ಬೆಂಗಳೂರಲ್ಲಿ ಮಲಯಾಳಂ ಕೋಲ್ಡ್ ಕೇಸ್ ಸಿನಿಮಾ ಮಾದರಿಯಲ್ಲಿ ಶವ ಪತ್ತೆ: ಮರದ ಮೇಲೆ ಮಹಿಳೆಯ ತಲೆ ಬುರುಡೆ
ಬೆಂಗಳೂರನ ಅಕ್ಷಯನಗರದ ಹುಳಿಮಾವು ಮರವೊಂದರ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಅವಶೇಷಗಳು ಪತ್ತೆಯಾಗಿವೆ.
ಬೆಂಗಳೂರು: ಮಲಯಾಳಂ ಕೋಲ್ಡ್ ಕೇಸ್ ಸಿನಿಮಾದಲ್ಲಿ ತೋರಿಸುವ ರೀಲ್ ಕಥೆ ಇಲ್ಲಿ ರಿಯಲ್ ಆಗಿದೆ. ಹೌದು ರಾಜಧಾನಿಯ ಅಕ್ಷಯನಗರದ ಹುಳಿಮಾವು ಮರವೊಂದರ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಅವಶೇಷಗಳು ಪತ್ತೆಯಾಗಿವೆ. ಹಲವು ತಿಂಗಳಿಂದ ಮರದ ಕೊಂಬೆಯಲ್ಲಿ ನೇತಾಡುತಿದ್ದ ತಲೆ ಬುರುಡೆ ಪತ್ತೆಯಾಗಿದೆ. ಶವ 6 ತಿಂಗಳಿಂದ ಕೊಳೆಯುತ್ತಿತ್ತು. ನಿನ್ನೆ (ಫೆ.2) ಪೊಲೀಸರು ಮೂತ್ರ ವಿಸರ್ಜನೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ತನಿಖೆ ಆರಂಭಿಸಿದ್ದು, ಮಹಿಳೆಯ ಶವ ಎಂಬ ಶಂಕೆ ವ್ಯಕ್ತವಾಗಿದೆ. ಹುಳಿಮಾವು ಠಾಣೆ ಪೊಲೀಸರಿಂದ ಪ್ರಕರಣದ ತನಿಖೆ ನಡೆಯುತ್ತಿದೆ. 7 ತಿಂಗಳ ಹಿಂದೆ ಹುಳಿಮಾವು ಠಾಣೆಯಲ್ಲಿ ನೇಪಾಳಿ ಮಹಿಳೆಯೊಬ್ಬಳು ನಾಪತ್ತೆ ಪ್ರಕರಣ ತನಿಖೆಯಲ್ಲಿದೆ. ಹೀಗಾಗಿ ಅದೇ ಮಹಿಳೆಯ ಶವ ಇದು ಎನ್ನುವ ಅನುಮಾನ ವ್ಯಕ್ತವಾಗಿದೆ.
ಅಗ್ನೇಯ ವಿಭಾಗದ ಡಿಸಿಪಿ ಸಿಕೆ ಬಾಬಾ ಹೇಳಿಕೆ
ನಿನ್ನೆ ಬೆಳಗ್ಗೆ ನಮಗೆ ಮಾನವನ ಅಸ್ತಿಪಂಜರ ಇರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ವೇಳೆ ಮಹಿಳೆಯ ಚಪ್ಪಲಿ, ಅಲ್ಲದೆ ಕುತ್ತಿಗೆ ಬಳಸುವ ನೆಕ್ಲೆಸ್ ಎಲ್ಲವೂ ಪತ್ತೆಯಾಗಿತ್ತು. ಹೀಗಾಗಿ ನಾವು ಮಿಸ್ಸಿಂಗ್ ಕೇಸ್ ಗಳನ್ನ ಹುಡುಕಲು ಶುರುಮಾಡಿದ್ವಿ. ನಾವು ಕಳೆದ ವರ್ಷ ಜುಲೈನಲ್ಲಿ ಹುಳಿಮಾವು ಠಾಣೆಯಲ್ಲಿ ನೇಪಾಳಿ ಮಹಿಳೆ ನಾಪತ್ತೆ ಕೇಸ್ ದಾಖಲಾಗಿತ್ತು. ಈಗ ಅಲ್ಲಿ ಸಿಕ್ಕಿರುವ ವಸ್ತುಗಳು ಎಲ್ಲ ವಸ್ತುಗಳು ಮ್ಯಾಚ್ ಮಾಡಲಾಗಿದ್ದು ಮಹಿಳೆಯದೆ ಶವ ಎಂಬುದು ಗೊತ್ತಾಗಿದೆ. ಆದರೂ ನಾವು ಅಸ್ಥಿಪಂಜರದ ಡಿಎನ್ಎ, ಸತ್ತ ಅವಧಿಯ ಬಗ್ಗೆ ಮಾಹಿತಿ ಎಲ್ಲವನ್ನು ಪಡೆದುಕೊಳ್ಳಲಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: ಗಂಡನನ್ನ ಬಿಟ್ಟು ಓಡಿ ಬಂದಿದ್ದ ಮಹಿಳೆ ಪ್ರಿಯಕರನ ಜೊತೆ ದುರಂತ ಅಂತ್ಯಕಂಡಳು: ಮಕ್ಕಳು ಅನಾಥ
