AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sira Granite Tiles: ಬೀಜಿಂಗ್‌ ಫುಟ್‌ಪಾತ್‌ಗೆ ಶಿರಾದಿಂದ ಕಲ್ಲು ತರಿಸಿಕೊಂಡು ಅಳವಡಿಸಿದ್ದಾರೆ, ಆದರೆ ಅದೇ ಕಲ್ಲು ಇಲ್ಲಿ ಬ್ಯಾನ್!

Beijing footpath: ನಮ್ಮ ರಾಜಧಾನಿಗೆ ಹತ್ತಿರವೇ ಇರುವ ಶಿರಾದಿಂದ ಕಲ್ಲು ತರಿಸಿಕೊಂಡು ಫುಟ್‌ಪಾತ್‌ಗೆ ಹಾಕಿದ್ದಾರೆ, ಆದರೆ ಬೆಂಗಳೂರಿನಲ್ಲಿ ಅದೇ ಕಲ್ಲು ಹಾಕಲು ಅವಕಾಶವಿಲ್ಲ! ರಾಜ್ಯ ಸರ್ಕಾರ ಬ್ಯಾನ್ ವಾಪಸ್​ ಪಡೆಯಲಿ ಎಂದು ಕಾಂಗ್ರೆಸ್​ ಸದಸ್ಯ ಕೆ. ಗೋವಿಂದರಾಜ್ ಆಗ್ರಹಿಸಿದರು.

Sira Granite Tiles: ಬೀಜಿಂಗ್‌ ಫುಟ್‌ಪಾತ್‌ಗೆ ಶಿರಾದಿಂದ ಕಲ್ಲು ತರಿಸಿಕೊಂಡು ಅಳವಡಿಸಿದ್ದಾರೆ, ಆದರೆ ಅದೇ ಕಲ್ಲು ಇಲ್ಲಿ ಬ್ಯಾನ್!
ಬೀಜಿಂಗ್‌ ಫುಟ್‌ಪಾತ್‌ಗೆ ಶಿರಾದಿಂದ ಕಲ್ಲು ತರಿಸಿಕೊಂಡು ಕಲ್ಲು ಅಳವಡಿಸಿದ್ದಾರೆ, ಆದರೆ ಅದೇ ಕಲ್ಲು ಇಲ್ಲಿ ಬ್ಯಾನ್!
TV9 Web
| Updated By: ಸಾಧು ಶ್ರೀನಾಥ್​|

Updated on:Mar 11, 2022 | 4:44 PM

Share

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನ ಜನಸಂಖ್ಯೆ ಸುಮಾರು ಒಂದೂವರೆ ಕೋಟಿಯಿದೆ. ಆದರೆ ಬಿಬಿಎಂಪಿಗೆ ಆಯುಕ್ತ ಮಾತ್ರ ಒಬ್ಬರೇ ಇದ್ದಾರೆ. ಒಬ್ಬ ಆಯುಕ್ತರಿಂದ ಇಡೀ ಬೆಂಗಳೂರಿಗೆ ಗಮನ ಕೊಡುವುದು ಆಗುವುದಿಲ್ಲ ಎಂದು ರಾಜ್ಯ ವಿಧಾನ ಪರಿಷತ್‌ ಕಲಾಪದ ವೇಳೆ ಕಾಂಗ್ರೆಸ್​ ಸದಸ್ಯ ಕೆ. ಗೋವಿಂದರಾಜ್ ರಾಜಧಾನಿಯ ಬಗ್ಗೆ ಅಸಹಾಯಕತೆ ತೋಡಿಕೊಂಡರು.

ವಿಧಾನ ಪರಿಷತ್ ನಲ್ಲಿ ಬಜೆಟ್ ಮೇಲೆ ಮುಂದುವರೆದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್​ ಸದಸ್ಯ ಗೋವಿಂದರಾಜ್ ಅವರು ಅದೇ ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ(Beijing) ಫುಟ್‌ಪಾತ್‌ಗೆ ನಮ್ಮ ರಾಜ್ಯದ ಕಲ್ಲು ಅಳವಡಿಸಿದ್ದಾರೆ! ನಮ್ಮ ರಾಜಧಾನಿಗೆ ಹತ್ತಿರವೇ ಇರುವ ಶಿರಾದಿಂದ ಕಲ್ಲು ತರಿಸಿಕೊಂಡು (Sira Grey Granite Tiles) ಫುಟ್‌ಪಾತ್‌ಗೆ (beijing footpath) ಹಾಕಿದ್ದಾರೆ, ಆದರೆ ಬೆಂಗಳೂರಿನಲ್ಲಿ ಅದೇ ಕಲ್ಲು ಹಾಕಲು ಅವಕಾಶವಿಲ್ಲ! ಇಲ್ಲಿ ಸಿಮೆಂಟ್ ಹಾಲೋ ಬ್ಲಾಕ್ ಹಾಕುತ್ತಿದ್ದಾರೆ. ರಾಜ್ಯದಲ್ಲಿ ಈ ಕಲ್ಲು ಉಪಯೋಗಿಸದಂತೆ (BBMP Sira rock) ಸರ್ಕಾರವೇ ಆದೇಶಿಸಿದೆ. ವಿದೇಶದಲ್ಲಿ ನಮ್ಮ ಕಲ್ಲು ಬಳಿಸಿ ಫುಟ್‌ಪಾತ್ ಮಾಡಿದ್ದಾರೆ! ಆದರೆ ಅದೇ ಕಲ್ಲನ್ನು ಇಲ್ಲಿ ಬ್ಯಾನ್ ಮಾಡಿದ್ದಾರೆ. 2012ರಲ್ಲಿ ಫುಟ್ ಪಾತ್ ಗೆ ಕಲ್ಲು ಹಾಕಬಾರದು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಅದನ್ನು ಬದಲಾವಣೆ ಮಾಡಿ ಆದೇಶ ಮಾಡಬೇಕು ಎಂದು ವಸ್ತುಸ್ಥಿತಿಯನ್ನು ತೆರೆದಿಟ್ಟು, ಆಗ್ರಹಪೂರ್ವಕ ಮನವಿ ಮಾಡಿದರು.

