ಅನಾರೋಗ್ಯದಿಂದ ಬೇಸತ್ತು ಮೂರೂವರೆ ವರ್ಷದ ಪುತ್ರಿ ಕೊಂದು ತಾನು ನೇಣಿಗೆ ಶರಣಾದ ತಾಯಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 01, 2022 | 2:50 PM

ಹೆತ್ತ ತಂದೆಯ ಕತ್ತು ಹಿಸುಕಿ ಕೊಲೆಗೈದ ಮಕ್ಕಳ ಮುಖವಾಡ ಬಯಲಾಗಿದ್ದು, ಆತ್ಮಹತ್ಯೆ ಎಂದು ಬಿಂಬಿಸಿಲು ಹೋಗಿದ್ದ ಮಕ್ಕಳು ಅಂದರ್ ಆಗಿದ್ದಾರೆ. ನಗರದ ಸುತಗಟ್ಟಿ ಕಾನೂನು ವಿಶ್ವವಿದ್ಯಾಲಯ ಬಳಿ ಘಟನೆ ನಡೆದಿದೆ.

ಅನಾರೋಗ್ಯದಿಂದ ಬೇಸತ್ತು ಮೂರೂವರೆ ವರ್ಷದ ಪುತ್ರಿ ಕೊಂದು ತಾನು ನೇಣಿಗೆ ಶರಣಾದ ತಾಯಿ
ತಾಯಿ ದೀಪಾ, ಮಗಳು ರಿಯಾ
Follow us on

ಬೆಂಗಳೂರು: ಮೂರೂವರೆ ವರ್ಷದ ಪುತ್ರಿ ಕೊಂದು ತಾಯಿ ನೇಣಿಗೆ (Suicide) ಶರಣಾಗಿರುವಂತಹ ಘಟನೆ ರಾಜರಾಜೇಶ್ವರಿ ನಗರದ ಚನ್ನಸಂದ್ರದಲ್ಲಿ ನಡೆದಿದೆ. ರಿಯಾಳನ್ನು ಕೊಂದು (31) ವರ್ಷದ ದೀಪಾ ನೇಣಿಗೆ ಶರಣಾದ ಮಹಿಳೆ. 1 ವಾರದಿಂದ ಜ್ವರ, ಹೊಟ್ಟೆ ನೋವಿನಿಂದ ದೀಪಾ ಬಳಲುತ್ತಿದ್ದಳು. ನನ್ನ ಸಾವಿಗೆ ಯಾರೂ ಹೊಣೆಯಲ್ಲ ಎಂದು ಬೆಡ್​ರೂಮ್​ನಲ್ಲಿ ಡೆತ್​ನೋಟ್ ಬರೆದಿಟ್ಟು ದಿವ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ಶರಣಾದ ದೀಪಾ ಉಡುಪಿ ಜಿಲ್ಲೆ ಬ್ರಹ್ಮಾವರದವರಾಗಿದ್ದು, 2017ರಲ್ಲಿ ದೀಪಾ, ಆದರ್ಶರೊಂದಿಗೆ ಮದುವೆಯಾಗಿದ್ದು, ಪತಿ ಆದರ್ಶ ಸಾಫ್ಟ್​ವೇರ್ ಇಂಜಿನಿಯರ್ ಆಗಿದ್ದಾರೆ. ವಿವಾಹವಾದಾಗಿನಿಂದ ಮಂತ್ರಿ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದರು. ಚಿಕಿತ್ಸೆ ಪಡೆದರೂ ಆರೋಗ್ಯ ಸುಧಾರಿಸದ ಹಿನ್ನೆಲೆಯಲ್ಲಿ ಅನಾರೋಗ್ಯದಿಂದ ಬೇಸತ್ತು ಪುತ್ರಿ ಜತೆ ದೀಪಾ ಆತ್ಮಹತ್ಯೆ ಮಾಡಕೊಂಡಿರುವ ಶಂಕೆ ವ್ಯಕ್ತವಾಗಿದೆ. ರಾಜರಾಜೇಶ್ವರಿನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮೊಸ್ಟ್ ವಾಂಟೆಡ್‌ ಮನೆಗಳ್ಳನ ಬಂಧನ:

