‘ರಾಹುಲ್ ಗಾಂಧಿ ನೇತೃತ್ವದಲ್ಲಿ ಸೋಲಿನ ಶತಕ ಬಾರಿಸಲು ಕಾಂಗ್ರೆಸ್​​ ಸಜ್ಜಾಗಿದೆ’: ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ವ್ಯಂಗ್ಯ

ಬ್ಯಾಲೆಟ್ ಪೇಪರ್‌ನಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲೂ ಕಾಂಗ್ರೆಸ್ ಸೋತಿದ್ದು, ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸೋಲಿನ ಶತಕ ಬಾರಿಸಲು ಸಜ್ಜಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ. ಪರಿಷತ್ ಚುನಾವಣೆಯಲ್ಲಿ NDA ಗೆದ್ದಿರುವುದು ಸಾಧಾರಣ ಗೆಲುವಲ್ಲ. ಕಾಂಗ್ರೆಸ್​ನರು ಹಣ ಹಂಚಲು ಪ್ರಯತ್ನಿಸಿದ್ರೂ ಮತದಾರರು ಪಡೆದಿಲ್ಲ. ಇನ್ಮುಂದೆ ಕೇಂದ್ರದತ್ತ ಬೆರಳು ತೋರಿಸುವುದನ್ನು ಬಿಡಿ ಎಂದವರು ವಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಗಾಂಧಿ ನೇತೃತ್ವದಲ್ಲಿ ಸೋಲಿನ ಶತಕ ಬಾರಿಸಲು ಕಾಂಗ್ರೆಸ್​​ ಸಜ್ಜಾಗಿದೆ: ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ವ್ಯಂಗ್ಯ
ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ
Image Credit source: PTI

Updated on: Oct 28, 2026 | 5:13 PM

ನವದೆಹಲಿ, ಅಕ್ಟೋಬರ್​​ 28: ಬ್ಯಾಲೆಟ್ ಪೇಪರ್​ನಲ್ಲಿ ಮತದಾನ ನಡೆದ ಪರಿಷತ್ ಚುನಾವಣೆಯಲ್ಲೂ ಕಾಂಗ್ರೆಸ್ ಸೋತಿದೆ. ಕರ್ನಾಟಕ, ಮಹಾರಾಷ್ಟ್ರ, ಬಿಹಾರದಲ್ಲಿ ಕಾಂಗ್ರೆಸ್ ಪಕ್ಷ ಪರಾಭವಗೊಂಡಿದ್ದು, ರಾಹುಲ್ ಗಾಂಧಿ ನೇತೃತ್ವದಲ್ಲಿ ಸೋಲಿನ ಶತಕ ಬಾರಿಸಲು ಸಜ್ಜಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಹೇಳಿದ್ದಾರೆ. ಕರ್ನಾಟಕದಲ್ಲಿ ಮತದಾರರು ಎನ್​ಡಿಎಗೆ ಆಶೀರ್ವಾದ ಮಾಡಿದ್ದು, ಪರಿಷತ್​ನ 4 ಕ್ಷೇತ್ರಗಳಲ್ಲಿ ಸುಮಾರು 2.60 ಲಕ್ಷ ಮತದಾರರಿದ್ದರು. ಪರಿಷತ್​ನ 2 ಪದವೀಧರ, 2 ಶಿಕ್ಷಕರ ಕ್ಷೇತ್ರದಲ್ಲಿಯೂ ಎನ್​ಡಿಎ ಗೆದ್ದಿದೆ. ಹೀಗಾಗಿ ನಾನು ಕಾಂಗ್ರೆಸ್ ಪಕ್ಷ, ರಾಹುಲ್ ಗಾಂಧಿ, ಸಿಎಂ ಡಿಕೆಶಿಗೆ ಹೇಳ್ತೇನೆ ಇನ್ಮುಂದೆ ಬ್ಯಾಲೆಟ್ ಪೇಪರ್ ಬಗ್ಗೆ ಚರ್ಚೆಯನ್ನು ಬಿಟ್ಟು ಕೆಲಸ ಮಾಡಿ ಎಂದವರು ತಿಳಿಸಿದ್ದಾರೆ.

