ಸಮಾಜವಾದಿ ಪಕ್ಷದ ‘ಜಂಗಲ್ ರಾಜ್’ ಮರಳುವ ಭಯದಿಂದ ದಲಿತರು ಮತ್ತು ಒಬಿಸಿಗಳು ಬಿಜೆಪಿಗೆ ಮತ ಹಾಕಿದರು: ಮಾಯಾವತಿ

ಬಿಜೆಪಿಯನ್ನು ಸೋಲಿಸಲು ಮುಸ್ಲಿಮರು ಎಸ್‌ಪಿಯನ್ನು ನಂಬಿದ್ದರು. ಇದರಿಂದ ನಮಗೆ ನಷ್ಟವಾಗಿದೆ. ಅವರನ್ನು (ಮುಸ್ಲಿಮರನ್ನು) ನಂಬುವುದರಿಂದ ನಾವು ದೊಡ್ಡ ಪಾಠವನ್ನು ಕಲಿತಿದ್ದೇವೆ. ನಾವು ಈ ಅನುಭವವನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತೇವೆ.

ಸಮಾಜವಾದಿ ಪಕ್ಷದ 'ಜಂಗಲ್ ರಾಜ್' ಮರಳುವ ಭಯದಿಂದ ದಲಿತರು ಮತ್ತು ಒಬಿಸಿಗಳು ಬಿಜೆಪಿಗೆ ಮತ ಹಾಕಿದರು: ಮಾಯಾವತಿ
ಮಾಯಾವತಿ
TV9kannada Web Team

