ನನ್ನ ಬಳಿ 19 ಸಿಡಿಗಳಿವೆ ಎಂದಿದ್ದ ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿಗೆ ನೋಟಿಸ್ ಜಾರಿ

ನನ್ನ ಬಳಿ 19 ಸಿಡಿಗಳಿವೆ ಎಂದು ಹೇಳಿಕೆ ನೀಡಿದ್ದ ಬಳ್ಳಾರಿ ಮೂಲದ ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿಗೆ ನೋಟಿಸ್ ಜಾರಿಯಾಗಿದೆ. ಕಬ್ಬನ್‌ಪಾರ್ಕ್‌ ಠಾಣೆ ಪೊಲೀಸರಿಂದ ನೋಟಿಸ್ ಜಾರಿಯಾಗಿದೆ.

ನನ್ನ ಬಳಿ 19 ಸಿಡಿಗಳಿವೆ ಎಂದಿದ್ದ ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿಗೆ ನೋಟಿಸ್ ಜಾರಿ
ರಾಜಶೇಖರ್ ಮುಲಾಲಿ
Follow us
KUSHAL V
|

Updated on:Mar 06, 2021 | 8:12 PM

ಬೆಂಗಳೂರು: ನನ್ನ ಬಳಿ 19 ಸಿಡಿಗಳಿವೆ ಎಂದು ಹೇಳಿಕೆ ನೀಡಿದ್ದ ಬಳ್ಳಾರಿ ಮೂಲದ ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿಗೆ ನೋಟಿಸ್ ಜಾರಿಯಾಗಿದೆ. ಕಬ್ಬನ್‌ಪಾರ್ಕ್‌ ಠಾಣೆ ಪೊಲೀಸರಿಂದ ನೋಟಿಸ್ ಜಾರಿಯಾಗಿದೆ. ರಾಜಶೇಖರ್ ಮುಲಾಲಿಗೆ ಸೋಮವಾರ ಬೆಳಗ್ಗೆ 11ಕ್ಕೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ.ಮುಲಾಲಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಠಾಣೆಗೆ ದೂರು ಸಲ್ಲಿಸಲಾಗಿತ್ತು. ಕಬ್ಬನ್‌ಪಾರ್ಕ್ ಪೊಲೀಸ್‌‌ ಠಾಣೆಗೆ ಮಂಡ್ಯದ ಮಾನವ ಹಕ್ಕು ಸೇವಾ ಸಮಿತಿ ಅಧ್ಯಕ್ಷೆ ಇಂದಿರಾ ದೂರು ನೀಡಿದ್ದರು.

‘ಏರೋಪ್ಲೇನ್ ಏಕೆ ಬೇರೆ ಏನಾದರು ಇದ್ದರೆ ಹತ್ತಿಸಲಿ’ ಇನ್ನು, ಈ ಹಿಂದೆ ಮಾತನಾಡಿದ್ದ ಮುಲಾಲಿ, 6 ಸಚಿವರು ನ್ಯಾಯಾಲಯದ ಮೊರೆ ಹೋದ ವಿಚಾರವಾಗಿ ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿಕೊಂಡರಂತೆ. ತಪ್ಪು ಮಾಡದೆ ಇದ್ದರೆ ಇವರು ಏಕೆ ಹೆದರಬೇಕು ಎಂದು ರಾಜಶೇಖರ ಮುಲಾಲಿ ಪ್ರಶ್ನೆ ಹಾಕಿದರು. ಜೊತೆಗೆ, ನನ್ನನ್ನು ಪ್ರತಿವಾದಿ ಮಾಡಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಸಹ ಹೇಳಿದರು.

CD ಇದೆ ಎಂದು ಹೇಳೋರನ್ನು ಏರೋಪ್ಲೇನ್ ಹತ್ತಿಸಿ ಎಂಬ H.D.ಕುಮಾರಸ್ವಾಮಿ ಹೇಳಿಕೆಗೆ ಮುಲಾಲಿ ತಿರುಗೇಟು ಕೊಟ್ಟರು. ಏರೋಪ್ಲೇನ್ ಏಕೆ ಬೇರೆ ಏನಾದರು ಇದ್ದರೆ ಹತ್ತಿಸಲಿ. ನಾವೇನು ಚಿತ್ರನಟಿಯನ್ನು ಮದುವೆಯಾಗಿಲ್ಲ. ಅವರು ರಾಜ್ಯದ ದುರಂತ ಮುಖ್ಯಮಂತ್ರಿ ಎಂದು ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ ಹೇಳಿಕೆ ನೀಡಿದರು.

