AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಕಿ ಬಿಲ್​​ ಪಾವತಿಗೆ ನವೆಂಬರ್​​ ಡೆಡ್​​ಲೈನ್​​: ಗಡುವು ತಪ್ಪಿದರೆ ಕಮಿಷನ್​​ ದಂಧೆಯ ದಾಖಲೆ ಬಿಡುಗಡೆ ಮಾಡೋದಾಗಿ ಸರ್ಕಾರಕ್ಕೆ ಗುತ್ತಿಗೆದಾರರ ಸಂಘ ಎಚ್ಚರಿಕೆ

ನವೆಂಬರ್ ಒಳಗೆ ಬಾಕಿ ಬಿಲ್ ಪಾವತಿಸದಿದ್ದರೆ ಕಾಂಗ್ರೆಸ್ ಸರ್ಕಾರದ ಕಮಿಷನ್ ದಂಧೆಯ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಖಡಕ್ ಎಚ್ಚರಿಕೆ ನೀಡಿದ್ದಾರೆ. 4 ವರ್ಷದಿಂದ ಹಣ ಬಾರದೆ 1.5 ಲಕ್ಷ ಗುತ್ತಿಗೆದಾರರು ಪರದಾಡುತ್ತಿದ್ದಾರೆ. ಸುಮಾರು 8 ಇಲಾಖೆಯಲ್ಲಿ ಸರಿಸುಮಾರು 38 ಸಾವಿರ ಕೋಟಿ ಹಣ ಬಾಕಿ ಇದೆ ಎಂದು ಅವರು ತಿಳಿಸಿದ್ದಾರೆ.

ಬಾಕಿ ಬಿಲ್​​ ಪಾವತಿಗೆ ನವೆಂಬರ್​​ ಡೆಡ್​​ಲೈನ್​​: ಗಡುವು ತಪ್ಪಿದರೆ ಕಮಿಷನ್​​ ದಂಧೆಯ ದಾಖಲೆ ಬಿಡುಗಡೆ ಮಾಡೋದಾಗಿ ಸರ್ಕಾರಕ್ಕೆ ಗುತ್ತಿಗೆದಾರರ ಸಂಘ ಎಚ್ಚರಿಕೆ
ಗುತ್ತಿಗೆದಾರ ಸಂಘದ ಅಧ್ಯಕ್ಷ ಮಂಜುನಾಥ್ Image Credit source: Tv9 Kannada
Shivaraj
| Edited By: |

Updated on: Sep 30, 2026 | 12:39 PM

Share

ಬೆಂಗಳೂರು, ಸೆಪ್ಟೆಂಬರ್​ 30: ಬಾಕಿ ಹಣ ಬಿಡುಗಡೆಗೆ ಕೋರಿ ಸಿಎಂಗೆ ಪತ್ರ ಬರೆದ ಬೆನ್ನಲ್ಲೇ ಗುತ್ತಿಗೆದಾರರ ಸಂಘ ಸರ್ಕಾರದ ವಿರುದ್ಧ ಬಿಗ್​​ ಬಾಂಬ್​​ ಸಿಡಿಸಿದೆ. ನವೆಂಬರ್ ಒಳಗೆಬಾಕಿ ಹಣ ಬಿಡುಗಡೆ ಮಾಡದಿದ್ದರೆ ಕಮಿಷನ್ ದಂಧೆಯ ದಾಖಲೆ ಬಿಡುಗಡೆ ಮಾಡೋದಾಗಿ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದೆ. ಕಾಂಗ್ರೆಸ್​​ ಸರ್ಕಾರದಲ್ಲಿ ಕಳೆದ ಸರ್ಕಾರಕ್ಕಿಂತಲೂ ಕಮಿಷನ್ ಜಾಸ್ತಿ ಇದ್ದು, ಅದು ಎಷ್ಟು ಪರ್ಸೆಂಟೇಜ್ ಅಂತ ಕೇಳಬೇಡಿ ಎಂದು ರಾಜ್ಯ ಗುತ್ತಿಗೆದಾರ ಸಂಘದ ಅಧ್ಯಕ್ಷ ಮಂಜುನಾಥ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

‘ಟೆಂಡರ್ ಆದ್ರೆ ಶಾಸಕರ ಬಳಿ ಮೊದಲು ಹೋಗಬೇಕು’

