ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವ; ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಕಾರ್ಯಕ್ರಮಕ್ಕೆ ಗೈರು
ಹಾನಗಲ್ ಉಪಚುನಾವಣಾ ಪ್ರಚಾರದಲ್ಲಿರುವ ಕಾರಣ ಜಯಂತ್ಯೋತ್ಸವ ಉದ್ಘಾಟಿಸಬೇಕಿದ್ದ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗಿಲ್ಲ. ಕಾರ್ಯಕ್ರಮದಲ್ಲಿ ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ ಮಾತ್ರ ಹಾಜರಾಗಿದ್ದರು.
ಬೆಂಗಳೂರು: ರಾಜ್ಯ ಸರ್ಕಾರದ ವತಿಯಿಂದ ಇಂದು (ಅಕ್ಟೋಬರ್ 23) ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯೋತ್ಸವ ಆಚರಣೆ ಮಾಡಲಾಗಿದೆ. ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜನೆ ಮಾಡಲಾದ ಈ ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಸುನಿಲ್ ಕುಮಾರ್ ಮತ್ತು ಅಧ್ಯಕ್ಷತೆ ವಹಿಸಬೇಕಿದ್ದ ಶಾಸಕ ಉದಯ ಗರುಡಾಚಾರ್ ಗೈರಾಗಿದ್ದಾರೆ.
ಹಾನಗಲ್ ಉಪಚುನಾವಣಾ ಪ್ರಚಾರದಲ್ಲಿರುವ ಕಾರಣ ಜಯಂತ್ಯೋತ್ಸವ ಉದ್ಘಾಟಿಸಬೇಕಿದ್ದ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗಿಲ್ಲ. ಕಾರ್ಯಕ್ರಮದಲ್ಲಿ ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ ಮಾತ್ರ ಹಾಜರಾಗಿದ್ದರು. ಮೃತ್ಯುಂಜಯ ಸ್ವಾಮೀಜಿ ಚನ್ನಮ್ಮ ಜಯಂತಿ ಉದ್ಘಾಟಿಸಿದರು ಈ ವೇಳೆ ವೇಳೆ ಲಿಂಗಾಯತ ಪಂಚಮಸಾಲಿ ವೇದಿಕೆಯ ಪದಾಧಿಕಾರಿಗಳನ್ನು ವೇದಿಕೆಗೆ ಆಹ್ವಾನಿಸಿದ್ದಾರೆ.
ಚೆನ್ನಮ್ಮ ಪ್ರತಿಮೆಗೆ ಪ್ರಧಾನಿ ಮಾಲಾರ್ಪಣೆ ಮಾಡಬೇಕು: ಜಯಮೃತ್ಯುಂಜಯ ಸ್ವಾಮಿಜಿ ಮುಂದಿನ ವರ್ಷ ದೆಹಲಿಯಲ್ಲಿರುವ ಚೆನ್ನಮ್ಮ ಪ್ರತಿಮೆಗೆ ಪ್ರಧಾನಿ ನರೇಂದ್ರ ಮೋದಿ ಮಾಲಾರ್ಪಣೆ ಮಾಡಲಿ. ಆಗ ಅಲ್ಲಿನ ಜನರಿಗೆ ರಾಣಿ ಚೆನ್ನಮ್ಮ ಬಗ್ಗೆ ತಿಳಿಯುತ್ತದೆ. ಮಹಿಳಾ ಸೌಧ ಕಟ್ಟಿ ರಾಣಿ ಚೆನ್ನಮ್ಮ ಹೆಸರು ಇಡಬೇಕು ಎಂದು ಬೆಂಗಳೂರಿನಲ್ಲಿ ಜಯಮೃತ್ಯುಂಜಯ ಸ್ವಾಮಿಜಿ ಆಗ್ರಹಿಸಿದ್ದಾರೆ.
ಚೆನ್ನಮ್ಮನ ಹೋರಾಟದಿಂದ ಇಂದು ಸ್ವಾತಂತ್ರ್ಯ ಸಿಕ್ಕಿದೆ. ಹೀಗಾಗಿಯೇ ಇಂದು ಸಂಸದರು, ಶಾಸಕರು ಇದ್ದಾರೆ. ಆದರೆ ಇಂದು ಬೆಂಗಳೂರಿನ ಸಂಸದರು, ಶಾಸಕರು ಯಾರೂ ಕಾರ್ಯಕ್ರಮಕ್ಕೆ ಬಂದಿಲ್ಲ. ಆರೋಗ್ಯ ಸರಿಯಿಲ್ಲದವರು ಮನೆಯಲ್ಲಿ ಮಲಗಲಿ. ಆರೋಗ್ಯ ಸರಿ ಇದ್ದವರಾದರೂ ಬರಬೇಕಿತ್ತು. ಚೆನ್ನಮ್ಮ ಕೇವಲ ಉತ್ತರ ಕರ್ನಾಟಕಕ್ಕೆ ಸೀಮಿತವಲ್ಲ ಎಂದು ಜನಪ್ರತಿನಿಧಿಗಳ ವಿರುದ್ಧ ಜಯಮೃತ್ಯುಂಜಯಶ್ರೀ ಸ್ವಾಮೀಜಿ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಬಾಬಾಬುಡನ್ಗಿರಿ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ: ಹೈಕೋರ್ಟ್ ನಿರ್ದೇಶನ ಸ್ವಾಗತಿಸಿದ ಸುನಿಲ್ಕುಮಾರ್
ಉಡುಪಿಯಲ್ಲಿ ಕೊರೊನಾ ಇಳಿಕೆ ಆಗಿಲ್ಲ; ಸೋಮವಾರದಿಂದ ಶಾಲೆ ತೆರೆಯುವುದಿಲ್ಲ: ಸಚಿವ ಸುನಿಲ್ ಕುಮಾರ್
Published On - 2:37 pm, Sat, 23 October 21