ರಮೇಶ್​ ಜಾರಕಿಹೊಳಿ ಅಶ್ಲೀಲ ಸಿ.ಡಿ. ಬಯಲಿಗೆ ಬಿದ್ದ ನಂತರ ಸಂತ್ರಸ್ತ ಮಹಿಳೆಯರು ನನ್ನನ್ನು ಸಂಪರ್ಕಿಸಿದರೆ ಸಿ.ಡಿ. ಬಿಡುಗಡೆ ಮಾಡಲು ಸಹಾಯ ಮಾಡುತ್ತೇನೆ ಎಂಬ ಹೇಳಿಕೆ ಕೊಟ್ಟು ಸಂಚಲನ ಮೂಡಿಸಿದ್ದ ಸಾಮಾಜಿಕ ಹೋರಾಟಗಾರ ರಾಜಶೇಖರ್ ಮುಲಾಲಿ, ಇಂದು ಅದೇ ವಿಚಾರದ ಕುರಿತಾಗಿ ಮತ್ತೆ ಮಾತನಾಡಿದ್ದರು. ಉತ್ತರ ಕರ್ನಾಟಕದ ಶಾಸಕರನ್ನು ಸಿಲುಕಿಸಲು ಬೆಂಗಳೂರಿನಲ್ಲಿ ಇಂತಹ ದೊಡ್ಡ ಜಾಲವಿದೆ. ಶೇ. 60ರಷ್ಟು ಶಾಸಕರು ಇಂತಹ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ. ಉತ್ತರ ಕರ್ನಾಟಕದ ಶಾಸಕರು ಮುಗ್ಧರು, ಪಾಪದವರು ಬೆಂಗಳೂರಿನವರಂತೆ ಸ್ಮಾರ್ಟ್ ಅಲ್ಲ ಎಂದು ರಾಜಶೇಖರ್ ಮುಲಾಲಿ ಯಾದಗಿರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಯಾವುದೇ ಸಂತ್ರಸ್ತರಿಗೆ ಜೀವ ಭಯವಿದ್ದರೆ ನಾನು ನ್ಯಾಯ ಒದಗಿಸುವೆ’ ಈ ಶಾಸಕರೆಲ್ಲರೂ ಪ್ರವೃತ್ತಿಯಿಂದಲೇ ಇಂತಹ ಕೆಲಸ ಮಾಡುತ್ತಿದ್ದಾರೆ. ಧೂಮಪಾನ, ಮದ್ಯಪಾನದಂತೆ ಇದನ್ನೂ ಮಾಡುತ್ತಿದ್ದಾರೆ. ಇಂಥವರನ್ನ ಟಾರ್ಗೆಟ್ ಮಾಡುವ ಜಾಲ ಬೆಂಗಳೂರಿನಲ್ಲಿದೆ. ಈ ಜಾಲಕ್ಕೆ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಶಾಸಕರೇ ಟಾರ್ಗೆಟ್‌. ನಮ್ಮ ಭಾಗದ ಶಾಸಕರು ಮೈ ಮರೆಯದೆ ಎಚ್ಚರಿಕೆಯಿಂದ ಇರಬೇಕು. ಶಾಸಕರಾದವರಿಗೆ ಸಂಸ್ಕೃತಿ, ಸಂಸ್ಕಾರ, ಬುದ್ಧಿ ಇರಬೇಕು‌, ಭಾಗಿಯಾಗುವ ಮುನ್ನ ಹೆಂಡತಿ, ಮಕ್ಕಳನ್ನು ನೆನಪಿಸಿಕೊಳ್ಳಲಿ. ಒಂದು ವೇಳೆ ಯಾವುದೇ ಸಂತ್ರಸ್ತರಿಗೆ ಜೀವ ಭಯವಿದ್ದರೆ ನಾನು ನ್ಯಾಯ ಒದಗಿಸುವೆ ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಮತ್ತೊಂದು ಸುತ್ತಿನ ಅನುಮಾನದ ಹೊಗೆ ಎಬ್ಬಿಸಿದ್ದಾರೆ.

ಕರ್ನಾಟಕದಲ್ಲಿ 224 ಶಾಸಕರ ಪೈಕಿ 60 ಪ್ರತಿಶತ ಶಾಸಕರು ಇಂಥ ಪ್ರಕ್ರಿಯೆಯಲ್ಲಿ ಭಾಗಿ‌ಯಾಗಿದ್ದಾರೆ. ಇದು ಅವರಿಗೆ ಪ್ರವೃತ್ತಿ ಎಂದು ಹೇಳಿರುವುದು ಪಕ್ಷಾತೀತವಾಗಿ ಶಾಸಕರುಗಳ ಮೇಲೆ ಸಂದೇಹ ಪಡುವಂತೆ ಆಗಿದೆ. ಇನ್ನೊಂದೆಡೆ ದಿನೇಶ್ ಕಲ್ಲಹಳ್ಳಿ ಸಹ ತನ್ನ ಬಳಿ ಇನ್ನಷ್ಟು ರಾಜಕಾರಣಿಗಳ ವಿಡಿಯೋ ಇರುವುದಾಗಿ ಹೇಳಿರುವುದು ರಾಜ್ಯ ರಾಜಕಾರಣದಲ್ಲಿ ಒಂದಷ್ಟು ಅನಿರೀಕ್ಷಿತ ಬೆಳವಣಿಗೆಗಳಿಗೆ ಸಾಕ್ಷಿಯಾಗುವ ಸಾಧ್ಯತೆ ಇದೆ.

