ಸಿಪಿಐ ಶ್ರೀಮಂತ್​ ಹಲ್ಲೆ ಕೇಸ್: ಬೆಂಗಳೂರಿಗೆ ಶಿಫ್ಟ್ ಆದ 14ದಿನದ ಬಳಿಕ ಸಿಪಿಐ ಶ್ರೀಮಂತ್ ಭೇಟಿಯಾದ ಗೃಹ ಸಚಿವ ಆರಗ ಜ್ಞಾನೇಂದ್ರ

| Updated By: ಆಯೇಷಾ ಬಾನು

Updated on: Oct 08, 2022 | 7:42 AM

ಗಾಯಾಳು ಸಿಪಿಐ ಶ್ರೀಮಂತ್ ಇಲ್ಲಾಳ್ ಅವರನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿಯಾಗಿದ್ದಾರೆ. 14 ದಿನದ ಬಳಿಕ ನಿನ್ನೆ ರಾತ್ರಿ ಸಿಪಿಐ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

ಸಿಪಿಐ ಶ್ರೀಮಂತ್​ ಹಲ್ಲೆ ಕೇಸ್: ಬೆಂಗಳೂರಿಗೆ ಶಿಫ್ಟ್ ಆದ 14ದಿನದ ಬಳಿಕ ಸಿಪಿಐ ಶ್ರೀಮಂತ್ ಭೇಟಿಯಾದ ಗೃಹ ಸಚಿವ ಆರಗ ಜ್ಞಾನೇಂದ್ರ
ಸಚಿವ ಆರಗ ಜ್ಞಾನೇಂದ್ರ
Follow us on

ಬೆಂಗಳೂರು: ಗಾಂಜಾ ದಂಧೆಕೋರರಿಂದ ಸಿಪಿಐ ಶ್ರೀಮಂತ್​ ಮೇಲೆ ಹಲ್ಲೆ ನಡೆದ ಕೇಸ್​ಗೆ ಸಂಬಂಧಿಸಿ ಗಾಯಾಳು ಸಿಪಿಐ ಶ್ರೀಮಂತ್ ಇಲ್ಲಾಳ್ ಅವರನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿಯಾಗಿದ್ದಾರೆ. 14 ದಿನದ ಬಳಿಕ ನಿನ್ನೆ ರಾತ್ರಿ ಸಿಪಿಐ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಕುಟುಂಬಸ್ಥರಿಗೆ ಧೈರ್ಯ ಹೇಳಿದ್ದಾರೆ. ಸಿಪಿಐ ಇಲ್ಲಾಳ್ ಮಣಿಪಾಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಹಿನ್ನೆಲೆ

ಕಲಬುರಗಿ ಗ್ರಾಮಾಂತರ ಠಾಣೆಯ ಸಿಪಿಐ ಆಗಿರುವ ಶ್ರೀಮಂತ್ ಇಲ್ಲಾಳ್, ಇದೇ ಸೆಪ್ಟೆಂಬರ್ 21 ರಂದು ಕಲಬುರಗಿ ನಗರದ ಬಾಪು ನಗರದ ನವೀನ್ ಎಂಬುವ ಗಾಂಜಾ ಮಾರಾಟಗಾರನೊಬ್ಬನನ್ನು ಬಂಧಿಸಿದ್ದರು. ಅವನು ಕರ್ನಾಟಕ ಮತ್ತು ಮಹರಾಷ್ಟ್ರದ ಗಡಿಯಲ್ಲಿ ತಾನು ಗಾಂಜಾ ಬೆಳೆಯುತ್ತಿರುವ ಬಗ್ಗೆ (ganja -marijuana growers) ಮಾಹಿತಿ ನೀಡಿದ್ದ. ಆ ಖಚಿತ ಮಾಹಿತಿಯ ಮೇರೆಗೆ ಸೆಪ್ಟೆಂಬರ್ 23 ರಂದು ರಾತ್ರಿ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹೊನ್ನಳ್ಳಿ ಹೊರವಲಯದಲ್ಲಿ ಕೃಷಿ ಜಮೀನಿನಲ್ಲಿ ಗಾಂಜಾ ಜಫ್ತಿ ಮಾಡಲು ತಮ್ಮ ಸಿಬ್ಬಂದಿಯ ಜೊತೆ ಹೋಗಿದ್ದರು. ಗಾಂಜಾ ಜಫ್ತಿ ಮಾಡಲು ಹೋಗಿದ್ದ ಪ್ರದೇಶ ಕರ್ನಾಟಕ ಮತ್ತು ಮಹರಾಷ್ಟ್ರದ ಗಡಿಗೆ ಹೊಂದಿಕೊಂಡಿದೆ. ಇದನ್ನೂ ಓದಿ: ಕಮಲಮ್ಮನ ವಠಾರಕ್ಕೆ ಬಂದ ಆರ್ಯವರ್ಧನ್​ಗೆ ಅಚ್ಚರಿಯ ಮೇಲೆ ಅಚ್ಚರಿ; ಅನು ಮನೆಯವರಿಗೆ ಮೂಡಿತು ಅನುಮಾನ

ಇನ್ನು ಗಾಂಜಾ ಬೆಳೆದವರು ಮಹರಾಷ್ಟ್ರದ ತೊರ್ಲವಾಡಿಯವರು. ಗಾಂಜಾ ಜಫ್ತಿ ಮಾಡಿಕೊಳ್ಳಲು ಹೋಗಿದ್ದ ಪೊಲೀಸರ ಮೇಲೆ ದಂಧೆಕೋರರು ಹಲ್ಲೆ ಮಾಡಿದ್ದರು. ಉಳಿದ ಸಿಬ್ಬಂದಿ ಅಲ್ಲಿಂದ ಪಾರಾದರೂ ಕೂಡಾ ಸಿಪಿಐ ಶ್ರೀಮಂತ್ ಇಲ್ಲಾಳ್, ದಂಧೆಕೋರರ ಕೈಯಲ್ಲಿ ಸಿಕ್ಕಿಬಿದ್ದಿದ್ದರು. ಶ್ರೀಮಂತ್ ಇಲ್ಲಾಳ್ ಅವರ ಮೇಲೆ 30ಕ್ಕೂ ಹೆಚ್ಚು ದಂಧೆಕೋರರು ಹಲ್ಲೆ ಮಾಡಿದ್ದರು. ನಂತರ ಅವರನ್ನು ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೆಪ್ಟೆಂಬರ್ 26 ರಂದು ಕಲಬುರಗಿಯಿಂದ ಏರ್ ಲಿಫ್ಟ್​ ಮೂಲಕ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ 14 ದಿನದ ಬಳಿಕ ನಿನ್ನೆ ರಾತ್ರಿ ಗೃಹ ಸಚಿವ ಆರಗ ಜ್ಞಾನೇಂದ್ರ ಸಿಪಿಐ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:42 am, Sat, 8 October 22