ಮನೆಯವರ ವಿರೋಧದ ನಡುವೆ ಮದುವೆಯಾಗಿದಕ್ಕೆ ಮಗಳನ್ನೇ ವಿಧವೆ ಮಾಡಿದ ಅಪ್ಪ; ವಿಜಯಪುರ ಮಾಜಿ ಕಾರ್ಪೊರೇಟರ್ ಸೇರಿ ನಾಲ್ವರ ಬಂಧನ

ಮೃತ ಮುಸ್ತಕಿನ್ ಪತ್ನಿ ಅತೀಕಾಳ ತಂದೆ ಹಾಗೂ ಮಾಜಿ ಕಾರ್ಪೊರೇಟರ್ ರೌಫ್ ಶೇಖ್ ಹಾಗೂ ಇತರರು ಕೊಲೆ ಮಾಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿತ್ತು. ಈ ನಿಟ್ಟಿನಲ್ಲಿ ಗಾಂಧಿಚೌಕ್ ಪೊಲೀಸರು ಈಗಾಗಲೇ ಮಾಜಿ ಕಾರ್ಪೊರೇಟರ್ ರೌಫ್ ಶೇಖ್ ಹಾಗೂ ಇತರೆ ನಾಲ್ವರನ್ನು ಬಂಧಿಸಿದ್ದಾರೆ.

ಮನೆಯವರ ವಿರೋಧದ ನಡುವೆ ಮದುವೆಯಾಗಿದಕ್ಕೆ ಮಗಳನ್ನೇ ವಿಧವೆ ಮಾಡಿದ ಅಪ್ಪ; ವಿಜಯಪುರ ಮಾಜಿ ಕಾರ್ಪೊರೇಟರ್ ಸೇರಿ ನಾಲ್ವರ ಬಂಧನ
ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಪೊಲೀಸ್ ಮಹಾ ಸಂಘದ ರಾಜ್ಯಾಧ್ಯಕ್ಷ ವಿ ಶ್ರೀಧರ ಹಾಗೂ ಕೊಲೆಗೀಡಾದ ಮುಸ್ತಕಿನ್ ಪತ್ನಿ ಅತೀಕಾ ಒತ್ತಾಯಿಸಿದ್ದಾರೆ.
TV9kannada Web Team

| Edited By: Ayesha Banu

Mar 11, 2022 | 3:27 PM

ವಿಜಯಪುರ: ಮನೆಯವರ ವಿರೋಧದ ಮಧ್ಯೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಕ್ಕೆ ಕೋಪಗೊಂಡ ಯುವತಿ ಮನೆಯವರು ಮಗಳನ್ನೇ ವಿಧವೆ ಮಾಡಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿತ್ತು. ಕಳೆದ ಫೆಬ್ರವರಿ 15 ರಂದು ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಕ್ರೈಂ ವಿಭಾಗದ ಪಿಎಸ್ಐ ರಿಯಾಜ್ ಅಹಮ್ಮದ್ ಕೂಡಗಿ ಎಂಬುವವರ ಪುತ್ರ ಮುಸ್ತಕಿನ್ ಕೂಡಗಿ ನಗರದ ಹೊರ ಭಾಗದ ಬೈಪಾಸ್ ಮೇಲೆ ಸ್ಕೂಟಿಯಲ್ಲಿ ಬರುವಾಗ ಬುಲೆರೋ ಹಾಯಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಘಟನೆ ಸಂಬಂಧ ಈಗ ನಾಲ್ವರನ್ನು ಬಂಧಿಸಲಾಗಿದೆ.

ಮೃತ ಮುಸ್ತಕಿನ್ ಪತ್ನಿ ಅತೀಕಾಳ ತಂದೆ ಹಾಗೂ ಮಾಜಿ ಕಾರ್ಪೊರೇಟರ್ ರೌಫ್ ಶೇಖ್ ಹಾಗೂ ಇತರರು ಕೊಲೆ ಮಾಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿತ್ತು. ಈ ನಿಟ್ಟಿನಲ್ಲಿ ಗಾಂಧಿಚೌಕ್ ಪೊಲೀಸರು ಈಗಾಗಲೇ ಮಾಜಿ ಕಾರ್ಪೊರೇಟರ್ ರೌಫ್ ಶೇಖ್ ಹಾಗೂ ಇತರೆ ನಾಲ್ವರನ್ನು ಬಂಧಿಸಿದ್ದಾರೆ. ಆದರೆ ಇನ್ನುಳಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಪೊಲೀಸ್ ಮಹಾ ಸಂಘದ ರಾಜ್ಯಾಧ್ಯಕ್ಷ ವಿ ಶ್ರೀಧರ ಹಾಗೂ ಕೊಲೆಗೀಡಾದ ಮುಸ್ತಕಿನ್ ಪತ್ನಿ ಅತೀಕಾ ಒತ್ತಾಯಿಸಿದ್ದಾರೆ. ಈ ಕುರಿತು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಕೆಲವೇ ಆರೋಪಿಗಳನ್ನು ಬಂಧಿಸಿದರೆ ಸಾಲದು. ಇನ್ನೂ ಕೆಲ ಆರೋಪಿಗಳು ಹೊರಗಡೆ ಇದ್ದಾರೆ. ಇಡೀ ಪ್ರಕರಣವನ್ನು ಸಿಓಡಿ ತನಿಖೆಗೆ ವಹಿಸಬೇಕೆಂದು ಇದೇ ವೇಳೆ ಪೊಲೀಸ್ ಮಹಾ ಸಂಘದ ರಾಜ್ಯಾಧ್ಯಕ್ಷ ವಿ ಶ್ರೀಧರ ಒತ್ತಾಯ ಮಾಡಿದರು. ಮುಸ್ತಕಿನ್ ಕೂಡಗಿಯನ್ನು ಕೊಲೆ ಮಾಡಿರೋ ಆರೋಪಿಗಳಿಂದ ಅತೀಕಾಳ ಹಾಗೂ ಇಡೀ ಕೂಡಗಿ ಕುಟುಂಬದವರಿಗೆ ಜೀವಭಯವಿದೆ. ಪೊಲೀಸರು ಕೂಡಗಿ ಕುಟುಂಬದವರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯ ಮಾಡಿದರು.

ಇದನ್ನೂ ಓದಿ: ಸಮಾಜವಾದಿ ಪಕ್ಷದ ‘ಜಂಗಲ್ ರಾಜ್’ ಮರಳುವ ಭಯದಿಂದ ದಲಿತರು ಮತ್ತು ಒಬಿಸಿಗಳು ಬಿಜೆಪಿಗೆ ಮತ ಹಾಕಿದರು: ಮಾಯಾವತಿ|

ಸಿಎಂ ಬೊಮ್ಮಾಯಿಗೆ ಹೇಳಿ ಉಚಿತವಾಗಿ ಬರೆಸಿಕೊಡಲಿ; ಈಗಲ್ಟನ್ ವಿಚಾರವಾಗಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟ ಡಿಕೆ ಸುರೇಶ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada