ಲೇಔಟ್​ ಸೈಟ್ ಹಂಚಿಕೆಯಲ್ಲಿ ಪಾಲುದಾರರಿಗೆ ವಂಚನೆ ಆರೋಪ: ಬಿಜೆಪಿ MLC ಆರ್.ಶಂಕರ್ ಪತ್ನಿ, ಪುತ್ರನ ವಿರುದ್ಧ FIR

ಲೇಔಟ್​ ಸೈಟ್ ಹಂಚಿಕೆಯಲ್ಲಿ ಪಾಲುದಾರರಿಗೆ ವಂಚನೆ ಆರೋಪದಡಿ ಬಿಜೆಪಿ MLC ಆರ್.ಶಂಕರ್ ಪತ್ನಿ ಮತ್ತು ಪುತ್ರನ ವಿರುದ್ಧ ಇಂದಿರಾನಗರ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ.

ಲೇಔಟ್​ ಸೈಟ್ ಹಂಚಿಕೆಯಲ್ಲಿ ಪಾಲುದಾರರಿಗೆ ವಂಚನೆ ಆರೋಪ: ಬಿಜೆಪಿ MLC ಆರ್.ಶಂಕರ್ ಪತ್ನಿ, ಪುತ್ರನ ವಿರುದ್ಧ FIR
ಲೇಔಟ್​ ಸೈಟ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Feb 04, 2023 | 5:55 PM

ಬೆಂಗಳೂರು: ಲೇಔಟ್​ ಸೈಟ್ ಹಂಚಿಕೆಯಲ್ಲಿ ಪಾಲುದಾರರಿಗೆ ವಂಚನೆ ಆರೋಪದಡಿ ಬಿಜೆಪಿ MLC ಆರ್.ಶಂಕರ್ (R Shankar) ಪತ್ನಿ ಮತ್ತು ಪುತ್ರನ ವಿರುದ್ಧ ಇಂದಿರಾನಗರ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ. ಕಂಪನಿ ಪಾರ್ಟನರ್ ಆಗಿರುವ ಪ್ರಭಾವತಿ ಎಂಬುವವರಿಂದ ದೂರು ನೀಡಲಾಗಿದೆ. ಪಾರ್ಟನರ್​​ಗೆ ವಂಚಿಸಿ ಅಕ್ರಮವಾಗಿ 23 ಸೈಟ್​ ಮಾರಾಟ ಆರೋಪ ಕೇಳಿಬಂದಿದೆ.  ಆರ್.ಶಂಕರ್ ಪುತ್ರ, ಪತ್ನಿ ಸೇರಿ ಒಟ್ಟು ನಾಲ್ವರು ಕಂಪನಿ ಆರಂಭಿಸಿದ್ದು, ಕಂಪನಿ ಹೆಸರಿನಲ್ಲಿ ಬೊಮ್ಮನಹಳ್ಳಿಯಲ್ಲಿ ಲೇಔಟ್ ನಿರ್ಮಿಸಿದ್ದರು. ಲೇಔಟ್ ನಿರ್ಮಾಣದ ವೇಳೆ ನಾಲ್ವರೂ ಪಾರ್ಟನರ್​ಗಳು ಒಪ್ಪಂದ ಮಾಡಿಕೊಂಡಿದ್ದು, ಸೈಟ್ ಹಂಚಿಕೆ ವೇಳೆ ಎಲ್ಲರ ಸಹಿ ಕಡ್ಡಾಯವೆಂದು ಅಗ್ರಿಮೆಂಟ್ ಮಾಡಲಾಗಿದೆ. ಆದರೆ ಇದೀಗ ಪ್ರಭಾವತಿ ಕೈಬಿಟ್ಟು ಮೂವರಿಂದ ಸೈಟ್ ಮಾರಾಟ ಮಾಡಿದ್ದು, ಅಕ್ರಮವಾಗಿ ಬ್ಯಾಂಕ್​ನಲ್ಲಿ ಖಾತೆ ತೆಗೆದು ವಂಚಿಸಿರುವುದಾಗಿ ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ. ಮೂವರ ಮೇಲೆ ಕೇಸ್ ದಾಖಲಿಸದ ಇಂದಿರಾನಗರ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

