ಕನ್ನಡಕ್ಕಾಗಿ ನಾವು ವಿಶೇಷ ಅಭಿಯಾನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಚಾಲನೆ
ಇಂದಿನಿಂದ (ಅಕ್ಟೋಬರ್ 24) ಇದೇ ತಿಂಗಳ 30 ರವರೆಗೂ ಕನ್ನಡಕ್ಕಾಗಿ ನಾವು ಅಭಿಯಾನ ನಡೆಯಲಿದೆ. ಇಂದು ಮಾತಾಡ್ ಮಾತಾಡ್ ಕನ್ನಡ ಎಂಬ ಶೀರ್ಷಕೆಯಡಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಸಚಿವರಾದ ಸುನಿಲ್ ಕುಮಾರ್ ಚಾಲನೆ ನೀಡಿದ್ದಾರೆ.
ಬೆಂಗಳೂರು: 66ನೇ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕನ್ನಡಕ್ಕಾಗಿ ನಾವು ವಿಶೇಷ ಅಭಿಯಾನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸುನಿಲ್ ಕುಮಾರ್ ಚಾಲನೆ ನೀಡಿದ್ದಾರೆ. ಬೆಂಗಳೂರು ನಗರದ ಲಾಲ್ ಬಾಗ್ ಸಸ್ಯತೋಟದಲ್ಲಿ ಕಿರು ನಾಟಕ ಮಾತಾಡ್ ಮಾತಾಡ್ ಕನ್ನಡ ಉದ್ಘಾಟನೆ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ಇಂದಿನಿಂದ (ಅಕ್ಟೋಬರ್ 24) ಇದೇ ತಿಂಗಳ 30 ರವರೆಗೂ ಕನ್ನಡಕ್ಕಾಗಿ ನಾವು ಅಭಿಯಾನ ನಡೆಯಲಿದೆ. ಇಂದು ಮಾತಾಡ್ ಮಾತಾಡ್ ಕನ್ನಡ ಎಂಬ ಶೀರ್ಷಕೆಯಡಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಸಚಿವರಾದ ಸುನಿಲ್ ಕುಮಾರ್ ಚಾಲನೆ ನೀಡಿದ್ದಾರೆ. ಕನ್ನಡಕ್ಕಾಗಿ ನಾವು ಅಭಿಯಾನದ ಉದ್ದೇಶ ಕನ್ನಡದಲ್ಲಿ ಮಾತು ಮತ್ತು ಬರವಣಿಗೆ. ಅಕ್ಟೋಬರ್ 30ರ ವರೆಗೂ ಅಭಿಯಾನದ ಕುರಿತ ನಾಟಕ, ನೃತ್ಯ, ಸಂಗೀತ, ಕನ್ನಡದಲ್ಲಿ ಮಾತನಾಡುವ ಸ್ಪರ್ಧೆ, ಗಡಿಭಾಗದಲ್ಲಿ ಕನ್ನಡ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತದೆ.
ಅಭಿಯಾನ ಉದ್ಘಾಟನೆ ಬಳಿಕ ಮಾತನಾಡಿದ ಸಚಿವ ಸುನೀಲ್ ಕುಮಾರ್, ಕನ್ನಡಕ್ಕಾಗಿ ನಾವು ವಿಶೇಷ ಅಭಿಯಾನ ರಾಜ್ಯಾದ್ಯಂತ ಆರಂಭ ಆಗಿದೆ. ಮಾತಾಡ್ ಮಾತಾಡ್ ಸಂಕಲ್ಪ ಇಟ್ಟುಕೊಂಡು ನವೆಂಬರ್ 1ರವರೆಗೂ ಅಭಿಯಾನ ಇರುತ್ತದೆ. ರಾಜ್ಯದಲ್ಲಿ ಬೇರೆ ಭಾಷೆ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಕನ್ನಡ ಬೆಳೆಸಬೇಕಾಗಿದೆ. ಒಂದು ವಾರಗಳ ಕಾಲ ಕನ್ನಡಕ್ಕಾಗಿ ಅಭಿಯಾನ ಆರಂಭ ಆಗಿದೆ. ಮಕ್ಕಳು ಹಾಗೂ ಕುಟುಂಬದ ನಡುವೆ ಕನ್ನಡ ಮಾತನಾಡುವುದು ಕಡಿಮೆ ಆಗುತ್ತಿದೆ. ನಾವು ಕುಟುಂಬದ ಸದಸ್ಯರ ಜೊತೆಗೆ ಕನ್ನಡ ಮಾತಾಡೋಣ ಎಂದು ಹೇಳಿದ್ದಾರೆ.
