ಬೆಂಗಳೂರಿನಲ್ಲಿ ದಿಢೀರನೆ ಹೃದಯಾಕಾರದ ಟ್ರಾಫಿಕ್ ದೀಪಗಳು ಗೋಚರಿಸುತ್ತಿವೆ! ಯಾಕೆ?

| Updated By: ಸಾಧು ಶ್ರೀನಾಥ್​

Updated on: Oct 13, 2022 | 2:09 PM

ಮಣಿಪಾಲ್ ಆಸ್ಪತ್ರೆ ಪ್ರಕಾರ, "ಬೆಂಗಳೂರು ಹೃದಯ ಸ್ಮಾರ್ಟ್ ಸಿಟಿ" ಎಂದು ಪ್ರೋತ್ಸಾಹಿಸಲು ವಿಶ್ವ ಹೃದಯ ದಿನದಂದು ಹೃದಯಾಕಾರದ ಟ್ರಾಫಿಕ್ ದೀಪಗಳನ್ನು ಅಳವಡಿಸಲಾಗಿದೆ. ನಗರದ 20 ಕ್ಕೂ ಹೆಚ್ಚು ಸ್ಥಳಗಳು ಸಂಚಾರ ದೀಪಗಳನ್ನು ಪಡೆದಿವೆ.

ಬೆಂಗಳೂರಿನಲ್ಲಿ ದಿಢೀರನೆ ಹೃದಯಾಕಾರದ ಟ್ರಾಫಿಕ್ ದೀಪಗಳು ಗೋಚರಿಸುತ್ತಿವೆ! ಯಾಕೆ?
ಬೆಂಗಳೂರಿನಲ್ಲಿ ದಿಢೀರನೆ ಹೃದಯಾಕಾರದ ಟ್ರಾಫಿಕ್ ದೀಪಗಳು ಗೋಚರಿಸುತ್ತಿವೆ! ಯಾಕೆ?
Follow us on

ನಗರದ ಪ್ರಮುಖ ಭಾಗಗಳಲ್ಲಿ ಟ್ರಾಫಿಕ್ ಸಿಗ್ನಲ್​ ಐಲ್ಯಾಂಡ್​​ಗಳಲ್ಲಿ ಹೃದಯಾಕಾರದ ಟ್ರಾಫಿಕ್ ಲೈಟ್‌ಗಳು ಗೋಚರಿಸತೊಡಗಿವೆ. ಮಣಿಪಾಲ್ ಆಸ್ಪತ್ರೆ, ಬೆಂಗಳೂರು ಟ್ರಾಫಿಕ್ ಪೊಲೀಸ್ (ಬಿಟಿಪಿ -Bengaluru Traffic Police), ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ Bruhat Bengaluru Mahanagara Palike -BBMP) ಜಂಟಿ ಕಾರ್ಯಾಚರಣೆ ಪರಿಣಾಮವಾಗಿ ಇದು ಕಾಣತೊಡಗಿವೆ. ತುರ್ತು ಸಂದರ್ಭಗಳಲ್ಲಿ ಹೃದಯದ ಪ್ರಥಮ ಚಿಕಿತ್ಸೆಗಾಗಿ (CPR) ಟ್ರಾಫಿಕ್ ಸಿಗ್ನಲ್ ಗಳಲ್ಲಿ ತ್ವರಿತ ರಹದಾರಿ ಒದಗಿಸುತ್ತವೆ.

ಬೆಂಗಳೂರಿನ ಪ್ರಯಾಣಿಕರು ಇತ್ತೀಚೆಗೆ ನಗರದಾದ್ಯಂತ ಅನೇಕ ಟ್ರಾಫಿಕ್ ಲೈಟ್‌ಗಳಲ್ಲಿ ಹೃದಯ ಚಿಹ್ನೆಯನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ಕೆಲವರು ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ರಾಜಧಾನಿಯಲ್ಲಿ ಕೆಂಪು ಕೆಂಪಾಗಿರುತ್ತಿದ್ದ ಟ್ರಾಫಿಕ್ ಲೈಟ್‌ಗಳು ಇದ್ದಕ್ಕಿದ್ದಂತೆ ಹೃದಯಾಕಾರದಲ್ಲಿ ಮಿನುಗಲು ಕಾರಣವೇನು ಎಂದು ಅನೇಕರು ಆಶ್ಚರ್ಯ ಪಟ್ಟಿದ್ದಾರೆ.

