AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆ; ಪೊಲೀಸ್ ಇಲಾಖೆಯಿಂದ ಬಯೋಮೆಟ್ರಿಕ್ ಬಳಕೆ

ಈ ಹಿಂದೆ ಅಭ್ಯರ್ಥಿಗಳ ಹೆಸರಲ್ಲಿ ಬೇರೊಬ್ಬರು ಪರೀಕ್ಷೆ ಬರೆದ ಘಟನೆಗಳು ನಡೆದಿದ್ದವು. ಕೇವಲ ಒಂದೆಡೆ ಅಲ್ಲದೇ ಹಲವು ಕಡೆ ಈ ರೀತಿಯ ಘಟನೆ ಸಂಭವಿಸಿದ್ದವು. ಇದಾದ ಬಳಿಕ ಪರಿಕ್ಷಾ ಕ್ರಮ ಬಿಗಿ ಮಾಡಿದ ಪೊಲೀಸರು, ಈ ಬಾರಿ ಯಾವುದೇ ಅಡ್ಡದಾರಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ನಿಗಾ ವಹಿಸಿದ್ದಾರೆ.

ಇಂದು ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆ; ಪೊಲೀಸ್ ಇಲಾಖೆಯಿಂದ ಬಯೋಮೆಟ್ರಿಕ್ ಬಳಕೆ
ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆ
Follow us
TV9 Web
| Updated By: preethi shettigar

Updated on:Oct 24, 2021 | 11:08 AM

ಬೆಂಗಳೂರು: ಇಂದು (ಅಕ್ಟೋಬರ್ 24) ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆ ನಡೆಸಲಾಗುತ್ತಿದೆ. ಈ ಹಿಂದಿನ ಪರಿಕ್ಷೆಗಳಲ್ಲಿ ನಡೆದ ಘಟನೆಗಳ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳು ಪ್ರತಿಯೊಬ್ಬ ಅಭ್ಯರ್ಥಿ ಮೇಲೆ ನಿಗಾ ವಹಿಸಿದ್ದಾರೆ. ಪರೀಕ್ಷೆಗಾಗಿ ಇದೇ ಮೊದಲ ಬಾರಿಗೆ ಪೊಲೀಸ್ ಇಲಾಖೆಯಿಂದ ಬಯೋಮೆಟ್ರಿಕ್ ಬಳಕೆ ಮಾಡಲಾಗುತ್ತಿದೆ. 3.5 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದ್ದು, ರಾಜ್ಯದ 639 ಸೆಂಟರ್‌ಗಳಲ್ಲಿ ಪರೀಕ್ಷೆ ನಡೆಯುತ್ತಿದೆ.

ಈ ಹಿಂದೆ ಅಭ್ಯರ್ಥಿಗಳ ಹೆಸರಲ್ಲಿ ಬೇರೊಬ್ಬರು ಪರೀಕ್ಷೆ ಬರೆದ ಘಟನೆಗಳು ನಡೆದಿದ್ದವು. ಕೇವಲ ಒಂದೆಡೆ ಅಲ್ಲದೇ ಹಲವು ಕಡೆ ಈ ರೀತಿಯ ಘಟನೆ ಸಂಭವಿಸಿದ್ದವು. ಇದಾದ ಬಳಿಕ ಪರಿಕ್ಷಾ ಕ್ರಮ ಬಿಗಿ ಮಾಡಿದ ಪೊಲೀಸರು, ಈ ಬಾರಿ ಯಾವುದೇ ಅಡ್ಡದಾರಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ನಿಗಾ ವಹಿಸಿದ್ದಾರೆ.

ಕೆಎಸ್​ಆರ್​ಪಿಯಲ್ಲಿ ಪದಕಕ್ಕೆ ಶಿಫಾರಸು ಮಾಡಲು ಫಿಟ್‌ನೆಸ್ ಕಡ್ಡಾಯ ರಾಷ್ಟ್ರಪತಿ ಹಾಗೂ ಮುಖ್ಯಮಂತ್ರಿ ಪದಕ ಶಿಫಾರಸ್ಸಿಗೆ ಇನ್ನು ಮುಂದೆ ಫಿಟ್‌ನೆಸ್ ಕಡ್ಡಾಯವಾಗಿದೆ. ಆ ಮೂಲಕ ಶಿಸ್ತಿಗೆ ಹೆಸರಾದ ಖಾಕಿ ಪಡೆಯಲ್ಲಿ ಹೊಸ ಅಲೆ ಸೃಷ್ಟಿಯಾಗಿದೆ. ಕೆಎಸ್​ಆರ್​ಪಿಯಲ್ಲಿ (KSRP) ಉತ್ತಮ ಕೆಲಸ, ಕಾರ್ಯಕ್ಷಮತೆಯ ಜೊತೆಗೆ ಫಿಟ್‌ನೆಸ್ ಕೂಡ ಕಡ್ಡಾಯವಾಗಿದೆ. ಫಿಟ್‌ನೆಸ್ ಪೊಲೀಸರ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ. ಹೀಗಾಗಿ ಕೆಎಸ್‌ಆರ್‌ಪಿಯಲ್ಲಿ ಫಿಟ್‌ನೆಸ್ ಕಡ್ಡಾಯ ಎಂದು ಎಡಿಪಿ ಅಲೋಕ್‌ ಕುಮಾರ್ ಈ ನಿಯಮ ಜಾರಿಗೆ ಬೆಂಬಲ ನೀಡಿದ್ದಾರೆ.