ಇತ್ತೀಚಿಗೆ ಎಂಎಲ್‌ಎಗಳು ಕೂಡ ಕಾಂಟ್ರ್ಯಾಕ್ಟ್ ವಿಚಾರದಲ್ಲಿ ತಲೆತೂರಿಸುತ್ತಿದ್ದಾರೆ. ಇದರಿಂದ ನಿಜವಾದ ಕಾಂಟ್ರ್ಯಾಕ್ಟರ್‌ಗಳು ಮಾಯ ಆಗುತ್ತಿದ್ದಾರೆ. ಇದರಿಂದಾಗಿ ಒಂದು ಕಡೆ ಕೆಲಸವೂ ಇಲ್ಲ, ಮತ್ತೊಂದೆಡೆ ಹಣವೂ ಇಲ್ಲ ಎಂಬಂತಾಗಿದೆ. ಟೆಂಡರ್ ಆದ್ರೆ ಶಾಸಕರ ಬಳಿ ಮೊದಲು ಹೋಗಬೇಕು. ಅವರು ಓಕೆ ಅಂದಮೇಲೆ ಕಾಮಗಾರಿ ಶುರು ಆಗುತ್ತೆ. ಈ ವಿಚಾರ ಸಿಎಂಗೂ ಗೊತ್ತಿದೆ. ನಮ್ಮ ಹಣ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಆಗುತ್ತಿದ್ದು, ಮೊದಲು ನಾವು ಕೆಲಸ ಮಾಡಿರುವ ಹಣ ಕೊಡಿ ಎಂದು ಗುತ್ತಿಗೆದಾರರ ಸಂಘ ಸರ್ಕಾರವನ್ನು ಆಗ್ರಹಿಸಿದೆ.

LIVE TV

ಇದನ್ನೂ ಓದಿ: ಸರ್ಕಾರ ಆರ್ಥಿಕ ಸಂಕಷ್ಟದಲ್ಲಿರುವಾಗಲೇ ಸಿಡಿದೆದ್ದ ಗುತ್ತಿಗೆದಾರರ ಸಂಘ: ಬಾಕಿ 38,000 ಕೋಟಿ ರೂ. ಬಿಡುಗಡೆಗೆ ಆಗ್ರಹ

‘8 ಇಲಾಖೆಯಲ್ಲಿ ಸರಿಸುಮಾರು 38 ಸಾವಿರ ಕೋಟಿ ಹಣ ಬಾಕಿ’

4 ವರ್ಷದಿಂದ ಹಣ ಬಾರದೆ 1.5 ಲಕ್ಷ ಗುತ್ತಿಗೆದಾರರು ಪರದಾಡುತ್ತಿದ್ದಾರೆ. ಕೆಂಪಣ್ಣರನ್ನು ಬಳಸಿಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಆದರೆ ಸಿದ್ದರಾಮಯ್ಯ 3 ವರ್ಷ ಸಿಎಂ ಆಗಿ ನಮಗೆ ಯಾವುದೇ ನೆರವು ನೀಡಿಲ್ಲ. ನಂತರ ಅಂದಿನ ಡಿಸಿಎಂ ಆಗಿದ್ದ ಡಿ.ಕೆ.ಶಿವಕುಮಾರ್ ಪ್ರತಿಭಟನಾ ಜಾಗಕ್ಕೆ ಬಂದು ಭರವಸೆ ನೀಡಿದ್ರು. ಬಳಿಕ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಡಿಕೆಶಿ ಅಧಿಕಾರಕ್ಕೆ ಬಂದ್ರು. ಅವರನ್ನು ಗುತ್ತಿಗೆದಾರರು ಭೇಟಿಯಾದಾಗ ಜೂನ್ 30ಕ್ಕೆ ಹಣ ಬಿಡುಗಡೆ ಮಾಡ್ತೇವೆ ಎಂದಿದ್ದರು. ಸುಮಾರು 8 ಇಲಾಖೆಯಲ್ಲಿ ಸರಿಸುಮಾರು 38 ಸಾವಿರ ಕೋಟಿ ಹಣ ಬಾಕಿ ಇದೆ ಎಂದು ಮಂಜುನಾಥ್​​ ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
Shivaraj
Shivaraj