ಕೊವಿಡ್ ನಿಯಮ ಉಲ್ಲಂಘಿಸಿ ಹುಟ್ಟುಹಬ್ಬ ಆಚರಣೆ ಆರೋಪ; ಎನ್ಆರ್ ರಮೇಶ್ ವಿರುದ್ಧ ದೂರು

ಜನವರಿ 14 ರ ಸಂಜೆ ಸಾರ್ವಜನಿಕರ ಕಾರ್ಯಕ್ರಮ ಆರೋಜಿಸಿದ್ದಾರೆ. ಸಾರ್ವಜನಿಕವಾಗಿ ಹುಟ್ಟುಹಬ್ಬ ಆಚರಸಿದರೂ ಪೊಲೀಸರು ಕ್ರಮ‌ಕೈಗೊಳ್ಳದ ಹಿನ್ನಲೆ ಡಿಸಿಪಿಗೆ ದೂರು ನೀಡಿ ಕಾನೂನು ರೀತ್ಯಾ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಕೊವಿಡ್ ನಿಯಮ ಉಲ್ಲಂಘಿಸಿ ಹುಟ್ಟುಹಬ್ಬ ಆಚರಣೆ ಆರೋಪ; ಎನ್ಆರ್ ರಮೇಶ್ ವಿರುದ್ಧ ದೂರು
ಛಲವಾದಿಪಾಳ್ಯದಲ್ಲಿ ಹುಟ್ಟುಹಬ್ಬ ಆಚರಿಸಿದ ಎನ್.ಆರ್.ರಮೇಶ್
Edited By:

Updated on: Jan 17, 2022 | 3:15 PM

ಬೆಂಗಳೂರು: ಕೊವಿಡ್ ನಿಯಮ (Coronavirus rules) ಉಲ್ಲಂಘಿಸಿ ಮಾಜಿ ಕಾರ್ಪೋರೇಟರ್ ಎನ್.ಆರ್.ರಮೇಶ್ ಹುಟ್ಟುಹಬ್ಬ (Birthday) ಆಚರಣೆ ಮಾಡಿರುವ ಆರೋಪದ ಮೇಲೆ ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್‌ ಅವರಿಗೆ ದೂರು ನೀಡಿದ್ದಾರೆ. ಕೆಪಿಸಿಸಿ ಲೀಗಲ್ ಸೆಲ್‌ನಿಂದ ಬೆಂಗಳೂರಿನ ಛಲವಾದಿಪಾಳ್ಯದಲ್ಲಿ ಹುಟ್ಟುಹಬ್ಬ ಆಚರಿಸಿದ ಎನ್.ಆರ್.ರಮೇಶ್ ವಿರುದ್ಧ ಕೇಸ್ (Case) ದಾಖಲಿಸಲಾಗಿದೆ. ಜನವರಿ 14 ರ ಸಂಜೆ ಸಾರ್ವಜನಿಕರ ಕಾರ್ಯಕ್ರಮ ಆರೋಜಿಸಿದ್ದಾರೆ. ಸಾರ್ವಜನಿಕವಾಗಿ ಹುಟ್ಟುಹಬ್ಬ ಆಚರಸಿದರೂ ಪೊಲೀಸರು ಕ್ರಮ‌ಕೈಗೊಳ್ಳದ ಹಿನ್ನಲೆ ಡಿಸಿಪಿಗೆ ದೂರು ನೀಡಿ ಕಾನೂನು ರೀತ್ಯಾ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಮೈಸೂರು: ಕೊವಿಡ್ ನಿಯಮ ಉಲ್ಲಂಘಿಸಿ ಕಪಿಲಾ ನದಿಯಲ್ಲಿ ಪುಣ್ಯಸ್ನಾನ

ಮೈಸೂರು ಜಿಲ್ಲೆಯ ನಂಜನಗೂಡು ಶ್ರೀಕಂಠೇಶ್ವರನ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಭಕ್ತರು ಕೊವಿಡ್​ ನಿಯಮ ಉಲ್ಲಂಘಿಸಿ ಕಪಿಲಾ ನದಿಯಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಹುಣ್ಣಿಮೆ, ಸೋಮವಾರ ಪ್ರಯುಕ್ತ ಹೆಚ್ಚಿನ ಭಕ್ತರು ನದಿಯಲ್ಲಿ ಪುಣ್ಯಸ್ನಾನ ಮಾಡಿ ದೇವರಿಗೆ ಪೂಜೆ ಸಲ್ಲಿಸಿದ್ದಾರೆ.

