ಬೆಂಗಳೂರು, ಡಿ.21: ಕೇರಳದಲ್ಲಿ ಕೋವಿಡ್ (Covid 19) ಹೊಸ ವೈರಸ್ ಅಬ್ಬರಿಸುತ್ತಿರೋ ಹೊತ್ತಲ್ಲೇ ರಾಜ್ಯದಲ್ಲೂ ಕೋವಿಡ್ ಆತಂಕ ಶುರುವಾಗಿದೆ. ಇತ್ತ ರಾಜ್ಯ ರಾಜಧಾನಿ ಬೆಂಗಳೂರಲ್ಲೂ ಕೋವಿಡ್ ಎದುರಿಸೋಕೆ ಬಿಬಿಎಂಪಿ (BBMP) ಸಜ್ಜಾಗ್ತಿದೆ. ಹೊಸ ವರ್ಷ, ಕ್ರಿಸ್ ಮಸ್ ಆಚರಣೆಯಿಂದ ಕೊರೊನಾ ಹೆಚ್ಚಾಗುತ್ತ ಎಂಬ ಭಯ ಕಾಡುತ್ತಿದೆ. ಇದರ ನಡುವೆ ಜನವರಿ ಮೊದಲ ವಾರ ರಾಜ್ಯದಲ್ಲಿ ಕೊರೊನಾ ಸ್ಫೋಟಗೊಳ್ಳುವ ಸಾಧ್ಯತೆ ಇದೆ ಎಂದು IISC ತಜ್ಞರು ಹಾಗೂ TAC ಎಕ್ಸ್ಪರ್ಟ್ ತಂಡ ಮಾಹಿತಿ ನೀಡಿದೆ.
ಜನವರಿ ಮೊದಲ ವಾರದ ಬಳಿಕ ರಾಜ್ಯದಲ್ಲಿ ಕೊರೊನಾ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ IISC ತಜ್ಞರು ಹಾಗೂ TAC ಎಕ್ಸ್ಪರ್ಟ್ ತಂಡ ವರದಿ ನೀಡಿದೆ. ಜನವರಿ ಮೊದಲ ವಾರದಲ್ಲಿ ಅತಿ ಹೆಚ್ಚು ಕೇಸ್ ದಾಖಲಾಗುವ ಸಾಧ್ಯತೆ ಇದೆ. ಜನವರಿ ಮೊದಲ ವಾರಿ ಕೊರೊನಾ ಏರಿಕೆಯಾಗಿ ಫೆಬ್ರವರಿ ಕೊನೆ ವಾರ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೇರಳದಲ್ಲಿ ಕೇಸ್ ಏರಿಕೆ ಕಂಡ ಎರಡರಿಂದ ಮೂರು ವಾರಗಳ ನಂತರ ರಾಜ್ಯದಲ್ಲಿ ಕೇಸ್ ಏರಿಕೆ ಸಾಧ್ಯತೆ ಇದೆ. ಜನವರಿ ತಿಂಗಳು ಡೇಂಜರ್ ಆಗುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯದಲ್ಲಿ ಅತಿ ಹೆಚ್ಚು ಕೊವಿಡ್ ಟೆಸ್ಟ್ ಮಾಡಲು ನಿರ್ಧಾರ ಮಾಡಲಾಗಿದೆ. ಬೆಂಗಳೂರಿನಲ್ಲಿ ಪ್ರತಿ ದಿನ 2,500 ಕೊವಿಡ್ ಟೆಸ್ಟ್ ಮಾಡಲು ನಿರ್ಧರಿಸಲಾಗಿದ್ದು ILI, SARI ರೋಗಿಗಳಿಗೆ ಕಡ್ಡಾಯವಾಗಿ ಟೆಸ್ಟ್ ಮಾಡಲು ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಕೇರಳದಲ್ಲಿ ಒಂದೇ ದಿನ 300ಕ್ಕೂ ಹೆಚ್ಚು ಕೋವಿಡ್ ಪ್ರಕರಣ, ಮೂವರು ಸಾವು
ಆರೋಗ್ಯ ಇಲಾಖೆ ಸೂಚನೆ ಬೆನ್ನಲ್ಲೆ ಬಿಬಿಎಂಪಿ ವ್ಯಾಪ್ತಿಯಲ್ಲಾಗಿರೋ ಸಿದ್ಧತೆಗಳನ್ನ ಪರಿಶೀಲಿಸಲು ಸಜ್ಜಾಗಿರೋ ಪಾಲಿಕೆ, ಆರೋಗ್ಯಾಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ಪಡೆದಿದೆ. ಸದ್ಯ ಪಾಲಿಕೆ ವ್ಯಾಪ್ತಿಯಲ್ಲಿ 450 ಲ್ಯಾಬ್ ಟೆಕ್ನಿಷಿಯನ್,350 ವೈದ್ಯರು, 2 ಸಾವಿರ ಆಕ್ಸಿಜನ್ ಕಾನ್ಸೆಟ್ರೇಟರ್ಸ್ ಗಳ ಜೊತೆಗೆ 144 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇವೆಗೆ ಸಜ್ಜಾಗಿದೆ ಅಂತಾ ಬಿಬಿಎಂಪಿ ಆರೋಗ್ಯ ವಿಭಾಗ ಮಾಹಿತಿ ಬಿಚ್ಚಿಟ್ಟಿದೆ
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