ಕನ್ನಡದಲ್ಲೇ ಸಹಿ ಮಾಡುವ ಅಭ್ಯಾಸ ಮಾಡೋಣ. ಚರವಾಣಿ ಕನ್ನಡದಲ್ಲೇ ಕಳುಹಿಸುವ ಅಭ್ಯಾಸ ಮಾಡೋಣ. ಎಲ್ಲಾ ಜಿಲ್ಲಾ ತಾಲೂಕಿನಲ್ಲಿ ಕನ್ನಡ ಸಾಮೂಹಿಕ ಗಾಯನದಲ್ಲಿ ಕನ್ನಡದ ಮೂರು ಗೀತೆ ಹಾಡನ್ನು ಪ್ರತಿಯೊಬ್ಬರೂ ಹಾಡಬೇಕು. ಕನ್ನಡದ ಪ್ರೇಮ ಭಾಷಣದ ವಸ್ತು ಅಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಬಳಿಕ ಇಲಾಖಾವಾರು ಸುತ್ತೋಲೆಗಳಲ್ಲಿ ಹೆಚ್ಚು ಇಂಗ್ಲೀಷ್ ಗೆ ಆಧ್ಯತೆ ವಿಚಾರವಾಗಿ ಮಾತನಾಡಿದ ಅವರು, ಇದರ ಬಗ್ಗೆ ಗಮನಹರಿಸಿದ್ದೇವೆ. ಸುಧಾರಣೆ ಮಾಡುವ ಕೆಲಸ ಆಗುತ್ತಿದೆ ಎಂದು ಹೇಳಿದ್ದಾರೆ.
ರಾಜ್ಯೋತ್ಸವ ಒಂದು ದಿನಕ್ಕೆ ಸೀಮಿತವಾಗದೆ, ಕನ್ನಡ ಭಾಷೆಗಳನ್ನು ಕನ್ನಡ ರಾಜ್ಯದಲ್ಲಿ ತಿಳಿಸಬೇಕು. ಇವತ್ತು ಬೆಂಗಳೂರಿನಿಂದ ಮಾತಾಡ್ ಮಾತಾಡ್ ಕನ್ನಡ ಅಭಿಯಾನ ಶುರುಮಾಡಿದ್ದೇವೆ. ವಿಶೇಷವಾಗಿ ನವೆಂಬರ್ 28ರಂದು ಬೆಳಗ್ಗೆ 11ರಿಂದ 11:30ರವರೆಗೂ ವಿವಿಧ ಪ್ರಮುಖ ಸ್ಥಳದಲ್ಲಿ ಉದ್ಯಮಿಗಳು, ವಿದ್ಯಾರ್ಥಿಗಳು ಕೂಲಿ ಕಾರ್ಮಿಕರು, ಲಕ್ಷ ಕಂಠದಲ್ಲಿ ಸಮೂಹ ಗಾಯನ ಕಾರ್ಯಕ್ರಮ ನಡೆಯುತ್ತದೆ. ಕನ್ನಡದ ಮೂರು ಹಾಡು ಹಾಡಬೇಕು ಎಂದು ಮನವಿ ಮಾಡುತ್ತೇನೆ. ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು, ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ ಹಾಡುಗಳನ್ನು ಹಾಡಲಾಗುತ್ತದೆ. ಸಮಯವಕಾಶ ಇದ್ದರೆ ಇನ್ನಷ್ಟು ಹಾಡುಗಳನ್ನು ಹಾಡಬಹುದು ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.