ಹಾಸನ: ಕೊವಿಡ್ ಕೇಸ್ ಹೆಚ್ಚಿರುವ ಕಾಲೇಜುಗಳಿಗೆ ಮಾತ್ರ ರಜೆ: ಜಿಲ್ಲಾಧಿಕಾರಿ ಆರ್.ಗಿರೀಶ್

ಹಾಸನ ಜಿಲ್ಲೆಯಲ್ಲಿ 1 ವಾರ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಆದರೆ ಕೊವಿಡ್ ಕೇಸ್ ಹೆಚ್ಚಿರುವ ಕಾಲೇಜುಗಳಿಗೆ ಮಾತ್ರ ರಜೆ ನೀಡಲಾಗುತ್ತದೆ. ಕೊರೊನಾ ಹೆಚ್ಚಾದರೆ ಶಾಲಾ ಕಾಲೇಜುಗಳಿಗೆ ರಜೆ ಅನಿವಾರ್ಯ. 3-4 ದಿನಗಳ ಕೊವಿಡ್ ಕೇಸ್ ಆಧರಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಕೊವಿಡ್ ಪ್ರಕರಣ ಹೆಚ್ಚಾದರೆ ಹಾಸ್ಟೆಲ್‌ಗಳನ್ನು ಸಿಸಿಸಿ ಮಾಡುತ್ತೇವೆ. ಈಗಾಗಲೇ ಕೊವಿಡ್ ಕೇರ್ ಸೆಂಟರ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿಕೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಸದ್ಯ 26.22 ಪಾಸಿಟಿವಿಟಿ ದರ ಇದೆ. ಜಿಲ್ಲೆಯಲ್ಲಿ 4000 ಸೋಂಕಿತರು ಹೋಂ ಐಸೋಲೇಷನ್ ನಲ್ಲಿದ್ದಾರೆ, 377 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿನಿತ್ಯ 4000 ರಿಂದ 5000 ಪಾಸಿಟಿವ್ ಕೇಸ್​ಗಳು ಬರುವ ಸಾಧ್ಯತೆಯಿದೆ. ಕೊರೊನಾ ಹೆಚ್ಚಾದರೆ ಶಾಲಾ-ಕಾಲೇಜುಗಳಿಗೆ ರಜೆ ನೀಡುವುದು ಅನಿವಾರ್ಯ. ಪ್ರತಿನಿತ್ಯ 5000 ಸಾವಿರ ಜನರಿಗೆ ಕೊವಿಡ್ ಟೆಸ್ಟ್ ಮಾಡಲಾಗುತ್ತಿದೆ. ನಿನ್ನೆ 6,600 ಮಂದಿಗೆ ಟೆಸ್ಟ್ ಮಾಡಲಾಗಿದ್ದು, ಇನ್ನೂ ಹೆಚ್ಚಿಸುವಂತೆ ಸೂಚನೆ ನೀಡಲಾಗಿದೆ. ಟೆಸ್ಟ್ ನಲ್ಲಿ ಶೇ.12 ಪಾಸಿಟಿವಿಟಿ ಬಂದಿದೆ. ಶೇ.100 ರಷ್ಟು ಮಂದಿಗೆ ಮೊದಲ ಡೋಸ್, ಶೇ.88 ರಷ್ಟು ಎರಡನೇ ಡೋಸ್ ನೀಡಲಾಗಿದೆ. 49,000 15 ರಿಂದ 18 ವಯೋಮಾನದವರು ಮೊದಲ‌ ಡೋಸ್ ಪಡೆದಿದ್ದಾರೆ. ಈಗಾಗಲೇ ಸಿಸಿ ಸೆಂಟರ್​ಗಳನ್ನು ಗುರುತು ಮಾಡಲಾಗಿದೆ ಎಂದು ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ದಾರೆ.

ಬೀದರ್: ಔರಾದ್ ಪಟ್ಟಣದ ಜಾನುವಾರು ಸಂತೆಯಲ್ಲಿ ಜನ ಜಾತ್ರೆ

ಬೀದರ್ ಜಿಲ್ಲೆ ಔರಾದ್ ಎಪಿಎಂಸಿ ಆವರಣದಲ್ಲಿ ಜಾನುವಾರು ‌ಸಂತೆ ನಡೆದಿದೆ. ಮಹಾರಾಷ್ಟ್ರದ ಹತ್ತಾರು ಗ್ರಾಮದಿಂದ ಜಾನುವಾರು ಮಾರಾಟ ಖರೀದಿಗೆ ರೈತರು ಬಂದಿದ್ದಾರೆ. ದೈಹಿಕ ‌ಅಂತರ, ಮಾಸ್ಕ್ ಹಾಕದೆ ಖರೀದಿ, ಮಾರಾಟದಲ್ಲಿ ನಿರತರಾಗಿದ್ದಾರೆ.

 

ಇದನ್ನೂ ಓದಿ:
ಆರೋಗ್ಯ ಸಚಿವರ ಬಾಮೈದನಿಂದಲೇ ಕೊರೊನಾ ನಿಯಮ ಉಲ್ಲಂಘನೆ; 500 ಮಹಿಳೆಯರನ್ನು ಸೇರಿಸಿ ಓಂಶಕ್ತಿ ಯಾತ್ರೆ ಆಯೋಜನೆ

‘ದೇಶದಲ್ಲಿ ಕೊರೊನಾ ವೈರಸ್​ 3ನೇ ಅಲೆ ಪ್ರಾರಂಭ; ಮಕ್ಕಳಿಗೆ ಇಲ್ಲ ಅಪಾಯ, ಮಾರಣಾಂತಿಕವೂ ಅಲ್ಲ

Published On - 2:57 pm, Mon, 17 January 22