ಬೆಂಗಳೂರು: ಸಿಸಿಬಿ ಪೊಲೀಸರಿಂದ ಮೊಸ್ಟ್ ವಾಂಟೆಡ್‌ ಮನೆಗಳ್ಳನ ಬಂಧಿಸಿದ್ದು, ಬಂಧಿತನಿಂದ 1.3 ಕೆಜಿ ಚಿನ್ನಾಭರಣ ಸಿಸಿಬಿ ವಶಕ್ಕೆ ಪಡೆಯಲಾಗಿದೆ. ಚೋರ್ ಇಮ್ರಾನ್ ಬಂಧಿತ ಆರೋಪಿ. ಮನೆಗಳ್ಳತನವನ್ನೇ ಕರಗತ ಮಾಡಿಕೊಂಡ ಚೋರ್ ಇಮ್ರಾನ್, ಈತ ಮನೆಯನ್ನು ಟಾರ್ಗೆಟ್ ಮಾಡಿದರೇ ಮುಗಿತು, ಎಂತಹ ಹೈ ಸೆಕ್ಯೂರಿಟಿ ಇದ್ರು ಮಿಸ್ಸಿ ಆಗೊ ಮಾತೆ ಇಲ್ಲ. ಈತನ ಸಾಲು ಸಾಲು ಕೃತ್ಯಕ್ಕೆ ಪೊಲೀಸರು ತಲೆಕೆಡಿಸಿಕೊಂಡಿದ್ದರು. ಸದ್ಯ ಸಿಸಿಬಿ ಪೊಲೀಸರಿಂದ ಬಂಧನವಾಗಿದ್ದು, ಬಂಧನದಿಂದ ಹೊಸ 15 ಪ್ರಕರಣಗಳು ಬೆಳಕಿಗೆ ಬಂದಿದೆ.

ಹೆತ್ತ ತಂದೆಯ ಕತ್ತು ಹಿಸುಕಿ ಕೊಲೆಗೈದ ಮಕ್ಕಳ ಮುಖವಾಡ ಬಯಲು

ಹುಬ್ಬಳ್ಳಿ: ಹೆತ್ತ ತಂದೆಯ ಕತ್ತು ಹಿಸುಕಿ ಕೊಲೆಗೈದ ಮಕ್ಕಳ ಮುಖವಾಡ ಬಯಲಾಗಿದ್ದು, ಆತ್ಮಹತ್ಯೆ ಎಂದು ಬಿಂಬಿಸಿಲು ಹೋಗಿದ್ದ ಮಕ್ಕಳು ಅಂದರ್ ಆಗಿದ್ದಾರೆ. ನಗರದ ಸುತಗಟ್ಟಿ ಕಾನೂನು ವಿಶ್ವವಿದ್ಯಾಲಯ ಬಳಿ ಘಟನೆ ನಡೆದಿದೆ. ಕೆಎಸ್‌ಆರ್‌ಪಿ ಕಾನ್‌ಸ್ಟೆಬಲ್ ಇಸ್ಮಾಯಿಲ್‌ಸಾಬ್‌ ಕಿಲ್ಲೇದಾರ ಮೃತ ವ್ಯಕ್ತಿ. ಕೌಟುಂಬಿಕ ಕಲಹ ಕೊಲೆಯಲ್ಲಿ ಅಂತ್ಯವಾಗಿದ್ದು, ಇಸ್ಮಾಯಿಲ್ ಸಾಬ್​ನ ಇಬ್ಬರು ಮಕ್ಕಳು ಸೇರಿದಂತೆ ಐವರನ್ನು ಎಪಿಎಂಸಿ ನವನಗರ ಠಾಣೆ ಪೊಲೀಸರಿಂದ ಬಂಧನ ಮಾಡಲಾಗಿದೆ. ಇಸ್ಮಾಯಿಲ್‌ಸಾಬನ ಪುತ್ರ ಫಕುಸಾಬ ಕಿಲ್ಲೇದಾರ, ಪುತ್ರಿ ದಾವಲಮುನ್ನಿ ಕಾಲೇಖಾನ್ ಸ್ನೇಹಿತರಾದ ಈಶ್ವರ ಅರಿಕಟ್ಟಿ, ಶಿವಕುಮಾರ ಆರಿಕಟ್ಟಿ, ರೋಹನ್ ಕರಾ, ಇಸ್ಮಾಯಿಲ್ ಸಾಬನ ಬಂಧಿತ ಆರೋಪಿಗಳು. ಇಸ್ಮಾಯಿಲ್‌ಸಾಬ ಕಿಲ್ಲೇದಾರ ನವನಗರ ಕೆಸಿಸಿ ಬ್ಯಾಂಕ್ ಕಾಲನಿಯ ಲಕ್ಷ್ಮೀ ಹೈಟ್ಸ್ ಅಪಾರ್ಟ್ ಮೆಂಟ್​ನ ನಿವಾಸಿಯಾಗಿದ್ದು, ಕಳೆದ ಮೂರು ದಿನಗಳ ಹಿಂದೆ ಮೃತಪಟ್ಟಿದ್ದರು. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಪ್ರಕರಣ ಬಯಲಾಗಿದೆ. ಇಸ್ಮಾಯಿಲ್‌ಸಾಬ್ ಎರಡನೇ ಮದುವೆಯಾಗಿದ್ದ. ಆ ಮಹಿಳೆ ತಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಇಸ್ಮಾಯಿಲ್‌ಸಾಬ್ ಅವರ ಮಕ್ಕಳ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಕಾರಣಕ್ಕೆ ತಂದೆಯ ಜತೆ ಜಗಳವಾಡಿ ಕತ್ತು ಹಿಸುಕಿ ಮಕ್ಕಳು ಕೊಲೆಗೈದಿದ್ದರು.

