ಗಲಾಟೆ ಪ್ರಕರಣವೊಂದರ ಮಾಹಿತಿ ಕಲೆಹಾಕಿ ಮಗಳ ಮನೆಗೆ ಹೊರಟಿದ್ದ ಎಎಸ್​ಐ ಮಾರ್ಗ ಮಧ್ಯ ದುರಂತ ಅಂತ್ಯ

ಗಲಾಟೆಯೊಂದರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ತನಿಖೆ ಮಾಡಿ ಮಗಳ ನಿವಾಸಕ್ಕೆ ಹೋಗುತ್ತಿದ್ದ ಎಎಸ್​ಐ ಮಾರ್ಗಮಧ್ಯ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಗಲಾಟೆ ಪ್ರಕರಣವೊಂದರ ಮಾಹಿತಿ ಕಲೆಹಾಕಿ ಮಗಳ ಮನೆಗೆ ಹೊರಟಿದ್ದ ಎಎಸ್​ಐ ಮಾರ್ಗ ಮಧ್ಯ ದುರಂತ ಅಂತ್ಯ
ಮೃತ ಎಎಸ್​ಐ ಶಬೀರ್ ಹುಸೇನ್
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Feb 04, 2023 | 4:55 PM

ದಾವಣಗೆರೆ: ಸಾವು ಹೇಗೆ ಎಲ್ಲಿ ಬರುತ್ತೆ ಅಂತೆಲ್ಲಾ ಊಹೆ ಮಾಡೋಕು ಆಗಲ್ಲ ಎನ್ನುವುದಕ್ಕೆ ಈ ಸುದ್ದಿ ಉದಾಹರಣೆ. ಹೌದು..ಇತ್ತೀಚೆಗೆ ಕೊಟ್ಟೂರು ತರಳುಬಾಳು ಹುಣ್ಣಿಮೆ ಮೆರವಣಿಗೆ ವೇಳೆ ನಡೆದಿದ್ದ ಗಲಾಟೆ ಪ್ರಕರಣದ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿಕೊಂಡು ಮಗಳ ಮನೆಗೆ ಹೊರಟಿದ್ದ ASI ಶಬ್ಬೀರ್ ಹುಸೇನ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಜಗಳೂರು ತಾಲೂಕಿನ ಚಿನ್ನು ಡಾಬಾ ಬಳಿ ಇಂದು(ಫೆಬ್ರವರಿ 04) ಸಂಭವಿಸಿದ ಬೈಕ್​ ಅಪಘಾತದಲ್ಲಿ ಹೊಸಪೇಟೆ ಠಾಣೆಯ ಎಎಸ್​ಐ ಶಬ್ಬೀರ್ ಹುಸೇನ್(59) ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಗಂಡನನ್ನ ಬಿಟ್ಟು ಓಡಿ ಬಂದಿದ್ದ ಮಹಿಳೆ ಪ್ರಿಯಕರನ ಜೊತೆ ದುರಂತ ಅಂತ್ಯಕಂಡಳು: ಮಕ್ಕಳು ಅನಾಥ

ಇತ್ತೀಚೆಗೆ ಅಷ್ಟೇ ಕೊಟ್ಟೂರು ತರಳುಬಾಳು ಹುಣ್ಣಿಮೆ ಮೆರವಣಿಗೆ ವೇಳೆ ಕಲ್ಲು ತೂರಾಟವಾಗಿ ಗಲಾಟೆಯಾಗಿತ್ತು. ಈ ಪ್ರಕರಣ ಸಂಬಂಧ ಹೊಸಪೇಟೆ ಠಾಣೆಯ ಎಎಸ್​ಐ ಶಬ್ಬೀರ್ ಹುಸೇನ್ ಮಾಹಿತಿ ಕಲೆಹಾಕಲು ಸ್ಥಳಕ್ಕೆ ಭೇಟಿ ನೀಡಿದ್ದರು. ಎಲ್ಲಾ ತನಿಖೆ ಮಾಡಿ ಬಳಿಕ ಅಲ್ಲಿಂದ ಚಿತ್ರದುರ್ಗದ ಮಗಳ ನಿವಾಸಕ್ಕೆ ಹೋಗುವಾಗ ಜಗಳೂರು ತಾಲೂಕಿನ ಚಿನ್ನು ಡಾಬಾ ಬಳಿ ಇನ್ನೊಂದು ಬೈಕ್​ ಡಿಕ್ಕಿ ಹೊಡೆದಿದೆ.

ಬೈಕ್ ಡಿಕ್ಕಿ ರಭಸಕ್ಕೆ ತೀವ್ರ ರಕ್ತಸ್ರಾವದಿಂದ ವಿಜಯನಗರ ಜಿಲ್ಲೆ ಹಂಪಿ ನಿವಾಸಿ ಶಬ್ಬೀರ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮತ್ತೊಂದು ಬೈಕ್​ನಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಅವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಜಗಳೂರು ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ. ಸಂತೋಷದಿಂದ ಮಗಳ ನೋಡಲು ಹೊರಟಿದ್ದ ಎಎಸ್​ಐ ವಿಧಿ ಮಸಣಕ್ಕೆ ಕರೆದೊಯ್ದಿದೆ.

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