ನಮ್ಮ ಮೆಟ್ರೋ ಕಾಮಗಾರಿ ವೇಳೆ ಎಡವಟ್ಟು; 40 ಅಡಿ ಎತ್ತರದಿಂದ ಕೆಳಗೆ ಬಿದ್ದ ಕ್ರೇನ್ ಕಟ್

| Updated By: ಆಯೇಷಾ ಬಾನು

Updated on: Oct 24, 2021 | 2:34 PM

ಬೆಂಗಳೂರಿನ ಸಿಲ್ಕ್ ಬೋರ್ಡ್ ಬಳಿ ಜೋಡಣೆ ವೇಳೆ ಈ ಘಟನೆ ಸಂಭವಿಸಿದ್ದು ಬೆಳಗ್ಗೆ 6.30ರ ಸುಮಾರಿಗೆ ಕ್ರೇನ್ ಕೆಳಗೆ ಬಿದ್ದಿದೆ. ಸದ್ಯ ಕರ್ತವ್ಯನಿರತ ನೂರಾರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಮ್ಮ ಮೆಟ್ರೋ ಕಾಮಗಾರಿ ವೇಳೆ ಎಡವಟ್ಟು; 40 ಅಡಿ ಎತ್ತರದಿಂದ ಕೆಳಗೆ ಬಿದ್ದ ಕ್ರೇನ್ ಕಟ್
ನಮ್ಮ ಮೆಟ್ರೋ ಕಾಮಗಾರಿ ವೇಳೆ ಎಡವಟ್ಟು; 40 ಅಡಿ ಎತ್ತರದಿಂದ ಕೆಳಗೆ ಬಿದ್ದ ಕ್ರೇನ್ ಕಟ್, ಸ್ಥಳಕ್ಕೆ ಬಾರದ ಅಧಿಕಾರಿಗಳು
Follow us on

ಬೆಂಗಳೂರು: ನಮ್ಮ ಮೆಟ್ರೋ ಕಾಮಗಾರಿ ವೇಳೆ ಮತ್ತೊಂದು ಅವಾಂತರ ಸಂಭವಿಸಿದೆ. ನಮ್ಮ ಮೆಟ್ರೋ ಫೇಸ್-2 ಕಾಮಗಾರಿ ವೇಳೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಬಹುದೊಡ್ಡ ಮಷೀನ್ ಸುಮಾರು 40 ಅಡಿ ಎತ್ತರದಿಂದ ಕೆಳಗೆ ಬಿದ್ದಿದೆ. ಮೆಟ್ರೋ ಸೆಗ್ಮೆಂಟ್ಸ್ ಜೋಡಿಸುವ ಮಷೀನ್ ಅರ್ಧಕ್ಕೆ ಕಟ್ ಆಗಿದೆ.

ಬೆಂಗಳೂರಿನ ಸಿಲ್ಕ್ ಬೋರ್ಡ್ ಬಳಿ ಜೋಡಣೆ ವೇಳೆ ಈ ಘಟನೆ ಸಂಭವಿಸಿದ್ದು ಬೆಳಗ್ಗೆ 6.30ರ ಸುಮಾರಿಗೆ ಕ್ರೇನ್ ಕೆಳಗೆ ಬಿದ್ದಿದೆ. ಸದ್ಯ ಕರ್ತವ್ಯನಿರತ ನೂರಾರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿಲ್ಕ್ ಬೋರ್ಡ್-ಕೆ.ಆರ್.ಪುರಂ ಮಾರ್ಗವಾಗಿ ನಡೆಯುತ್ತಿರುವ ಮೆಟ್ರೋ ಕಾಮಗಾರಿ ವೇಳೆ ಅಸಂಬಲ್ ಜೋಡಿಸುವಾಗ ಲಾಂಚಿಂಗ್ ಗಾರ್ಡ್ ಎಂಬ ಬೃಹತ್ ಮಷೀನ್ ದಿಢೀರ್ ಕುಸಿದು ಕೆಳಗೆಬಿದ್ದಿದೆ. ಮಷೀನ್ ಅರ್ಧಕ್ಕೆ ಕಟ್ ಆಗಿದೆ. ಮಷೀನ್ ಮೇಲೆತ್ತಲು ಕಾರ್ಮಿಕರು ಹರಸಾಹಸ ಪಡುತ್ತಿದ್ದಾರೆ. ಘಟನೆ ನಡೆದು 6 ಗಂಟೆ ಕಳೆದರೂ ಇದುವರೆಗೂ ಸ್ಥಳಕ್ಕೆ ಯಾವೊಬ್ಬ ಮೆಟ್ರೋ ಅಧಿಕಾರಿಯೂ ಭೇಟಿ ನೀಡಿಲ್ಲ.