ಅಪಾಯಕಾರಿ ಟ್ರ್ಯಾಕ್ಟರ್ ಹಗ್ಗ ಜಗ್ಗಾಟ ಪ್ರಕರಣ: ದೂರು ದಾಖಲು

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಮಕೇರಿ ಗ್ರಾಮದಲ್ಲಿ ಅಪಾಯಕಾರಿ ಟ್ರ್ಯಾಕ್ಟರ್ ಹಗ್ಗ ಜಗ್ಗಾಟ ನಡೆದಿತ್ತು. ಗ್ರಾಮದ ಬೀರಲಿಂಗೇಶ್ವರ ಜಾತ್ರೆ ನಿಮಿತ್ಯ ಟ್ರಾಕ್ಟರ್ ರೇಸ್ ಆಯೋಜನೆ ಮಾಡಲಾಗಿತ್ತು. ಸಾರ್ವಜನಿಕ ವಲಯದಲ್ಲಿ ಅಪಾಯಕಾರಿ ಟ್ರಾಕ್ಟರ್ ಹಗ್ಗ ಜಗ್ಗಾಟ ಸ್ಪರ್ಧೆ ಚರ್ಚೆಗೆ ಗ್ರಾಸವಾಗಿತ್ತು. ಡೆಂಜರಸ್ ಟ್ರ್ಯಾಕ್ಟರ್ ರೇಸ್ ಸುದ್ದಿ ಪ್ರಸಾರ ಬೆನ್ನಲ್ಲೆ ಚಮಕೇರಿ ಪಿಡಿಓ ವಿಜಯಲಕ್ಷ್ಮೀರಿಂದ ಐಗಳಿ ಠಾಣೆಗೆ ದೂರು ನೀಡಲಾಗಿದ್ದು, ಸ್ಥಳಕ್ಕೆ ಅಥಣಿ ಸಿಪಿಐ ಶಂಕರಗೌಡ ಬಸನಗೌಡರ, ಹಾಗೂ ಪಿಎಸ್ಐ ಪಿ. ಪವಾರ್ ಭೇಟಿ ನೀಡಿದ್ದಾರೆ. ಟ್ರಾಕ್ಟರ್ ರೇಸ್ ಆಯೋಜಕರ ಮೇಲೆ ಹಾಗೂ ಭಾಗವಹಿಸಿದವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಐಪಿ‌ಸಿ 279, 287, 336 ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಸಮಾಜಸೇವೆಯಲ್ಲಿ ತೊಡಗಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಮುಖಂಡನ ಕಾಮಪುರಾಣದ ಫೋಟೋಗಳು ವೈರಲ್