ಕೇಸರಿ ಟೋಪಿ, ಸಾಬ್ರ ಟೋಪಿ ಎರಡೂ ಹಾಕಿಕೊಳ್ಳಿ; ಈ ರೀತಿ ಹೇಳೋದೇ ಹಿಂದುತ್ವ: ಸಿಟಿ ರವಿ ಹೇಳಿಕೆ

CT Ravi: ನಮ್ಮ ಪಕ್ಷದ ದುರ್ಬಲತೆಗೆ ಟಾನಿಕ್ ಕೊಡುತ್ತೇವೆ. ನಮ್ಮ ಪಕ್ಷದ ಸಾಮರ್ಥ್ಯ, ನಮ್ಮ ಮಿತಿ ನಮಗೆ ಗೊತ್ತಿದೆ ಎಂದು ರಾಜ್ಯದಲ್ಲಿ ಮುಂದಿನ ಎಲೆಕ್ಷನ್​ನಲ್ಲಿ ಬಿಜೆಪಿ ಗೆಲ್ಲುವ ವಿಚಾರವಾಗಿ ಸಿ.ಟಿ. ರವಿ ಹೇಳಿಕೆ ನೀಡಿದ್ದಾರೆ.

ಕೇಸರಿ ಟೋಪಿ, ಸಾಬ್ರ ಟೋಪಿ ಎರಡೂ ಹಾಕಿಕೊಳ್ಳಿ; ಈ ರೀತಿ ಹೇಳೋದೇ ಹಿಂದುತ್ವ: ಸಿಟಿ ರವಿ ಹೇಳಿಕೆ
ಸಿ.ಟಿ. ರವಿ
Updated By: ganapathi bhat

Updated on: Mar 11, 2022 | 3:22 PM

ಬೆಂಗಳೂರು: ಗೋವಾದಲ್ಲಿ ಕಾಂಗ್ರೆಸ್​​ನವರದ್ದೇ ಅಧಿಕಾರ ಅಂದುಕೊಂಡಿದ್ದರು. ಕಾಂಗ್ರೆಸ್ ಸರ್ಕಾರ ರಚನೆಗೆ ರಾಜ್ಯಪಾಲರ ಅನುಮತಿ ಪಡೆದಿದ್ರು. ಒಂದು ದಿನ ಮೊದಲೇ ಸರ್ಕಾರ ರಚನೆಗೆ ಅನುಮತಿ ಕೇಳಿದ್ದರು. ಕಾಂಗ್ರೆಸ್​ನವರು ಗೆಲ್ಲುತ್ತೇವೆಂದು ಕೋಟ್ ಹೊಲಿಸಿಕೊಂಡಿದ್ರು. ಗೋವಾ ಕಾಂಗ್ರೆಸ್​ನವರು ಖಾತೆ ಕೂಡಾ ಹಂಚಿಕೊಂಡಿದ್ದರು. ಆದರೆ ಹಾಗಾಗಿಲ್ಲ ಎಂದು ವಿಧಾನಸೌಧದಲ್ಲಿ ಬಿಜೆಪಿ ನಾಯಕ ಸಿ.ಟಿ. ರವಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ನಮ್ಮ ನೀತಿಯೇ ಸಬ್ ಕಾ ಸಾಥ್, ವಿಕಾಸ್, ವಿಶ್ವಾಸ್. ಸಿದ್ದರಾಮಯ್ಯನವರ ರೀತಿ ಸರ್ವನಾಶ್ ಅಲ್ಲ ಎಂದು ತಿಳಿಸಿದ್ದಾರೆ.

ನವೀನ್ ಸಾವಿನ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ನೋಡಿದೆ. 20 ಸಾವಿರ ಜನರನ್ನ ಭಾರತಕ್ಕೆ ಕರೆತರಲು ಕಾರಣ ಯಾರು? ನವೀನ್ ಬಂಕರ್‌ನಲ್ಲೇ ಇದ್ದಿದ್ರೆ ಕರೆದುಕೊಂಡು ಬರುತ್ತಿದ್ದೆವು ಎಂದು ಸಿ.ಟಿ. ರವಿ ಹೇಳಿದ್ದಾರೆ. ನಮ್ಮ ದೌರ್ಬಲ್ಯವನ್ನ ಬಹಿರಂಗವಾಗಿ ಹೇಳಲು ಆಗಲ್ಲ. ಕೆಲವು ವಿಚಾರಗಳನ್ನ ಬಹಿರಂಗ ಮಾತಾಡಲು ಆಗಲ್ಲ. ನಾನು ಬಹಿರಂಗವಾಗಿ ಮಾತಾಡಿದರೆ ವಿವಾದವಾಗಬಹುದು. ನಮ್ಮ ಪಕ್ಷದ ದುರ್ಬಲತೆಗೆ ಟಾನಿಕ್ ಕೊಡುತ್ತೇವೆ. ನಮ್ಮ ಪಕ್ಷದ ಸಾಮರ್ಥ್ಯ, ನಮ್ಮ ಮಿತಿ ನಮಗೆ ಗೊತ್ತಿದೆ ಎಂದು ರಾಜ್ಯದಲ್ಲಿ ಮುಂದಿನ ಎಲೆಕ್ಷನ್​ನಲ್ಲಿ ಬಿಜೆಪಿ ಗೆಲ್ಲುವ ವಿಚಾರವಾಗಿ ಸಿ.ಟಿ. ರವಿ ಹೇಳಿಕೆ ನೀಡಿದ್ದಾರೆ.

