
ಬೆಂಗಳೂರು, ಆಗಸ್ಟ್ 23: ಬೆಂಗಳೂರಿನಲ್ಲಿ ಮಳೆ ಜೊತೆ ಥಂಡಿಯ ವಾತಾವರಣ ಕಂಡುಬರುತ್ತಿದೆ. ಕಳೆದೊಂದು ವಾರದಿಂದ ಬಿಟ್ಟು ಬಿಟ್ಟು ಮಳೆ ಹಾಗೂ ಚಳಿಯ ವಾತವರಣ ಇದ್ದು, ಮಕ್ಕಳಲ್ಲಿ ವೈರಾಣು ಜ್ವರದ ಕೇಸ್ ಉಲ್ಬಣವಾಗಿವೆ. ನೆಗಡಿ ಕೆಮ್ಮು, ಶೀತದ ಸಮಸ್ಯೆ ಕಂಡುಬರುತ್ತಿದ್ದು ಮಕ್ಕಳನ್ನು ಹೈರಾಣು ಮಾಡುತ್ತಿದೆ. ಕಳೆದ ಹದಿನೈದು ದಿನಗಳಲ್ಲಿ ಶೇ 15 ರಿಂದ 20 ರಷ್ಟು ಜ್ವರ ಪ್ರಕರಣಗಳು ಹೆಚ್ಚಾಗಿವೆ. ಮಕ್ಕಳಲ್ಲಿ ಜ್ವರ, ಕೆಮ್ಮು, ಗಂಟಲು ನೋವು, ಕೆಮ್ಮು, ಶೀತ, ನೆಗಡಿ ವಾಂತಿ ಪ್ರಕರಣಗಳು ಹೆಚ್ಚಾಗಿದೆ. ಬದಲಾದ ವಾತವರಣ ಹಿನ್ನಲೆ ಡೆಂಘಿ ಟೈಫಾಯ್ಡ್, ವೈರಲ್ ಜ್ವರ ಕೂಡಾ ಕಾಣಿಸಿಕೊಳ್ಳುತ್ತಿದೆ.
ವೈರಾಣು ಜ್ವರ ಹಾಗೂ ಅಪ್ಪರ್ ರೆಸ್ಪರೇಟರಿ, ನ್ಯೂಮೋನಿಯಾ ಪ್ರಕರಣಗಳು ಪುಟಾಣಿ ಮಕ್ಕಳ ಜೀವ ಹಿಂಡುತಿವೆ. ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗದಲ್ಲಿ ವೈರಾಣು ಜ್ವರ ಶೇ 20 ರಷ್ಟು ಏರಿಕೆ ಕಂಡಿದೆ. ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಪ್ರತಿನಿತ್ಯ 550 ರಿಂದ 600 ಹೊರ ರೋಗಿಗಳು ಚಿಕಿತ್ಸಗೆ ಬರುತ್ತಿದ್ದಾರೆ. ಈ ಪೈಕಿ ಶೇ 30 ರಷ್ಟು ಮಕ್ಕಳಲ್ಲಿ ವೈರಾಣು ಜ್ವರ ಕಂಡು ಬರುತ್ತಿದೆ. ಜತೆಗೆ ಕೆಸಿ ಜನರಲ್ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ವಾಣಿವಿಲಾಸ್ ಆಸ್ಪತ್ರೆ ಸೇರಿದ್ದಂತೆ ಬಹುತೇಕ ಆಸ್ಪತ್ರೆಗಳಲ್ಲಿ ದಾಖಲಾಗುವ ಅರ್ದದಷ್ಟು ಹೊರ ರೋಗಿಗಳ ವಿಭಾಗದಲ್ಲಿ ವೈರಾಣು ಜ್ವರ ಕಂಡು ಬರ್ತಿದೆ.
ಮನೆಗಳಲ್ಲಿ ಮಕ್ಕಳಿಂದ ಮನೆ ಮಂದಿಗೆಲ್ಲ ಈ ವೈರಾಣು ಸೋಂಕು ಹರಡುತಿದ್ದು, ಎಚ್ಚರಿಕೆ ವಹಿಸುವಂತೆ ವೈದ್ಯರು ಸೂಚಸಿದ್ದಾರೆ. ಅದರಲ್ಲೂ ಚಿಣ್ಣರಲ್ಲಿ ಕಂಡು ಬರುತ್ತಿರುವ ಸೋಂಕಿನ ಬಗ್ಗೆ ಹೆಚ್ಚು ನಿಗಾವಹಿಸುವಂತೆ ಪೋಷಕರಿಗೆ ಸಲಹೆ ನೀಡಿದ್ದಾರೆ.
ಮಕ್ಕಳಲ್ಲಿ ವೈರಾಣು ಜ್ವರ, ಕೆಮ್ಮು, ನೆಗಡಿ, ಅತಿಸಾರ ವಾಂತಿ, ಬೇಧಿ ಪ್ರಕರಣಹಳು ಹೆಚ್ಚಾಗಲು ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಹವಮಾನ ಕಾರಣ ಎಂದು ವೈದ್ಯರು ಹೇಳಿದ್ದಾರೆ. ವೈರಾಣು ಜ್ವರದ ಜೊತೆ ಡೆಂಘಿ ಕೇಸ್ ಕೂಡಾ ವರದಿಯಾಗುತ್ತಿವೆ. ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ಕೆಸಿ ಜನರಲ್ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ಸಿವಿ ರಾಮನ್ ನಗರ ಆಸ್ಪತ್ರೆ, ವಾಣಿವಿಲಾಸ್ ಆಸ್ಪತ್ರೆ ಸೇರಿದ್ದಂತೆ ಬಹುತೇಕ ಆಸ್ಪತ್ರೆಗಳಲ್ಲಿ ದಾಖಲಾಗುವ ಅರ್ದದಷ್ಟು ಹೊರ ರೋಗಿಗಳ ವಿಭಾಗದಲ್ಲಿಯೂ ವೈರಾಣು ಜ್ವರ ಕಂಡು ಬರ್ತಿದೆ. ಹೀಗಾಗಿ ಆರೋಗ್ಯದ ಬಗ್ಗೆ ಜನರು ಕೊಂಚ ಎಚ್ಚರ ವಹಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ನಿಂಬೆ ಜ್ಯೂಸ್ ಕುಡಿಯುತ್ತಿದ್ದೀರಾ? ಹಾಗಿದ್ದರೆ ಈ ಮಾಹಿತಿ ನಿಮಗಾಗಿ
ಒಟ್ಟಿನಲ್ಲಿ ಮಳೆ, ಚಳಿಯಾದ ವಾತವರಣ ಹಿನ್ನಲೆ ಜನರು ಸ್ವಚ್ಛತೆ ಕಾಪಾಡುವುದು ಮತ್ತು ಬಿಸಿ ನೀರು ಕುಡಿಯುವುದು, ಆರೋಗ್ಯಕರ ಆಹಾರ ಸೇವನೆ ಮಾಡಬೇಕಾದ ಅಗತ್ಯ ಇದೆ ಎಂಬ ಸಲಹೆಯನ್ನು ವೈದ್ಯರು ನೀಡಿದ್ದಾರೆ.