ಬೆಂಗಳೂರು: ಬೆದರಿಕೆ ಆರೋಪ ಹಿನ್ನೆಲೆ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ (NA Haris) ಮತ್ತು ಬೆಂಬಲಿಗರ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಗೆ ಆಪ್ ಮುಖಂಡ ಮಥಾಯಿ ದೂರು ನೀಡಿದ್ದಾರೆ. ಕ್ಷೇತ್ರದ ಪ್ರಣಾಳಿಕೆ ಸಿದ್ಧಪಡಿಸಲು ಶಾಂತಿನಗರ ಕ್ಷೇತ್ರದಲ್ಲಿ ಮತದಾರರ ಸಮಸ್ಯೆ ಆಲಿಸುತ್ತಿದ್ದ ಮಥಾಯಿ, ಈ ವೇಳೆ ನೀಲಸಂದ್ರ ಬಳಿಯ ಸರ್ಕಾರಿ ಆಸ್ಪತ್ರೆ, ಶಾಲೆಗೆ ಭೇಟಿ ನೀಡಿದ್ದಾಗ ಸ್ಥಳಕ್ಕೆ ಆಗಮಿಸಿ ಬೆದರಿಕೆ ಹಾಕಿದ್ದಾರೆ ಎಂದು ರೋಪ ಮಾಡಲಾಗಿದೆ. ಎನ್.ಎ.ಹ್ಯಾರಿಸ್, ಬೆಂಬಲಿಗರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಜಿ ಕೆಎಎಸ್ ಅಧಿಕಾರಿ ಹಾಗೂ ಆಪ್ ಮುಖಂಡ ಮಥಾಯಿ ಒತ್ತಾಯಿಸಿದ್ದಾರೆ.
ಬೆಂಗಳೂರು: ಲೇಔಟ್ ಸೈಟ್ ಹಂಚಿಕೆಯಲ್ಲಿ ಪಾಲುದಾರರಿಗೆ ವಂಚನೆ ಆರೋಪದಡಿ ಬಿಜೆಪಿ MLC ಆರ್.ಶಂಕರ್ ಪತ್ನಿ ಮತ್ತು ಪುತ್ರನ ವಿರುದ್ಧ ಇಂದಿರಾನಗರ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ. ಕಂಪನಿ ಪಾರ್ಟನರ್ ಆಗಿರುವ ಪ್ರಭಾವತಿ ಎಂಬುವವರಿಂದ ದೂರು ನೀಡಲಾಗಿದೆ. ಪಾರ್ಟನರ್ಗೆ ವಂಚಿಸಿ ಅಕ್ರಮವಾಗಿ 23 ಸೈಟ್ ಮಾರಾಟ ಆರೋಪ ಕೇಳಿಬಂದಿದೆ. ಆರ್.ಶಂಕರ್ ಪುತ್ರ, ಪತ್ನಿ ಸೇರಿ ಒಟ್ಟು ನಾಲ್ವರು ಕಂಪನಿ ಆರಂಭಿಸಿದ್ದು, ಕಂಪನಿ ಹೆಸರಿನಲ್ಲಿ ಬೊಮ್ಮನಹಳ್ಳಿಯಲ್ಲಿ ಲೇಔಟ್ ನಿರ್ಮಿಸಿದ್ದರು.
ಇದನ್ನೂ ಓದಿ: Crime News: ಪೊಲೀಸ್ ಜೀಪ್ನಲ್ಲಿ ಕರೆದೊಯ್ಯುವಾಗ ಸಬ್ ಇನ್ಸ್ಪೆಕ್ಟರ್ ಕಿವಿ ಕಚ್ಚಿದ ಆಸಾಮಿ!
ಲೇಔಟ್ ನಿರ್ಮಾಣದ ವೇಳೆ ನಾಲ್ವರೂ ಪಾರ್ಟನರ್ಗಳು ಒಪ್ಪಂದ ಮಾಡಿಕೊಂಡಿದ್ದು, ಸೈಟ್ ಹಂಚಿಕೆ ವೇಳೆ ಎಲ್ಲರ ಸಹಿ ಕಡ್ಡಾಯವೆಂದು ಅಗ್ರಿಮೆಂಟ್ ಮಾಡಲಾಗಿದೆ. ಆದರೆ ಇದೀಗ ಪ್ರಭಾವತಿ ಕೈಬಿಟ್ಟು ಮೂವರಿಂದ ಸೈಟ್ ಮಾರಾಟ ಮಾಡಿದ್ದು, ಅಕ್ರಮವಾಗಿ ಬ್ಯಾಂಕ್ನಲ್ಲಿ ಖಾತೆ ತೆಗೆದು ವಂಚಿಸಿರುವುದಾಗಿ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಮೂವರ ಮೇಲೆ ಕೇಸ್ ದಾಖಲಿಸದ ಇಂದಿರಾನಗರ ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಗಲಾಟೆ ಪ್ರಕರಣವೊಂದರ ಮಾಹಿತಿ ಕಲೆಹಾಕಿ ಮಗಳ ಮನೆಗೆ ಹೊರಟಿದ್ದ ಎಎಸ್ಐ ಮಾರ್ಗ ಮಧ್ಯ ದುರಂತ ಅಂತ್ಯ
ದಾವಣಗೆರೆ: ಎರಡು ಬೈಕ್ಗಳ ನಡುವೆ ಡಿಕ್ಕಿಯಾಗಿ ತೀವ್ರ ರಕ್ತಸ್ರಾವದಿಂದ ಓರ್ವ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಚಿನ್ನು ಡಾಬಾ ಬಳಿ ನಡೆದಿದೆ. ಶಬ್ಬೀರ್ ಹುಸೇನ್(59) ಮೃತ ಬೈಕ್ ಸವಾರ. ಮೃತ ಶಬ್ಬೀರ್ ಹುಸೇನ್ ಹೊಸಪೇಟೆ ಠಾಣೆಯ ಎಎಸ್ಐ ಆಗಿದ್ದರು. ಬೆಳಗ್ಗೆ ಚಿತ್ರದುರ್ಗದ ಮಗಳ ನಿವಾಸಕ್ಕೆ ತೆರಳುವಾಗ ಅಪಘಾತ ಸಂಭವಿಸಿದೆ. ಮತ್ತೊಂದು ಬೈಕ್ನಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:45 pm, Sat, 4 February 23