ಇನ್ಸ್ಟಾಗ್ರಾಮ್ ಮೂಲಕ ಯುವತಿಯರನ್ನು ಪರಿಚಯಿಸಿಕೊಂಡು ನಗ್ನ ಚಿತ್ರ ಪಡೆದು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಆರೋಪಿ ಅರೆಸ್ಟ್
ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ, ನಂಬಿಸಿ ಮೋಸ ಮಾಡುವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೇ ಈ ಜಾಲಕ್ಕೆ ಹೆಚ್ಚಾಗಿ ಯುವತಿಯರೇ ಬೀಳುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಇನ್ಸ್ಟಾಗ್ರಾಮ್ ಮೂಲಕ ಯುವತಿಯರನ್ನು ಪರಿಚಯ ಮಾಡಿಕೊಂಡು, ವಿವಿಧ ಕಾರಣ ಹೇಳಿ ಅವರ ನಗ್ನ ಫೋಟೊಗಳ ಪಡೆದು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಆರೋಪಿಯನ್ನು ಆಗ್ನೆಯ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ದಿಲ್ಲಿ ಪ್ರಸಾದ್ (26) ಬಂಧಿತ ಆರೋಪಿ. ಆಂಧ್ರ ಮೂಲದ ಆರೋಪಿ ದಿಲ್ಲಿ ಪ್ರಸಾದ್ 2018 ರಿಂದ ಬೆಂಗಳೂರಿನಲ್ಲಿ ವಾಸವಿದ್ದನು. ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದನು. ಈತ ಮೊನಿಯ ಮತ್ತು ಮ್ಯಾನೇಜರ್ ಎಂಬ ಎರಡು ನಕಲಿ ಖಾತೆ ಸೃಷ್ಟಿ ಮಾಡಿದ್ದಾನೆ.
ಇದನ್ನೂ ಓದಿ: ಕೆಲಸ ಕೊಡಿಸ್ತೀವಿ ಅಂತಾ ಕರೆದು ಸುಲಿಗೆ ಮಾಡಿದ್ದ ಗ್ಯಾಂಗ್ ಬಂಧನ
ಈ ಖಾತೆಗಳ ಮೂಲಕ ಯುವತಿಯರನ್ನು ಪರಿಚಯ ಮಾಡಿಕೊಂಡಿದ್ದಾನೆ. ನಂತರ ಯುವತಿಯರೊಂದಿಗೆ ಸಲುಗೆಯಿಂದ ವರ್ತಿಸಿ, ನಂಬಿಕಸ್ತ ಎಂದು ಭರವಸೆ ಮೂಡಿಸುತ್ತಿದ್ದನು. ಬಳಿಕ ಅವರಿಗೆ ವಿವಿಧ ಕಾರಣ ಹೇಳಿ ಅವರ ನಗ್ನ ಫೋಟೊಗಳನ್ನು ಪಡೆದು ಕೊಳ್ಳುತಿದ್ದನು. ಬಳಿಕ ಫೋಟೋಗಳನ್ನು ಬಳಸಿ ಬೆದರಿಸಿ ಬೇರೊಬ್ಬರ ಜೊತೆ ಲೈಂಗಿಕ ಕ್ರಿಯೆ ಮಾಡುವಂತೆ ಒತ್ತಾಯ ಮಾಡುತ್ತಿದ್ದನು.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