ಮಣಿಪಾಲ್ ಆಸ್ಪತ್ರೆಯ (Manipal Hospitals) ಪ್ರಕಾರ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಬಳಸಲು ನಗರದ ಎಲ್ಲಾ ಟ್ರಾಫಿಕ್ ಸಿಗ್ನಲ್ ಜಂಕ್ಷನ್‌ಗಳಲ್ಲಿ ಕ್ಯೂಆರ್ ಕೋಡ್‌ಗಳನ್ನು ಪೋಸ್ಟ್ ಮಾಡಲಾಗಿದೆ. ಆದ್ದರಿಂದ ಬೆಂಗಳೂರಿನ ನಿವಾಸಿಗಳು ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ತುರ್ತು ಸೇವೆಗಳಿಗಾಗಿ ಗ್ರೀನ್ ಕಾರಿಡಾರ್ ರಹದಾರಿ ಪಡೆಯಲು ಸಾಧ್ಯವಾಗುತ್ತದೆ.

ಮಣಿಪಾಲ್ ಆಸ್ಪತ್ರೆ ಪ್ರಕಾರ, “ಬೆಂಗಳೂರು ಹೃದಯ ಸ್ಮಾರ್ಟ್ ಸಿಟಿ” ಎಂದು ಪ್ರೋತ್ಸಾಹಿಸಲು ವಿಶ್ವ ಹೃದಯ ದಿನದಂದು ಹೃದಯಾಕಾರದ ಟ್ರಾಫಿಕ್ ದೀಪಗಳನ್ನು ಅಳವಡಿಸಲಾಗಿದೆ. ನಗರದ 20 ಕ್ಕೂ ಹೆಚ್ಚು ಸ್ಥಳಗಳು ಸಂಚಾರ ದೀಪಗಳನ್ನು ಪಡೆದಿವೆ.

ಈ ಯೋಜನೆಯ ಅನುಸಾರ ಹೃದಯ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಆಡಿಯೋ ಸಂದೇಶಗಳನ್ನು ಸಹ ನಗರದಲ್ಲಿ ಪ್ಲೇ ಮಾಡಲಾಗಿದೆ. ಕ್ಯೂಆರ್ ಕೋಡ್‌ಗಳು ಬಳಕೆದಾರರಿಗೆ ತುರ್ತು ಸೇವೆಗಳನ್ನು ಡಯಲ್ ಮಾಡುವ ಬದಲು ಸುಲಭವಾಗಿ ಸಂಚರಿಸಲು ಅನುವು ಮಾಡಿಕೊಡುತ್ತದೆ ಎಂದು ಮಣಿಪಾಲ್ ಹಾಸ್ಪಿಟಲ್ಸ್ ಹೇಳಿದೆ. ಒಂದೇ ಕ್ಲಿಕ್‌ನಲ್ಲಿ, ಬಳಕೆದಾರರನ್ನು ಆಂಬ್ಯುಲೆನ್ಸ್ ಸೇವೆಗೆ ನಿರ್ದೇಶಿಸಲಾಗುತ್ತದೆ.

ಪ್ರತಿಯೊಂದು ಜೀವವೂ ಮುಖ್ಯ ಎಂಬುದನ್ನು ಸೂಚಿಸಲು ಹೃದಯ ಆಕಾರದ ಟ್ರಾಫಿಕ್ ಸಿಗ್ನಲ್ ಹಾಕಲಾಗಿದೆ ಎಂದು ಕಬ್ಬನ್ ಪಾರ್ಕ್ ಟ್ರಾಫಿಕ್ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯಾರೊಬ್ಬರೂ ವೇಗವಾಗಿ ವಾಹನ ಸವಾರಿ ಮಾಡಬಾರದು ಅಥವಾ ಚಾಲನೆ ಮಾಡಬಾರದು ಮತ್ತು ಸಿಗ್ನಲ್‌ಗಳನ್ನು ಜಂಪ್ ಮಾಡಬಾರದು. ಜನರು ಜಾಗರೂಕರಾಗಿರಬೇಕು ಮತ್ತು ಟ್ರಾಫಿಕ್ ನಿಯಮಗಳನ್ನು ಅನುಸರಿಸಬೇಕು. ಇದರ ಹೊರತಾಗಿ, ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಸೂಚಿಸುತ್ತದೆ ಎನ್ನುತ್ತಾರೆ ಆ ಅಧಿಕಾರಿ.