ಮಗಳ ಮನೆಗೆ ಹೊರಟಿದ್ದ ಎಎಸ್​ಐ ಬೈಕ್ ಅಪಘಾತದಲ್ಲಿ ಸಾವು

ದಾವಣಗೆರೆ: ಎರಡು ಬೈಕ್​ಗಳ ನಡುವೆ ಡಿಕ್ಕಿಯಾಗಿ ತೀವ್ರ ರಕ್ತಸ್ರಾವದಿಂದ ಓರ್ವ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಚಿನ್ನು ಡಾಬಾ ಬಳಿ ನಡೆದಿದೆ. ಶಬ್ಬೀರ್ ಹುಸೇನ್(59) ಮೃತ ಬೈಕ್​ ಸವಾರ. ಮೃತ ಶಬ್ಬೀರ್ ಹುಸೇನ್ ಹೊಸಪೇಟೆ ಠಾಣೆಯ ಎಎಸ್​ಐ ಆಗಿದ್ದರು. ಬೆಳಗ್ಗೆ ಚಿತ್ರದುರ್ಗದ ಮಗಳ ನಿವಾಸಕ್ಕೆ ತೆರಳುವಾಗ ಅಪಘಾತ ಸಂಭವಿಸಿದೆ. ಮತ್ತೊಂದು ಬೈಕ್​ನಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಗಳೂರು ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರು: ವಾಂತಿ ಭೇದಿಯಿಂದ ಆಸ್ಪತ್ರೆ ಸೇರಿದ್ದ ಜ್ಯೂನಿಯರ್​ ಡ್ಯಾನ್ಸರ್, ಸಹಕಲಾವಿದೆ ಸಾವು; ವೈದ್ಯರ ವಿರುದ್ಧ ಕುಟುಂಬಸ್ಥರ ಗಂಭೀರ ಆರೋಪ

ಅಪರಿಚಿತ ವಾಹನ ಡಿಕ್ಕಿಯಾಗಿ ಯುವಕ ಸಾವು

ತುಮಕೂರು: ಅಪರಿಚಿತ ವಾಹನ ಡಿಕ್ಕಿಯಾಗಿ ಯುವಕ ಸಾವನ್ನಪ್ಪಿರುವಂತಹ ಘಟನೆ ಕೊರಟಗೆರೆ ತಾಲೂಕಿನ ದುಗ್ಗೆನಹಳ್ಳಿಗೆ ಹೋಗುವಾಗ ನಡೆದಿದೆ. ಸಂಜಯ್ (23) ಮೃತ ದುರ್ದೈವಿ. ಮುಖಾಮುಖಿ ಅಪರಿಚಿತ ವಾಹನ ಡಿಕ್ಕಿಯಾಗಿ ಅಪಘಾತವಾಗಿದೆ ಎಂದು ಶಂಕಿಸಲಾಗಿದೆ. ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ಬೆಂಗಳೂರಿನ ಕೊಡತಿ ಪ್ರದೇಶದಲ್ಲಿ ಮನೆಗಳ್ಳತನಕ್ಕೆ ಯತ್ನ

ಬೆಂಗಳೂರು: ಕೊಡತಿ ಪ್ರದೇಶದಲ್ಲಿ ಮನೆಗಳ್ಳತನಕ್ಕೆ ಯತ್ನಿಸಿ ಖದೀಮ ವಿಫಲನಾಗಿದ್ದಾನೆ. ಕಳ್ಳತನಕ್ಕೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಕಳ್ಳ ಫ್ರಾನ್ಸಿಸ್​ ಎಂಬುವರ ಮನೆಯಲ್ಲಿ ಕಳ್ಳತನಕ್ಕೆ ಪ್ರಯತ್ನ ಮಾಡಿದ್ದಾನೆ. ಆದ್ರೆ ಕಳ್ಳತನದ ಪ್ರಯತ್ನ ವಿಫಲವಾಗಿದ್ದು ವಾಪಸ್ ಹೋಗಿದ್ದಾನೆ. ಮನೆಗಳ್ಳನ ಚಲನವಲನ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚುನಾವಣೆ ಹತ್ತಿರವಾಗುತ್ತಿದ್ದಂತೆ ರೌಡಿಗಳ ಮೇಲೆ ಪೊಲೀಸರ ಹದ್ದಿನಕಣ್ಣು: 35 ರೌಡಿಶೀಟರ್​ಗಳು ಮತ್ತೆ ಜೈಲಿಗೆ

ಶಾರ್ಟ್​ ಸರ್ಕ್ಯೂಟ್​ನಿಂದ ಸಾಮಿಲ್​ನಲ್ಲಿ ಆಕಸ್ಮಿಕ ಬೆಂಕಿ

ಮೈಸೂರು: ಜಿಲ್ಲೆಯ ಹುಣಸೂರಿನ ಬೋಟಿ ಬಜಾರ್​ನಲ್ಲಿ ಸಾಮಿಲ್​ನಲ್ಲಿದ್ದ ಮರಗಳು, ಯಂತ್ರೋಪಕರಣ ಬೆಂಕಿಗಾಹುತಿ ಆಗಿದೆ. ಮುಷರ್ ಅಹ್ಮದ್​ ಎಂಬುವರಿಗೆ ಸೇರಿದ ಸಾಮಿಲ್​ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ವಸ್ತುಗಳೆಲ್ಲ ಸುಟ್ಟು​ ಭಸ್ಮವಾಗಿದೆ. ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಭಸ್ಮವಾಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಕೆನ್ನಾಲಗೆ ವ್ಯಾಪಿಸದಂತೆ ನಿಯಂತ್ರಿಸಿದ್ದಾರೆ. ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:55 pm, Sat, 4 February 23