ಇದನ್ನೂ ಓದಿ: ಒಂದೇ ದಿನ ಎರಡು ಕಡೆ! ಪೊಲೀಸರು ಜಫ್ತಿ ಮಾಡಿದ್ದ ಹಳೆಯ ವಾಹನಗಳಿಗೆ ಬೆಂಕಿ -21 ವಾಹನಗಳು ಅಗ್ನಿಗಾಹುತಿ

ಇದನ್ನೂ ಓದಿ: ಮನೆಯವರ ವಿರೋಧದ ನಡುವೆ ಮದುವೆಯಾಗಿದಕ್ಕೆ ಮಗಳನ್ನೇ ವಿಧವೆ ಮಾಡಿದ ಅಪ್ಪ; ವಿಜಯಪುರ ಮಾಜಿ ಕಾರ್ಪೊರೇಟರ್ ಸೇರಿ ನಾಲ್ವರ ಬಂಧನ

Published On - 4:42 pm, Fri, 11 March 22

ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಡಿಸಿಎಂ ಹೇಳಿದ್ದನ್ನು ಗಂಭೀರ ಮುಖಮುದ್ರೆಯೊಂದಿಗೆ ಕೇಳಿಸಿಕೊಂಡ ಸಿಎಂ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ
ಮಾಲ್ಡೀವ್ಸ್ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
ಮಾಲ್ಡೀವ್ಸ್ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?
ಮಂತ್ರಿಯಾಗುವ ಆಸೆಯನ್ನು ಪದೇಪದೆ ಹೇಳಿಕೊಳ್ಳುತ್ತಿರುವ ಅರಸೀಕೆರೆ ಶಾಸಕ
ಮಂತ್ರಿಯಾಗುವ ಆಸೆಯನ್ನು ಪದೇಪದೆ ಹೇಳಿಕೊಳ್ಳುತ್ತಿರುವ ಅರಸೀಕೆರೆ ಶಾಸಕ
ನೆಲಮಂಗಲ: ಗನ್​ ತೋರಿಸಿ ಹೆದರಿಸಿ, ಚಿನ್ನದ ದೋಚಿದ ಆರೋಪಿಗಳು, ವಿಡಿಯೋ ವೈರಲ್
ನೆಲಮಂಗಲ: ಗನ್​ ತೋರಿಸಿ ಹೆದರಿಸಿ, ಚಿನ್ನದ ದೋಚಿದ ಆರೋಪಿಗಳು, ವಿಡಿಯೋ ವೈರಲ್
ಸಿದ್ದರಾಮಯ್ಯ ಪಕ್ಕದಲ್ಲಿ ನಿಂತಿದ್ದ ಶಿವಕುಮಾರ್ ಮುಖದಲ್ಲಿ ಅನ್ಯಮನಸ್ಕತೆ
ಸಿದ್ದರಾಮಯ್ಯ ಪಕ್ಕದಲ್ಲಿ ನಿಂತಿದ್ದ ಶಿವಕುಮಾರ್ ಮುಖದಲ್ಲಿ ಅನ್ಯಮನಸ್ಕತೆ
ಕೋಯ್ನಾ ಜಲಾಶಯದಿಂದ ನೀರು ಬಿಡುಗಡೆ: ಕೃಷ್ಣ ನದಿ ಬಳಿ ತೆರಳದಂತೆ ಸೂಚನೆ
ಕೋಯ್ನಾ ಜಲಾಶಯದಿಂದ ನೀರು ಬಿಡುಗಡೆ: ಕೃಷ್ಣ ನದಿ ಬಳಿ ತೆರಳದಂತೆ ಸೂಚನೆ
ದುರಹಂಕಾರ ಸಿದ್ದರಾಮಯ್ಯ ವಂಶವಾಹಿನಿಯಲ್ಲಿ ಹರಿಯುತ್ತಿದೆ: ವಿಶ್ವನಾಥ್
ದುರಹಂಕಾರ ಸಿದ್ದರಾಮಯ್ಯ ವಂಶವಾಹಿನಿಯಲ್ಲಿ ಹರಿಯುತ್ತಿದೆ: ವಿಶ್ವನಾಥ್