ಕೆಎಸ್‌ಆರ್‌ಪಿಯಲ್ಲಿ 11 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯಿದ್ದಾರೆ. ಈ ಪೈಕಿ ಕಳೆದ ವರ್ಷದಲ್ಲಿ 3 ಸಾವಿರ ಫಿಟ್‌ನೆಸ್ ಇಲ್ಲದ ಸಿಬ್ಬಂದಿಯ ಹೆಸರು ಪಟ್ಟಿ ಮಾಡಲಾಗಿತ್ತು. ಇದೀಗ ಈ ಪಟ್ಟಿಯಲ್ಲಿರುವ 2,300 ಸಿಬ್ಬಂದಿಗಳು 10 ಕೆಜಿ ತೂಕವನ್ನು ಇಳಿಸಿದ್ದಾರೆ. ನಿತ್ಯ ವರ್ಕೌಟ್‌ನಿಂದ ಹೊಟ್ಟೆ ಕರಗಿಸಿದ್ದಾರೆ. ಸದ್ಯ ಇನ್ನೂ 680 ಸಿಬ್ಬಂದಿ ಅಧಿಕ ತೂಕ ಹೊಂದಿದ್ದಾರೆ ಎಂದು ಎಡಿಪಿ ಅಲೋಕ್‌ ಕುಮಾರ್ ತಿಳಿಸಿದ್ದಾರೆ.

ತೂಕ ಇಳಿಕೆಯಿಂದ ಸಿಬ್ಬಂದಿಗಳ ಆರೋಗ್ಯದಲ್ಲಿ ಚೇತರಿಕೆಯಾಗುತ್ತದೆ. ಅನಾರೋಗ್ಯದಿಂದ ಮೃತಪಡುವ ಪೊಲೀಸರ ಸಂಖ್ಯೆ ಕಡಿಮೆಯಾಗುತ್ತದೆ. ಕೆಎಸ್​ಆರ್​ಪಿ ಸಿಬ್ಬಂದಿ ಸಾಥ್ ನೀಡಿದ ಹಿನ್ನೆಲೆ ದಾಖಲೆಯ ಸಾಧನೆ ಮಾಡಲು ಸಾಧ್ಯವಾಗಿದೆ. ರಾಷ್ಟ್ರದಲ್ಲೇ ಇದೇ ಮೊದಲ ಬಾರಿಗೆ ದಾಖಲೆಯ ಸಾಧನೆಯಾಗಿದೆ ಎಂದು ಎಡಿಜಿಪಿ ಅಲೋಕ್‌ ಕುಮಾರ್ ಫಿಟ್‌ನೆಸ್ ಮಂತ್ರಕ್ಕೆ ಸಾಥ್ ನೀಡಿದ್ದಾರೆ.

ಇದನ್ನೂ ಓದಿ:

SSLC Exam 2021: ಹಾವಿನಿಂದ ಕಚ್ಚಿಸಿಕೊಂಡು ಚಿಕಿತ್ಸೆ ಪಡೆಯುತ್ತಿದ್ದರೂ ಎಸ್​ಎಸ್ಎಲ್​ಸಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿ

Indian Railways Recruitment 2021: ರೈಲ್ವೇ ಇಲಾಖೆಯ 3591 ಹುದ್ದೆಗಳಿಗೆ ಅರ್ಜಿ ಆಹ್ವಾನ; ಪರೀಕ್ಷೆ ಇಲ್ಲದೆ ನೇರ ನೇಮಕಾತಿ

Published On - 10:53 am, Sun, 24 October 21

ಯುದ್ಧ ನಡೆದರೆ ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ ಅನ್ನೋದು ಮೇಲ್ನೋಟಕ್ಕೆ ಸ್ಪಷ್ಟ
ಯುದ್ಧ ನಡೆದರೆ ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ ಅನ್ನೋದು ಮೇಲ್ನೋಟಕ್ಕೆ ಸ್ಪಷ್ಟ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಸೆಕೆಯಿಂದ ಕಂಗೆಟ್ಟಿದ್ದ ಬೆಂಗಳೂರಿಗರಿಗೆ ತಂಪೆರೆದ ಮಳೆರಾಯ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ಲಾಡ್ ಮತ್ತು ತಿಮ್ಮಾಪುರ ಮೈಲೇಜ್ ಗಿಟ್ಟಿಸುವ ಪ್ರಯತ್ನದಲ್ಲಿದ್ದಾರೆ: ಶಾಸಕ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ರಾತ್ರಿ ಭರ್ಜರಿ ರಿಸೆಪ್ಷನ್, ಬೆಳಗ್ಗೆ ಮುಹೂರ್ತ ವೇಳೆ ತಾಳಿ ಕಟ್ಟಲ್ಲ ಎಂದ ವರ
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ
ಕಾಶಪ್ಪನವರ್ ಮತ್ತು ಯತ್ನಾಳ್ ಮಾತಿನಲ್ಲಿ ಭಾಷಾ ಮರ್ಯಾದೆ ಮೀರುತ್ತಿದ್ದಾರೆ