| Edited By: Rashmi Kallakatta

Mar 11, 2022 | 3:25 PM

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ (Uttar Pradesh Assembly Electuions) 403 ಸ್ಥಾನಗಳಲ್ಲಿ 1 ಸ್ಥಾನವನ್ನು ಮಾತ್ರ ಗೆದ್ದ ಬಹುಜನ ಸಮಾಜ ಪಕ್ಷ (BSP) ಸಾಧನೆಗೆ ಪ್ರತಿಕ್ರಿಯಿಸಿದ ಮಾಯಾವತಿ (Mayawati), ಸಮಾಜವಾದಿ ಪಕ್ಷದ ಜಂಗಲ್ ರಾಜ್‌ನ ಮರಳುವ ಭಯದಿಂದ ದಲಿತರು ಸಹ ಬಿಜೆಪಿಗೆ ಮತ ಹಾಕಿದ್ದಾರೆ ಎಂದು ಹೇಳಿದರು. “ಪ್ರಾಥಮಿಕವಾಗಿ ಮೇಲ್ಜಾತಿ ಹಿಂದೂಗಳು ಮತ್ತು ಹಲವಾರು ಒಬಿಸಿ ಸಮುದಾಯಗಳಿಗೆ ಸೇರಿದ ಬಿಎಸ್‌ಪಿ ಬೆಂಬಲಿಗರಿಗೆ ಎಸ್‌ಪಿ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯವು ಹಿಂದಿನ ಜಂಗಲ್ ರಾಜ್ ಮತ್ತು ಗೂಂಡಾ ರಾಜ್‌ ಮರುಕಳಿಸುತ್ತದೆ ಎಂಬ ಭಯ ಅವರಲ್ಲಿ ಇತ್ತು. ಹೀಗಾಗಿ ಅವರು ಬಿಜೆಪಿಗೆ ಮತ ಹಾಕಿದ್ದಾರೆ’ ಎಂದು ಮಾಯಾವತಿ ಹೇಳಿದ್ದಾರೆ. ಎಸ್‌ಪಿಯನ್ನು ಬೆಂಬಲಿಸಿದ್ದಕ್ಕಾಗಿ ಮುಸ್ಲಿಮರನ್ನು ದೂಷಿಸಿದ ಮಾಯಾವತಿ, ಇದು ಬಿಎಸ್‌ಪಿಯ ಸಂಖ್ಯೆಯ ಮೇಲೆ ಪರಿಣಾಮ ಬೀರಿತು. ಬಿಜೆಪಿಯನ್ನು ಸೋಲಿಸಲು ಮುಸ್ಲಿಮರು ಎಸ್‌ಪಿಯನ್ನು ನಂಬಿದ್ದರು. ಇದರಿಂದ ನಮಗೆ ನಷ್ಟವಾಗಿದೆ. ಅವರನ್ನು (ಮುಸ್ಲಿಮರನ್ನು) ನಂಬುವುದರಿಂದ ನಾವು ದೊಡ್ಡ ಪಾಠವನ್ನು ಕಲಿತಿದ್ದೇವೆ. ನಾವು ಈ ಅನುಭವವನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತೇವೆ ಮತ್ತು ಅದಕ್ಕೆ ತಕ್ಕಂತೆ ಬದಲಾಯಿಸುತ್ತೇವೆ ಹೇಳಿದರು. ಮುಸ್ಲಿಮರು ನಮ್ಮನ್ನು ಬೆಂಬಲಿಸಿದ್ದರೆ ಬಿಜೆಪಿಯನ್ನು ಸೋಲಿಸಬಹುದಿತ್ತು ಎಂದು ಹೇಳಿದ ಅವರು, ಮುಸ್ಲಿಮರ ಮತ್ತು ದಲಿತರ ಮತಗಳು ಒಗ್ಗೂಡಿಸಿದ್ದರೆ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮಾಡಿದ್ದನ್ನು ನಾವು ಪುನರಾವರ್ತಿಸಬಹುದಿತ್ತು. ನಿರೀಕ್ಷೆಯಂತೆ ತ್ರಿಕೋನ ಕದನ ನಡೆದಿದ್ದರೆ, ಬಿಎಸ್‌ಪಿ ವಿಭಿನ್ನ ಪ್ರದರ್ಶನ ನೀಡುತ್ತಿತ್ತು ಮತ್ತು ಬಿಜೆಪಿಯನ್ನು ತಡೆಯುತ್ತಿತ್ತು ಎಂದಿದ್ದಾರೆ. ಬಿಜೆಪಿಯು “ಆಕ್ರಮಣಕಾರಿ ಮುಸ್ಲಿಂ ವಿರೋಧಿ” ಪ್ರಚಾರವನ್ನು ಹೊಂದಿದೆ, ಇದು ಮೋಸಗೊಳಿಸುವ ನಿರೂಪಣೆಗೆ ಕಾರಣವಾಗುತ್ತದೆ. ನಾನು ಸ್ವೀಕರಿಸಿದ ಪ್ರತಿಕ್ರಿಯೆಯಿಂದ, ಮಾಧ್ಯಮಗಳು ತಿರುಚಿದ ಸಮೀಕ್ಷೆಗಳನ್ನು ಪ್ರಕಟಿಸಿದವು. ಜನರನ್ನು, ವಿಶೇಷವಾಗಿ ಮುಸ್ಲಿಮರನ್ನು ವಂಚಿಸುವಲ್ಲಿ ಇದು ಪಾತ್ರ ವಹಿಸಿದೆ. ಬಿಎಸ್‌ಪಿ ಬಿಜೆಪಿಯ ಬಿ ಟೀಮ್ ಎಂಬ ಸಂದೇಶವನ್ನು ಹೊರತರಲಾಗಿದೆ, ಆದರೆ ವಾಸ್ತವದಲ್ಲಿ ಅದು ವಿರುದ್ಧವಾಗಿದೆ ಎಂದು ಮಾಯಾವತಿ ಹೇಳಿದರು.

ಆದಾಗ್ಯೂ, ಪಕ್ಷದ ಕಾರ್ಯಕರ್ತರಲ್ಲಿ ನಂಬಿಕೆಯನ್ನಿರಿಸಿದ ಅವರು ಮುಂಬರುವ ಭವಿಷ್ಯದಲ್ಲಿ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಹೇಳಿದರು. ಬಿಎಸ್ ಪಿಯ ಶೇ 12.8% ಮತ ಹಂಚಿಕೆಯು ಅದರ ರಚನೆಗೆ ಒಂಬತ್ತು ವರ್ಷಗಳಾದ 1993 ರಲ್ಲಿ ಗಳಿಸಿದ ಅತ್ಯಂತ ಕಡಿಮೆ ಪ್ರಮಾಣಕ್ಕಿಂತ ಶೇ 11.12ಕ್ಕಿಂತ ಸ್ವಲ್ಪ ಹೆಚ್ಚಾಗಿದೆ.

ಇದನ್ನೂ  ಓದಿ:ಕೇಂದ್ರ ಸಚಿವ ಅನುರಾಗ್ ಠಾಕೂರ್ ಉತ್ತರ ಪ್ರದೇಶದಲ್ಲಿ ‘ಮಿಷನ್ ಬಿಜೆಪಿ’ ಮೂಲಕ ಕಾರ್ಯಕರ್ತರಲ್ಲಿ ಚೈತನ್ಯ ತುಂಬಿದ್ದು ಹೀಗೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada