Sign In

By signing in or creating an account, you agree with Associated Broadcasting Company's Terms & Conditions and Privacy Policy.

Murder: ಹೆಂಡತಿಯನ್ನು ಕೊಂದು, 30 ಕೆಜಿ ಉಪ್ಪಿನಲ್ಲಿ ಶವ ಹೂತಿಟ್ಟ ತರಕಾರಿ ವ್ಯಾಪಾರಿ!

Shocking News: ದಿನೇಶ್ ಜನವರಿ 25ರಂದು ಕೌಟುಂಬಿಕ ಕಲಹದಿಂದ ತನ್ನ ಹೆಂಡತಿಯನ್ನು ಕತ್ತು ಹಿಸುಕಿ ಕೊಂದಿದ್ದ. ನಂತರ ದಿನೇಶ್ ಆ ಶವವನ್ನು ಒಂದು ದಿನ ತನ್ನ ಮನೆಯಲ್ಲಿ ಇಟ್ಟುಕೊಂಡು, ಉಪ್ಪಿನಿಂದ ಕವರ್ ಮಾಡಿದ್ದ.

Murder: ಹೆಂಡತಿಯನ್ನು ಕೊಂದು, 30 ಕೆಜಿ ಉಪ್ಪಿನಲ್ಲಿ ಶವ ಹೂತಿಟ್ಟ ತರಕಾರಿ ವ್ಯಾಪಾರಿ!
ಸಾಂದರ್ಭಿಕ ಚಿತ್ರ
Follow us
ಸುಷ್ಮಾ ಚಕ್ರೆ
|

Updated on: Feb 04, 2023 | 4:40 PM

ಘಜಿಯಾಬಾದ್: ಕೌಟುಂಬಿಕ ಕಲಹದಿಂದ ತನ್ನ ಹೆಂಡತಿಯನ್ನು ಕೊಲೆ (Murder) ಮಾಡಿದ ತರಕಾರಿ ವ್ಯಾಪಾರಿಯೊಬ್ಬ ಆ ಶವ ಕೊಳೆತು ವಾಸನೆ ಬರಬಾರದು ಎಂದು 30 ಕೆಜಿ ಉಪ್ಪು (Salt) ತಂದು, ಅದರೊಳಗೆ ಶವವನ್ನು ಮನೆಯಲ್ಲೇ ಹೂತಿಟ್ಟಿದ್ದಾನೆ. ಬಳಿಕ ಮನೆಯ ಬಳಿ ಇದ್ದ ತರಕಾರಿ ತೋಟದಲ್ಲಿ ಗುಂಡಿ ತೋಡಿ, ಹೆಣವನ್ನು ಹೂಳಿದ್ದಾನೆ. ಆ ಶವ ಹೂತ ಜಾಗದ ಮೇಲೆ ತರಕಾರಿ ಗಿಡಗಳನ್ನು ನೆಟ್ಟು, ಯಾರಿಗೂ ಅನುಮಾನ ಬಾರದಂತೆ ತನ್ನಷ್ಟಕ್ಕೆ ತಾನು ತರಕಾರಿ ವ್ಯಾಪಾರ ನಡೆಸುತ್ತಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದ ಘಜಿಯಾಬಾದ್ ಬಳಿಯ ಹೊಲವೊಂದರಲ್ಲಿ ಪತ್ನಿಯನ್ನು ಕೊಂದು, ಶವವನ್ನು ಬಚ್ಚಿಟ್ಟಿದ್ದ ದಿನೇಶ್ ಎಂಬ ತರಕಾರಿ ವ್ಯಾಪಾರಿಯನ್ನು ಬಂಧಿಸಲಾಗಿದೆ. ಅಧಿಕಾರಿಗಳ ಪ್ರಕಾರ, ದಿನೇಶ್ ಜನವರಿ 25ರಂದು ಕೌಟುಂಬಿಕ ಕಲಹದಿಂದ ತನ್ನ ಹೆಂಡತಿಯನ್ನು ಕತ್ತು ಹಿಸುಕಿ ಕೊಂದಿದ್ದ. ನಂತರ ದಿನೇಶ್ ಆ ಶವವನ್ನು ಒಂದು ದಿನ ತನ್ನ ಮನೆಯಲ್ಲಿ ಇಟ್ಟುಕೊಂಡು, ಉಪ್ಪಿನಿಂದ ಕವರ್ ಮಾಡಿದ್ದ. ಮರುದಿನ ಅದನ್ನು ಹೊಲದಲ್ಲಿ ಹೂತುಹಾಕಿದ್ದ. ಅದರ ಮೇಲೆ ಗಿಡಗಳನ್ನು ನೆಟ್ಟಿದ್ದರಿಂದ ಯಾರಿಗೂ ಅನುಮಾನ ಬಂದಿರಲಿಲ್ಲ.

ಇದನ್ನೂ ಓದಿ: Shocking News: ಗೆಳೆಯನನ್ನು ಕೊಂದು ಘಾಟ್​ನಲ್ಲಿ ಶವ ಬಿಸಾಡುವಾಗ ತಾನೇ ಕಾಲು ಜಾರಿ ಬಿದ್ದು ಸತ್ತ ಹಂತಕ!

ಅದಾಗಿ ಒಂದೆರಡು ದಿನಗಳ ನಂತರ ತನ್ನ ಪತ್ನಿ ನಾಪತ್ತೆಯಾಗಿರುವ ಬಗ್ಗೆ ದಿನೇಶ್ ಖುದ್ದಾಗಿ ಹೋಗಿ ಪೊಲೀಸರಿಗೆ ದೂರು ನೀಡಿದ್ದ. ಈ ಪ್ರಕರಣವನ್ನು ಪರಿಶೀಲಿಸಿದಾಗ ಪೊಲೀಸರಿಗೆ ದಿನೇಶನ ಮೇಲೇ ಅನುಮಾನ ಉಂಟಾಗಿತ್ತು. ಈ ಬಗ್ಗೆ ಆತನನ್ನು ವಿಚಾರಿಸಿದಾಗ ದಿನೇಶ್ ತನ್ನ ಪತ್ನಿ ಬೇರೊಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರಿಂದ ಕೋಪಗೊಂಡು, ಆಕೆಯನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: Bengaluru Crime: ಬೆಂಗಳೂರಿನಲ್ಲೊಂದು ಭೀಕರ ಘಟನೆ; ಗರ್ಲ್​ಫ್ರೆಂಡ್​ನ 3 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿ, ಕೊಲೆ

ತನಿಖೆ ಮುಗಿದ ನಂತರ ಪೊಲೀಸರು ಶೀಘ್ರವೇ ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆತ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಬಳಿಕ ಪೊಲೀಸ್ ಅಧಿಕಾರಿಗಳು ಆರೋಪಿಯೊಂದಿಗೆ ಆತನ ಜಮೀನಿಗೆ ಹೋಗಿ, ಮೃತ ಮಹಿಳೆಯ ಶವವನ್ನು ಹೊಲದಿಂದ ಹೊರತೆಗೆದಿದ್ದಾರೆ. ಆ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