‘ಡ್ರಾಮಾ ಬಿಟ್ಟು ಅಭಿವೃದ್ಧಿ ಕೆಲಸಮಾಡಿ’

ಪರಿಷತ್ ಚುನಾವಣೆಯಲ್ಲಿ NDA ಗೆದ್ದಿರುವುದು ಸಾಧಾರಣ ಗೆಲುವಲ್ಲ. ಕಾಂಗ್ರೆಸ್​ನರು ಹಣ ಹಂಚಲು ಪ್ರಯತ್ನಿಸಿದ್ರೂ ಮತದಾರರು ಪಡೆದಿಲ್ಲ. ಬ್ಯಾಲೆಟ್ ಪೇಪರ್​ನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯ ಗಳಿಸಿದೆ. ವೋಟ್ ಚೋರಿ, ಸಿಇಸಿ, ಬ್ಯಾಲೆಟ್ ಪೇಪರ್ ಬಗ್ಗೆ ಮಾತನಾಡಿದ್ರು. ಇನ್ಮುಂದೆ ಕೇಂದ್ರದತ್ತ ಬೆರಳು ತೋರಿಸುವುದನ್ನು ಬಿಡಿ. ಕೇವಲ ಒಂದೂವರೆ ವರ್ಷದ ಅಧಿಕಾರವಿದೆ, ಸರಿಯಾಗಿ ಕೆಲಸಮಾಡಿ. ಇನ್ಮುಂದೆ ಇಂತಹ ಡ್ರಾಮಾ ಬಿಟ್ಟು ಅಭಿವೃದ್ಧಿ ಕೆಲಸಮಾಡಿ ಎಂದು ಪ್ರಹ್ಲಾದ್​​ ಜೋಶಿ ಕಿಡಿ ಕಾರಿದ್ದಾರೆ.

ಇದನ್ನೂ ಓದಿ: 1 ವರ್ಷ ಮುಂಚೆ ಅಭ್ಯರ್ಥಿ ಆಯ್ಕೆ ಮಾಡಿದ್ರೂ ವರ್ಕೌಟ್ ಆಗ್ಲಿಲ್ಲ: ಪರಿಷತ್​​​​​ನಲ್ಲಿ ಕೈ ಸೋಲಿಗೆ ಕಾರಣಗಳು ಹೀಗಿವೆ

‘ಪ್ರಿಯಾಂಕ್ ಖರ್ಗೆ ಒಂದು ರೀತಿ ನಿರುದ್ಯೋಗಿ’

ರಾಜ್ಯ ಸರ್ಕಾರ ಕಬ್ಬು ಬೆಳೆಗಾರರಿಗೆ ಎಸ್‌ಎಪಿ ಕೊಡಲು ಸಿದ್ಧವಿಲ್ಲ. ಕಾಂಗ್ರೆಸ್ ಅವಧಿಯಲ್ಲಿ ಎಸ್ಎಪಿ ಕಾನೂನು ಬ್ಯಾನ್ ಮಾಡಿದ್ದಾರೆ. ಸರ್ಕಾರ ಕಾರ್ಖಾನೆಗಳ ವಿದ್ಯುತ್ ಬಿಲ್ ಹೆಚ್ಚಳ ಮಾಡಿದ್ದು, ಕಾಂಗ್ರೆಸ್‌ ಆಡಳಿತದಲ್ಲಿ ಹೆಸ್ಕಾಂಗಳು ಹಾಳಾಗಿವೆ. ನಾವು ರೈತರನ್ನು ಕರೆದು ಚರ್ಚಿಸಿ ತಜ್ಞರ ಸಮಿತಿ ರಚಿಸಿದೆವು. 2015, 2019ರ ಬಳಿಕ ಪ್ರೈಸ್ ಕ್ರಾಸ್‌ ಆಗಲು ಬಿಟ್ಟಿಲ್ಲ. ರಾಜ್ಯ ಸರ್ಕಾರ ನನ್ನ ಬಳಿ ದುಡ್ಡಿಲ್ಲ ಅನ್ನೋದು ಪರಿಹಾರವಲ್ಲ. ನಾಳೆ ತಜ್ಞರ ಸಮಿತಿ ರಾಜ್ಯಕ್ಕೆ ಭೇಟಿ ನೀಡಲಿದೆ ಎಂದವರು ತಿಳಿಸಿದ್ದಾರೆ. ಸ್ಟಿಂಗ್ ಬಗ್ಗೆ 1 ವಾರದಲ್ಲಿ ಮಾಹಿತಿ ನೀಡುವುದಾಗಿ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಹೇಳಿದ್ದಾರೆ. ಪ್ರಿಯಾಂಕ್ ಖರ್ಗೆ ಒಂದು ರೀತಿ ನಿರುದ್ಯೋಗಿಯಾಗಿದ್ದು, ಸಂಬಂಧವಿಲ್ಲದ ವಿಚಾರಗಳ ಬಗ್ಗೆ ಮಾತನಾಡಿ ಕಾಲಹರಣ ಮಾಡ್ತಿದ್ದಾರೆ. ಖಾಲಿ ಪೀಲಿ ಮಾತನಾಡಿಕೊಂಡು ಓಡಾಡ್ತಿದ್ದಾರೆ ಎಂದು ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us