಗ್ರೆಸ್​​ ಪ್ರತಿಭಟನೆ
Follow us on

ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಕಾಂಗ್ರೆಸ್​​ (Congress) ನಾಯಕರು ನಡೆಸುತ್ತಿರುವ ಪ್ರತಿಭಟನೆ ಹಿನ್ನೆಲೆ ಶಾಂತಿನಗರದ (Shantinagar) ಅಕ್ಕಪಕ್ಕದ ರಸ್ತೆಗಳಲ್ಲಿ ಬೆಳ್ಳಗ್ಗೆ 9 ಗಂಟೆಯಿಂದ ಟ್ರಾಫಿಕ್ ಜಾಮ್​ ಉಂಟಾಗಿದೆ. ಟ್ರಾಫಿಕ್​ ಜಾಮ್​​ನಲ್ಲಿ ಸಿಲುಕಿದ ವಾಹನ ಸವಾರರು ಪರದಾಡುತ್ತಿದ್ದಾರೆ. ಸಂಚಾರವನ್ನು ನಿಯಂತ್ರಿಸಲು ಪೊಲೀಸರು ಮಾರ್ಗ ಬದಲಿಸಿದ್ದಾರೆ.  ದೇವಾಂಗ ರಸ್ತೆಯಿಂದ ನಂಜಪ್ಪ ರಸ್ತೆಗೆ ಮಾರ್ಗ ಬದಲಾವಣೆ, ವಿಲ್ಸನ್ ಗಾರ್ಡನ್​ನಿಂದ ಡಬ್ಬಲ್​ ರೋಡ್​ಗೆ ಬದಲಾವಣೆ, ಹೊಸೂರು ರಸ್ತೆಯಿಂದ ವಿಲ್ಸನ್ ಗಾರ್ಡನ್ ಮುಖ್ಯ ರಸ್ತೆ, ಸಿದ್ದಯ್ಯ ರಸ್ತೆಯಿಂದ ಕೆ.ಹೆಚ್.ಮರಿಗೌಡ ಮಾರ್ಗ ಬದಲಾವಣೆ ಮಾಡಿದ್ದಾರೆ. ಕೆ.ಹೆಚ್.ಜಂಕ್ಷನ್​​ವರೆಗೂ ರಸ್ತೆ ಬ್ಲಾಕ್ ಮಾಡಲಾಗಿದೆ.

ಬೆಳಿಗ್ಗೆಯಿಂದ ಟ್ರಾಫಿಕ್​​ ಜಾಮ್​​ ಉಂಟಾದರು, ಮಧ್ಯಹ್ನವಾದರು  ಟ್ರಾಫಿಕ್ ಜಾಮ್ ಮಾತ್ರ ಕಡಿಮೆಯಾಗುತ್ತಿಲ್ಲ. ಶಾಂತಿನಗರ ಬಸ್ ನಿಲ್ದಾಣದಿಂದ ಡಬಲ್ ರೋಡಿಗೆ ಬರುವುದಕ್ಕೆ ಒಂದು ಗಂಟೆ ತಗುಲುತ್ತಿದೆ. ಇದರಿಂದ ಹೈರಾಣದ ವಾಹನ ಸವಾರರು ಸುತ್ತಾಡಿಕೊಂಡು ಬಂದರು ನಿಗದಿತ ಸ್ಥಳಕ್ಕೆ ತಲುಪಲು ಪರದಾಡುತ್ತಿದ್ದಾರೆ. ವಾಹನ ಸವಾರರನ್ನ ಕಂಟ್ರೋಲ್ ಮಾಡಲು ಟ್ರಾಫಿಕ್ ಪೋಲಿಸರು ಹೈರಾಣಾಗಿದ್ದಾರೆ.

ಇದನ್ನು ಓದಿ: ಸೋನಿಯಾ, ರಾಹುಲ್ ಗಾಂಧಿಗೆ ಇಡಿ ನೋಟಿಸ್ ವಿರೋಧಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್​ನಿಂದ ಬೃಹತ್ ಪ್ರತಿಭಟನೆ!

ಕಾಂಗ್ರೆಸ್​​ ಪ್ರತಿಭಟನೆಗೆ ಕಾರಣವೇನು ?

ಸೋನಿಯಾ ಗಾಂಧಿ  (Sonia Gandhi), ರಾಹುಲ್ ಗಾಂಧಿಗೆ (Rahul Gandhi) ಇಡಿ ಸಮನ್ಸ್ ನೀಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕ ಕಾಂಗ್ರೆಸ್ ನಾಯಕರು ಇಂದು (ಜೂನ್ 13) ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಮಕ್ಕಳ ಸಮೇತ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಇಡಿ ಕಚೇರಿಗೆ ಮುತ್ತಿಗೆ ಹಾಕುವ ನಿಟ್ಟಿನಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆ ಹಾಕುತ್ತಿದ್ದಾರೆ. ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಉದ್ದೇಶಪೂರ್ವಕವಾಗಿ ನೋಟಿಸ್ ಕೊಟ್ಟು ಕಿರುಕುಳ ನೀಡ್ತಿದ್ದಾರೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಜೊತೆ ನಾವಿದ್ದೇವೆ, ದೇಶದ ಜನರಿದ್ದಾರೆ ಎಂದು ಕಿಡಿಕಾರಿದರು.

ಇದನ್ನು ಓದಿ: ಚಾಮರಾಜಪೇಟೆ ಈದ್ಗಾ ಸುತ್ತಲೂ ಸಿಸಿ ಕ್ಯಾಮೆರಾ ಅಳವಡಿಕೆಗೆ ಕ್ರಮ, ಸ್ವಾತಂತ್ರ್ಯ ದಿನಾಚರಣೆ ಅನುಮತಿಗಾಗಿ ಹಿಂದುತ್ವವಾದಿ ಸಂಘಟನೆಗಳಿಂದ ಬಿಬಿಎಂಪಿಗೆ ಡೆಡ್​ಲೈನ್

ಲಾಲ್​ಬಾಗ್​ ಗೇಟ್​ನಿಂದ ಕಾಂಗ್ರೆಸ್ ರ್ಯಾಲಿ  ಹೊರಟಿದೆ. ಮೆರವಣಿಗೆಗೂ ಮುನ್ನಾ ಕಾರ್ಯಕರ್ತರು ಬಾರ್​ ಕೋಲ್ ಚಳುವಳಿ ನಡೆಸಿದರು. ಮೋದಿ ವೇಷಧಾರಿಗೆ ಬಾರ್ ಕೋಲ್​ನಿಂದ ಏಟು ಕೊಟ್ಟು ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಧರಣಿಯಲ್ಲಿ ಯಾವುದೇ ಅಹಿಕತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮವಾಗಿ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಲಾಲ್​ಬಾಗ್​ ಸುತ್ತಮುತ್ತ ಪೊಲೀಸ್ ಭದ್ರತೆ ಇದೆ. ವಿಲ್ಸನ್​ ಗಾರ್ಡನ್​ ಸ್ಮಶಾನದ ಬಳಿ ರ್ಯಾಲಿ ತಡೆಯಲು ಪೊಲೀಸರು ಬ್ಯಾರಿಕೇಡ್​ ಅಳವಡಿಕೆ ಮಾಡಿದ್ದಾರೆ. ಧರಣಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಹಲವು ಹಿರಿಯ ನಾಯಕರು ಭಾಗಿಯಾಗಿದ್ದಾರೆ.

ರಾಜ್ಯದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.  ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:16 pm, Mon, 13 June 22