ಅವಘಡ ನಡೆದ ಬಗ್ಗೆ ಪ್ರತ್ಯಕ್ಷದರ್ಶಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಮೆಟ್ರೋ ಸೆಗ್ಮೆಂಟ್ಸ್ ಜೋಡಿಸುವ ಮಷೀನ್​ ಕಟ್ ಆಗಿದೆ. ಮೆಟ್ರೋ ಕಾಮಗಾರಿ ವೇಳೆ ಭಾರಿ ಅನಾಹುತ ತಪ್ಪಿದೆ. ಬೆಳಗ್ಗೆ 6:30 ಸಮಯದಲ್ಲಿ ಈ ಘಟನೆ ನಡೆದಿದೆ. ಇವತ್ತು ವೀಕೆಂಡ್ ಆಗಿರುವುದರಿಂದ ಜನ್ರ ಓಡಾಟ ಅಷ್ಟಾಗಿ ಇರಲಿಲ್ಲ. ಬೇರೆ ದಿನಗಳಲ್ಲಿ ಈ ಘಟನೆ ನಡೆದಿದ್ದರೆ ಅನಾಹುತ ಆಗುತ್ತಿತ್ತು ಎಂದರು.

ಇನ್ನು ಘಟನೆ ಸಂಬಂಧ ನಮ್ಮ ಮೆಟ್ರೋ ಎಂಡಿ ಅಂಜುಂ ಪರ್ವೇಜ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆಯನ್ನು ನಾವು ನಿರೀಕ್ಷೆ ಮಾಡಿರಲಿಲ್ಲ. ಫೇಸ್ 2ರಲ್ಲಿ ಇಂಥ ಘಟನೆ ಮೊದಲ ಬಾರಿಗೆ ನಡೆದಿದೆ. ನಾಲ್ಕು ಲಾಂಚರ್​ಗಳ ಮೂಲಕ ಕಾಮಗಾರಿ ನಡೆಯುತ್ತಿತ್ತು. ಘಟನೆ ಕುರಿತಂತೆ ತನಿಖೆಗೆ ಸೂಚನೆಯನ್ನು ನೀಡಲಾಗಿದೆ. ಕಟ್ ಆಗಿರುವ ಲಾಂಚರ್ ಮತ್ತೆ ಬಳಸುವುದಕ್ಕೆ ಸಾಧ್ಯವಿಲ್ಲ. ಈ ಘಟನೆಯಿಂದ ಕಾಮಗಾರಿ 15-25 ದಿನ ವಿಳಂಬ ಸಾಧ್ಯತೆ. ನಿಗದಿಯಾದ ಸಮಯಕ್ಕೆ ಕಾಮಗಾರಿ ಪೂರ್ಣ ಮಾಡುತ್ತೇವೆ ಎಂದಿದ್ದಾರೆ.

ನಮ್ಮ ಮೆಟ್ರೋ ಫೇಸ್-2 ಕಾಮಗಾರಿ ವೇಳೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಬಹುದೊಡ್ಡ ಮಷೀನ್ ಸುಮಾರು 40 ಅಡಿ ಎತ್ತರದಿಂದ ಕೆಳಗೆ ಬಿದ್ದಿದೆ

ಲಾಂಚಿಂಗ್ ಗಾರ್ಡ್ ಎಂಬ ಬೃಹತ್ ಮಷೀನ್ ದಿಢೀರ್ ಕುಸಿದು ಕೆಳಗೆಬಿದ್ದಿದೆ

ಇದನ್ನೂ ಓದಿ: Bengaluru Metro: ನಮ್ಮ ಮೆಟ್ರೋ ರೈಲು ಸಂಚಾರಕ್ಕೆ 10 ವರ್ಷ ಪೂರ್ಣ! ಪ್ರಯಾಣಿಕರಿಗೆ ಕೃತಜ್ಞತೆ

Published On - 12:08 pm, Sun, 24 October 21