ಬೆಂಗಳೂರಿನಲ್ಲಿ ಅ.20 ರಂದು ಕ್ರಿಕೆಟ್​ ವಿಶ್ವಕಪ್ ಪಂದ್ಯ; ಈ ಸ್ಥಳಗಳಲ್ಲಿ ಪಾರ್ಕಿಂಗ್​ ನಿಷೇಧ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 19, 2023 | 8:21 PM

ಕ್ರಿಕೆಟ್ ವಿಶ್ವಕಪ್(Cricket World Cup)​ನ 18 ನೇ ಪಂದ್ಯವನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ಸೆಣಸಾಡಲಿವೆ. ಈ ಹಿನ್ನೆಲೆ ಸಾರ್ವಜನಿಕರಿಗೆ ಸಂಚಾರ ಪೊಲೀಸರ ಸೂಚನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಅ.20 ರಂದು ಕ್ರಿಕೆಟ್​ ವಿಶ್ವಕಪ್ ಪಂದ್ಯ; ಈ ಸ್ಥಳಗಳಲ್ಲಿ ಪಾರ್ಕಿಂಗ್​ ನಿಷೇಧ
ಬೆಂಗಳೂರಿನಲ್ಲಿ ಪಾಕ್​-ಆಸೀಸ್​ ಪಂದ್ಯ
Follow us on

ಬೆಂಗಳೂರು, ಅ.19: ಈ ಬಾರಿ ಭಾರತದಲ್ಲಿಯೇ ಕ್ರಿಕೆಟ್​ ವಿಶ್ವಕಪ್​ ನಡೆಯುತ್ತಿದ್ದು, ನಾಳೆ(ಅ.20) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ವಿಶ್ವಕಪ್(Cricket World Cup)​ನ 18 ನೇ ಪಂದ್ಯವನ್ನು ಆಯೋಜಿಸಲಾಗಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ಸೆಣಸಾಡಲಿವೆ. ಈ ಹಿನ್ನೆಲೆ ಸಾರ್ವಜನಿಕರಿಗೆ ಸಂಚಾರ ಪೊಲೀಸರ ಸೂಚನೆ ನೀಡಿದ್ದಾರೆ. ಹೌದು, ಯಾವುದೇ ರೀತಿಯಾಗಿ ವಾಹನ ಸವಾರರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಈ ರಸ್ತೆಗಳಲ್ಲಿ ಪಾರ್ಕಿಂಗ್​ ನಿಷೇಧ

ಇನ್ನು ವಿಶ್ವಕಪ್​ ಪಂದ್ಯಾವಳಿಯನ್ನು ವೀಕ್ಷಿಸಲು ಬರುವವರಿಂದ ಟ್ರಾಫಿಕ್ ಜಾಮ್​ನ್ನು ತಡೆಗಟ್ಟುವ ಉದ್ದೇಶದಿಂದ ​ಕ್ವೀನ್ಸ್ ರಸ್ತೆ, ಎಂ ಜಿ ರಸ್ತೆ, ರಾಜ ಭವನ ರಸ್ತೆ, ಸೆಂಟ್ರಲ್ ಸ್ಟ್ರೀಟ್, ಕಬ್ಬನ್ ರಸ್ತೆ, ಸೆಂಟ್ ಮಾರ್ಕ್ ರಸ್ತೆ, ಮ್ಯೂಸಿಯಂ ರೋಡ್, ಕಸ್ತೂರಬಾ ರೋಡ್, ಡಾ. ಬಿ ಆರ್ ಅಂಬೇಡ್ಕರ್ ರಸ್ತೆ, ಲ್ಯಾವೆಲ್ಲಿ ರಸ್ತೆ, ವಿಠಲ್ ಮಲ್ಯ ರಸ್ತೆ ಮತ್ತು ನೃಪತುಂಗ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಇದನ್ನೂ ಓದಿ:ಏಷ್ಯಾಕಪ್, ವಿಶ್ವಕಪ್​ಗೂ ಮುನ್ನವೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಇಬ್ಬರು ಪಾಕ್ ಕ್ರಿಕೆಟಿಗರು..!

ಪಾರ್ಕಿಂಗ್​ಗೆ ಅವಕಾಶ

ಇನ್ನು ಪಂದ್ಯಾವಳಿ ವಿಕ್ಷಿಸಲು ಬರುವವರಿಗೆ ಕಿಂಗ್ಸ್ ರೋಡ್, ಯುಬಿ ಸಿಟಿ ಪಾರ್ಕಿಂಗ್ ಸ್ಥಳ ಹಾಗೂ ಶಿವಾಜಿನಗರ ಬಿಎಂಟಿಸಿ ಬಸ್ ನಿಲ್ದಾಣದ ಮೊದಲ ಮಹಡಿಯಲ್ಲಿ ಪಾರ್ಕಿಂಗ್ ಗೆ ಅವಕಾಶ ಮಾಡಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಇರುವ ದಿನ ಮೆಟ್ರೋ ರೈಲು ಸೇವೆ ಅವಧಿ ವಿಸ್ತರಣೆ

ಹೌದು, ಬೆಂಗಳೂರಿನಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ನಿನ್ನೆ(ಅ.18) ಗುಡ್​ನ್ಯೂಸ್ ನೀಡಿತ್ತು. ಬೆಂಗಳೂರಿನಲ್ಲಿ ಯಾವಾಗ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ (World Cup Cricket 2023) ಇರುವುದು, ಅಂದಿನ ದಿನ ಮೆಟ್ರೋ ರೈಲು ಸೇವೆಯ ಅವಧಿ ವಿಸ್ತರಣೆ ಮಾಡಲಾಗಿದೆ. ಇದರ ಜೊತೆಗೆ ವಿಶೇಷ ದರದ ರಿಯಾಯಿತಿಯನ್ನೂ ಘೋಷಿಸಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:35 pm, Thu, 19 October 23