ದೇಶದ ಹಿತದೃಷ್ಟಿಯಿಂದ ಒಂದು ರಾಷ್ಟ್ರ, ಒಂದು ಚುನಾವಣೆ ಬೇಕು

ಆಡಳಿತ ಇರುವ ಕಡೆ ಆಡಳಿತ ವಿರೋಧಿ ಇರುತ್ತೆಂದು ಭಾವಿಸಿದ್ದೆವು. ಆದರೆ ನಾಲ್ಕು ಕಡೆ ಆಡಳಿತ ಪರ, ಜನಸ್ನೇಹಿ ಆಡಳಿತಕ್ಕೆ ಮತ ಹಾಕಲಾಗಿದೆ. ಜಾತಿ ರಾಜಕಾರಣ ಈಗ ನಡೆಯಲ್ಲ ಅನ್ನೋದು ಸಾಬೀತಾಗಿದೆ. ಗರೀಬಿ ಕಲ್ಯಾಣ, ಸಮರ್ಥ ಸಾಧನೆ, ಅಭಿವೃದ್ಧಿ ಕಾರ್ಯಕ್ಕೆ ಜಯ ಸಿಕ್ಕಿದೆ. ಸೋರಿಕೆ ಇಲ್ಲದ, ಭ್ರಷ್ಟಾಚಾರ ವಿರೋಧಿ ಸರ್ಕಾರಕ್ಕೆ ಜನ ಬೆಂಬಲ ನೀಡಿದ್ದಾರೆ. ಈ ವರ್ಷಾಂತ್ಯದಲ್ಲಿ ಗುಜರಾತ್, ನಂತರ ಕರ್ನಾಟಕ ಚುನಾವಣೆ ನಡೆಯಲಿದೆ. ದೇಶದ ಹಿತದೃಷ್ಟಿಯಿಂದ ಒಂದು ರಾಷ್ಟ್ರ, ಒಂದು ಚುನಾವಣೆ ಬೇಕು. ಇಲ್ಲವಾದರೆ ಪ್ರತಿ ವರ್ಷ ಚುನಾವಣೆ ಎದುರಿಸಬೇಕಾಗುತ್ತದೆ ಎಂದು ಸಿ.ಟಿ. ರವಿ ಅಭಿಪ್ರಾಯಪಟ್ಟಿದ್ದಾರೆ.

ಹಿಂದುತ್ವ ಅನ್ನೋದು ಎಷ್ಟು ಬಲವಾಗುತ್ತದೆಯೋ, ರಾಷ್ಟ್ರವಾದವೂ ಕೂಡ ಅಷ್ಟೇ ಬಲವಾಗುತ್ತದೆ. ಸಿದ್ದರಾಮಯ್ಯನಂತಹವರು ನಮ್ಮ ನಡುವೆ ಇದ್ದಾರೆ. ಕೇಸರಿ ಪೇಟ ತಂದರೆ ಬಿಸಾಕಿ ಎಂದು ಹೇಳೋದು. ಸಾಬ್ರು ಟೋಪಿ ತಂದರೆ ಹಾಕಿಕೊಳ್ಳಿ ಅನ್ನೋದು. ಇದೆಲ್ಲಾ ಹಿಂದುತ್ವ ಅಲ್ಲ. ಕೇಸರಿ ಟೋಪಿ, ಸಾಬ್ರ ಟೋಪಿ ಎರಡೂ ಹಾಕಿಕೊಳ್ಳಿ. ಈ ರೀತಿಯಾಗಿ ಹೇಳೋದೇ ಹಿಂದುತ್ವ ಎಂದು ಸಿ.ಟಿ. ರವಿ ತಿಳಿಸಿದ್ದಾರೆ.

ಇದನ್ನೂ ಓದಿ: ನಿಮ್ಮ ನಾಯಕರು ಯಾರು ಸ್ವಾಮಿ? ಕರ್ನಾಟಕದಲ್ಲಿ ಮಾತ್ರ ಸ್ವಲ್ಪ ಉಸಿರಾಡುತ್ತಿದ್ದೀರಿ: ಸಿದ್ದರಾಮಯ್ಯಗೆ ಯಡಿಯೂರಪ್ಪ ಟಾಂಗ್

ಇದನ್ನೂ ಓದಿ: ಬೆಂಗಳೂರನ್ನು ರಿಪೇರಿ ಮಾಡಲು ವಿಶ್ವಸಂಸ್ಥೆ ಬಂದ್ರೂ ಆಗಲ್ಲ: ವಿಧಾನ ಪರಿಷತ್​ನಲ್ಲಿ ಕೆಎಸ್ ಈಶ್ವರಪ್ಪ ಉತ್ತರ

Published On - 2:41 pm, Fri, 11 March 22