‘ಅದು ಬಿಟ್ಟರೆ ಮಾಧ್ಯಮಗಳ ವಿರುದ್ಧ ದುರುದ್ದೇಶ ಇಲ್ಲ’ ಕೋರ್ಟ್‌ಗೆ ಹೋದ 6 ಸಚಿವರಿಗೆ ಮಾತ್ರ ಭಯ ಅಲ್ಲ. 19 ನಾಯಕರ ಸಿಡಿ ಇದೆ ಅಂತಾ ಎಲ್ಲೆಡೆ ಹೇಳ್ತಿದ್ದಾರೆ. ಹಾಗಾಗಿ, ನಮ್ಮ ಗೌರವ ಕಾಪಾಡಿಕೊಳ್ಳಲು ಕೋರ್ಟ್ ಮೊರೆ ಹೋಗುತ್ತಿದ್ದೇವೆ ಎಂದು ಟಿವಿ9 ಬಳಿ ಸಚಿವ ಕೆ.ಸಿ.ನಾರಾಯಣ ಗೌಡ ಹೇಳಿದರು. ಅದು ಬಿಟ್ಟರೆ ಮಾಧ್ಯಮಗಳ ವಿರುದ್ಧ ದುರುದ್ದೇಶ ಇಲ್ಲ. ಯಾರಾದರೂ ದುರ್ಬಳಕೆ ಮಾಡಬಹುದಾದ ಸಾಧ್ಯತೆಯಿದೆ. ಹೀಗಾಗಿ, ಕೋರ್ಟ್ ಮೊರೆ ಹೋಗುತ್ತಿದ್ದೇವೆ ಎಂದು ಟಿವಿ9ಗೆ ಕೆ.ಸಿ.ನಾರಾಯಣ ಗೌಡ ಹೇಳಿದರು.

ಇತ್ತ, ನಮ್ಮ ಆತ್ಮ ರಕ್ಷಣೆಗಾಗಿ ಕೋರ್ಟ್‌ ಮೊರೆ ಹೋಗಿದ್ದೇವೆ ಎಂದು ಟಿವಿ9ಗೆ ಸಚಿವ ಎಸ್‌.ಟಿ.ಸೋಮಶೇಖರ್ ಹೇಳಿದರು. ಕೋರ್ಟ್ ಮೊರೆ ಹೋಗಿದ್ದಕ್ಕೆ ಬೇರೆ ದುರುದ್ದೇಶ ಇಲ್ಲ. ಕ್ಷಣ ಮಾತ್ರದಲ್ಲಿ ಷಡ್ಯಂತ್ರ ರೂಪಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸಲು ಕೋರ್ಟ್ ಮೊರೆ ಹೋಗಿದ್ದೇವೆ ಎಂದು ಎಸ್‌.ಟಿ.ಸೋಮಶೇಖರ್ ಹೇಳಿದರು.

‘ನಾನು ಯಾವ ಕೋರ್ಟ್‌ಗೂ ಹೋಗುವುದಿಲ್ಲ’  ಈ ಮಧ್ಯೆ, ನಾನು ಯಾವ ಕೋರ್ಟ್‌ಗೂ ಹೋಗುವುದಿಲ್ಲ ಎಂದು ಟಿವಿ9ಗೆ ಬಿಜೆಪಿ ಶಾಸಕ ಮುನಿರತ್ನ ಹೇಳಿದರು. ನನಗೆ ಬೇಕಾಗಿಲ್ಲ, ಇದು ನನಗೆ ಬೇಡದ ವಿಚಾರ. ನಾನು ಕೋರ್ಟ್‌ಗೆ ಹೋಗುವ ಅಗತ್ಯವಿಲ್ಲ ಎಂದು ಮುನಿರತ್ನ ಹೇಳಿದರು. ರಾಜಕಾರಣದಲ್ಲಿ ಸ್ನೇಹಿತರಿಗಿಂತ ಶತ್ರುಗಳು ಬೇಗ ಸಿಕ್ತಾರೆ. ಅಧಿಕಾರದಲ್ಲಿದ್ದಾಗ ಹಿತ ಶತ್ರುಗಳು ಹೆಚ್ಚು ಇರುತ್ತಾರೆ. ಅಧಿಕಾರ ಇಲ್ಲದಿದ್ದಾಗ ಬಹಿರಂಗ ಶತ್ರುಗಳು ಇರುತ್ತಾರೆ. ಈ ಹಿಂದೆ ಗಣ್ಯಾತಿಗಣ್ಯರೇ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ ಎಂದು ಸಹ ಹೇಳಿದರು.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಸಿಡಿಯಲ್ಲಿರುವ ಲೇಡಿಗಾಗಿ ಆರ್​ಟಿ ನಗರದಲ್ಲಿ ಮಹಿಳಾ ಪಿಜಿಗಳನ್ನೆಲ್ಲಾ ಜಾಲಾಡಿದ ಖಾಕಿ ಪಡೆ!

Published On - 8:02 pm, Sat, 6 March 21

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