ಕಂಟ್ರಾಕ್ಟರ್‌ ಪಿಎಸ್​ ಗೌಡರ್ ಆತ್ಮಹತ್ಯೆ:​ ಇಲಾಖಾ ತನಿಖೆಗೆ ಆದೇಶಿಸಿದ ಸಚಿವ ಪ್ರಿಯಾಂಕ್‌ ಖರ್ಗೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: May 31, 2024 | 5:39 PM

ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನ ಗುತ್ತಿಗೆದಾರ(Contractor) ಪಿ.ಎಸ್.ಗೌಡರ್(48) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಸಹೋದರರಾದ ನಾಗರಾಜ್, ಶ್ರೀನಿವಾಸ ಹಾಗೂ ಕೆಆರ್​ಐಡಿಎಲ್ ಸೇರಿಸಿ ಸಂತೆ ಬೆನ್ನೂರ ಪೊಲೀಸ ಠಾಣೆಯಲ್ಲಿ ಐಪಿಸಿ ಕಲಂ 306 ಅನ್ವಯ ಕೇಸ್ ಬುಕ್ ಮಾಡಲಾಗಿದೆ. ಇದೀಗ ಇಲಾಖಾ ತನಿಖೆಗೆ ಸಚಿವ ಪ್ರಿಯಾಂಕ್‌ ಖರ್ಗೆ ಆದೇಶಿಸಿದ್ದಾರೆ.

ಕಂಟ್ರಾಕ್ಟರ್‌ ಪಿಎಸ್​ ಗೌಡರ್ ಆತ್ಮಹತ್ಯೆ:​ ಇಲಾಖಾ ತನಿಖೆಗೆ ಆದೇಶಿಸಿದ ಸಚಿವ ಪ್ರಿಯಾಂಕ್‌ ಖರ್ಗೆ
ಮೃತ ಗುತ್ತಿಗೆದಾರ, ಸಚಿವ ಪ್ರಿಯಾಂಕ್​ ಖರ್ಗೆ
Follow us on

ಬೆಂಗಳೂರು/ದಾವಣಗೆರೆ, ಮೇ.31: ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನ ಗುತ್ತಿಗೆದಾರ(Contractor) ಪಿ.ಎಸ್.ಗೌಡರ್(48) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಲಾಖಾ ತನಿಖೆಗೆ ವಹಿಸಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಆದೇಶಿಸಿದ್ದಾರೆ. ಹಿರಿಯ ಅಧಿಕಾರಿಗಳ ಸಮಿತಿ ರಚಿಸಿ ವರದಿ ನೀಡುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆ ಎಸಿಎಸ್​ಗೆ ಸೂಚನೆ ನೀಡಿದ್ದಾರೆ.

ಆತ್ಮಹತ್ಯೆ ಕೇಸ್​​ ಬಗ್ಗೆ ಎಸ್ಪಿ ಹೇಳಿದ್ದಿಷ್ಟು

ಇನ್ನು ಗುತ್ತಿಗೆದಾರ ಪಿ.ಎಸ್.ಗೌಡರ್(48) ಆತ್ಮಹತ್ಯೆ ಕೇಸ್​ ಕುರಿತು ಮಾತನಾಡಿದ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ‘ಮೃತ ಪಿ.ಎಸ್.ಗೌಡರ್ ಹಲವು ವಿಷಯಗಳ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಸಹೋದರರಾದ ಶ್ರೀನಿವಾಸ ಹಾಗೂ ನಾಗರಾಜ್ ಅವರ ಬಗ್ಗೆ ಬರೆದಿದ್ದು, ಸಹೋದರ ತೊಂದರೆ ಹಾಗೂ ಬರಬೇಕಾದ ಒಟ್ಟು ಎಂಬತ್ತು ಲಕ್ಷ ಹಣ ಬರಬೇಕಿತ್ತು. ಈ ಎಲ್ಲ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ಇದೇ ಕಾರಣಕ್ಕೆ ಸಂಬಂಧಿಸಿ ಪಿಎಸ್ ಗೌಡರ ಸಹೋದರರಾದ ನಾಗರಾಜ್, ಶ್ರೀನಿವಾಸ ಹಾಗೂ ಕೆಆರ್ ಐ ಡಿಎಲ್ ಸೇರಿಸಿ ಸಂತೆ ಬೆನ್ನೂರ ಪೊಲೀಸ ಠಾಣೆಯಲ್ಲಿ ಐಪಿಸಿ ಕಲಂ 306 ಅನ್ವಯ ಕೇಸ್ ಬುಕ್ ಮಾಡಲಾಗಿದೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಹೇಳಿದ್ದಾರೆ.

ಇದನ್ನೂ ಓದಿ:ಕೆಆರ್​ಐಡಿಎಲ್​ನಿಂದ ಬಿಲ್​ ಬಾಕಿ: ಗುತ್ತಿಗೆದಾರ ನೇಣಿಗೆ ಶರಣು

ಘಟನೆ ವಿವರ

ಇಂದು(ಮೇ.31) ಸಂತೇಬೆನ್ನೂರಿನ ಗುತ್ತಿಗೆದಾರ ಪಿ.ಎಸ್ ಗೌಡರ್ (48) ಡೆತ್​ನೋಟ್​ ಬರೆದಿಟ್ಟು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತದಿಂದ 2023-24ನೇ ಸಾಲಿನ ಬಾಕಿ ಬಿಲ್​ ಪಾವತಿಯಾಗದ ಹಿನ್ನೆಲೆಯಲ್ಲಿ ಮನನೊಂದ ಹೀಗೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾರೆ. ಗುತ್ತಿಗೆದಾರ ಪಿ.ಎಸ್ ಗೌಡರ್ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಲ್ಲಿ ವಾಸಿಸುತ್ತಿದ್ದರು. ಸಂತೇಬೆನ್ನೂರಿನ ಕೃಷಿ ಇಲಾಖೆ ಆವರಣದಲ್ಲಿ 2023-24ರಲ್ಲಿ ನಡೆದ ಕಾಮಗಾರಿಗೆ ಸಂಬಂಧಿಸಿದ ಹಣ ಬಿಡುಗಡೆ ಮಾಡದೆ ಕೆಆರ್​ಡಿಎಲ್ ಅಧಿಕಾರಿಗಳು ಸತಾಯಿಸುತ್ತಿದ್ದರು. ಅಲ್ಲದೆ ಇವರ ಇಬ್ಬರು ಸಹೋದರರು ಹಣಕಾಸು ವಿಚಾರವಾಗಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:29 pm, Fri, 31 May 24