ಕನ್ನಡದಲ್ಲಿ ಸಹಿ ಅಭಿಯಾನ ಸಹಿ ಹಾಗೂ ಸುತ್ತೂಲೆ ಎರಡು ಕನ್ನಡದಲ್ಲೇ ಆಗಬೇಕು. ಇದಕ್ಕೆ ನನ್ನ ಬೆಂಬಲವಿದೆ. ಕನ್ನಡದಲ್ಲಿ ಸಹಿ ಅಭಿಯಾನದ ಮೂಲಕ ಹೊಸ ರೂಪ ಪಡೆದುಕೊಂಡಿದೆ ಎಂದು ಸ್ಪಷ್ಟಪಡಿಸುತ್ತೇನೆ. ಹಿಂದೆ ಯಾವ ರೀತಿ ಇತ್ತು ಎನ್ನುವ ಚರ್ಚೆ ಬೇಡ. ಮುಂದೆ ಯಾವ ರೀತಿ ಆಗಬೇಕು ಎನ್ನುವುದನ್ನು ಚರ್ಚೆ ಮಾಡೋಣ. ರಾಜ್ಯದಲ್ಲಿ ಕೇಂದ್ರ ಸರ್ಕಾರದ ಕಾರ್ಯಕ್ರಮದಲ್ಲಿ ಕನ್ನಡ ಕಡಗಣನೆ ವಿಚಾರಕ್ಕೆ ಸಂಬಂಧಪಟ್ಟಂತೆ ಕರ್ನಾಟಕದಲ್ಲಿ ಕನ್ನಡವೇ ಅಳವಡಿಸಬೇಕು. ನಾವೂ ಕೂಡ ಹತ್ತಾರು ಬಾರಿ ಮನವಿ ಕೂಡ ಮಾಡಿದ್ದೇವೆ. ಎಲ್ಲೋ ಕೆಲವೊಂದು ಕಡೆ ವ್ಯತ್ಯಾಸಗಳು ಆಗಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸುನಿಲ್ ಕುಮಾರ್ ತಿಳಿಸಿದ್ದಾರೆ
ಪರ್ವ ನಾಟಕಕ್ಕೆ ಚಾಲನೆ ಮಾತಾಡ್ ಮಾತಾಡ್ ಕನ್ನಡ ಅಭಿಯಾನ ಪ್ರಯುಕ್ತ ಎಸ್.ಎಲ್.ಭೈರಪ್ಪ ಕಾದಂಬರಿ ಆಧಾರಿತ ‘ಪರ್ವ’ ನಾಟಕಕ್ಕೆ ಚಾಲನೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಚಿವ ಸುನಿಲ್ ಕುಮಾರ್ ಪರ್ವ ನಾಟಕಕ್ಕೆ ಚಾಲನೆ ನೀಡಿದ್ದಾರೆ. ಕನ್ನಡಕ್ಕಾಗಿ ನಾವು ಅಭಿಯಾನದ ಹಿನ್ನೆಲೆ ಬಿತ್ತಿ ಪತ್ರ ಹಾಗೂ ವಿಡಿಯೋಗಳ ಅನಾವರಣ ಮಾಡಲಾಗಿದ್ದು, ಎಲ್ಇಡಿ ಪರದೆ ಹೊಂದಿರುವ ವಾಹನದಲ್ಲಿ ವಿಡಿಯೋ ಪ್ರದರ್ಶನ ಮಾಡಲಾಗಿದೆ.
ಇದನ್ನೂ ಓದಿ: ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವ; ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಕಾರ್ಯಕ್ರಮಕ್ಕೆ ಗೈರು
ಕಡಲ ತೀರದಲ್ಲಿ ಕನ್ನಡ ರಾಜ್ಯೋತ್ಸವ! ಬೆಂಗಳೂರಿನ ಯುವ ತಂಡದಿಂದ ಕನ್ನಡ ಹಬ್ಬದ ವಿಶಿಷ್ಟ ಆಚರಣೆ
Published On - 9:39 am, Sun, 24 October 21