ಕೇಂದ್ರ ಸಚಿವ ಅನುರಾಗ್ ಠಾಕೂರ್ ಉತ್ತರ ಪ್ರದೇಶದಲ್ಲಿ ‘ಮಿಷನ್ ಬಿಜೆಪಿ’ ಮೂಲಕ ಕಾರ್ಯಕರ್ತರಲ್ಲಿ ಚೈತನ್ಯ ತುಂಬಿದ್ದು ಹೀಗೆ

ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಕಾರ್ಯಕರ್ತರಲ್ಲಿ ಚೈತನ್ಯ ತುಂಬಿದರು. ಇದರ ನೇರ ಪರಿಣಾಮವು ಉತ್ತರ ಪ್ರದೇಶದ ಚುನಾವಣಾ ಫಲಿತಾಂಶಗಳಲ್ಲಿ ಕಂಡುಬಂದಿದೆ. ಇದರಿಂದಾಗಿ ಭಾರತೀಯ ಜನತಾ ಪಕ್ಷವು ಸತತವಾಗಿ ಎರಡನೇ ಬಾರಿ ಅಧಿಕಾರಕ್ಕೇರಲು ಸಾಧ್ಯವಾಯಿತು.

ಕೇಂದ್ರ ಸಚಿವ ಅನುರಾಗ್ ಠಾಕೂರ್ ಉತ್ತರ ಪ್ರದೇಶದಲ್ಲಿ ‘ಮಿಷನ್ ಬಿಜೆಪಿ’ ಮೂಲಕ ಕಾರ್ಯಕರ್ತರಲ್ಲಿ ಚೈತನ್ಯ ತುಂಬಿದ್ದು ಹೀಗೆ
ಅನುರಾಗ್ ಠಾಕೂರ್
Follow us
| Updated By: ರಶ್ಮಿ ಕಲ್ಲಕಟ್ಟ

Updated on: Mar 11, 2022 | 2:34 PM

2022 ರ ಚುನಾವಣೆಯ ಸಮಯದಲ್ಲಿ ಅನುರಾಗ್ ಠಾಕೂರ್ (Anurag Thakur) ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ರೀತಿ ಮತ್ತು ಪ್ರತಿಪಕ್ಷಗಳ ಮೇಲೆ ತೀವ್ರವಾಗಿ ದಾಳಿ ಮಾಡಿದ ರೀತಿ ಬಿಜೆಪಿ (BJP) ಕಾರ್ಯಕರ್ತರ ನೈತಿಕತೆಯನ್ನು ಹೆಚ್ಚಿಸಲು ಸಹಾಯ ಮಾಡಿತು. ಇದರ ನೇರ ಪರಿಣಾಮ ಉತ್ತರ ಪ್ರದೇಶದಚುನಾವಣಾ ಫಲಿತಾಂಶದಲ್ಲಿ ಕಂಡು ಬಂದಿದ್ದು, ಬಿಜೆಪಿ ಸತತ ಎರಡನೇ ಬಾರಿಗೆ ಅಧಿಕಾರ ಹಿಡಿಯಲು ಸಾಧ್ಯವಾಯಿತು. ಅಂದಹಾಗೆ  ಬಿಜೆಪಿ ನಾಯಕ, ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರನ್ನು ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಅನುರಾಗ್ ಠಾಕೂರ್ ಅವರು ರಾಜ್ಯ ಮತ್ತು ಕೇಂದ್ರಕ್ಕಾಗಿ ಕೆಲಸ ಮಾಡುವ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. 2022 ರಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ (Uttar Pradesh Assembly Election 2022) ಬಿಜೆಪಿ ಪೂರ್ಣ ಬಹುಮತವನ್ನು ಪಡೆಯುವ ಮೂಲಕ ಐತಿಹಾಸಿಕ ವಿಜಯ ಗಳಿಸಿದ ನಂತರ ಅವರ ಕೊಡುಗೆಯ ಬಗ್ಗೆ ಮಾತನಾಡುವುದು ಮುಖ್ಯವಾಗಿದೆ. ಈ ಹಿಂದೆಯೂ ಅವರು ತಮ್ಮ ರಾಜಕೀಯ ಕೌಶಲ್ಯವನ್ನು ಹಲವು ಬಾರಿ ಪ್ರದರ್ಶಿಸಿದ್ದರೂ, ಅನುರಾಗ್ ಠಾಕೂರ್ ಮತ್ತೊಮ್ಮೆ ಈ ಅಭಿಯಾನಕ್ಕಾಗಿ ಉತ್ತರ ಪ್ರದೇಶಕ್ಕೆ ಪ್ರವಾಸ ಮಾಡಿದ ರೀತಿ ತುಂಬಾ ಶ್ಲಾಘನೀಯ. ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಕಾರ್ಯಕರ್ತರಲ್ಲಿ ಚೈತನ್ಯ ತುಂಬಿದರು. ಇದರ ನೇರ ಪರಿಣಾಮವು ಉತ್ತರ ಪ್ರದೇಶದ ಚುನಾವಣಾ ಫಲಿತಾಂಶಗಳಲ್ಲಿ ಕಂಡುಬಂದಿದೆ. ಇದರಿಂದಾಗಿ ಭಾರತೀಯ ಜನತಾ ಪಕ್ಷವು ಸತತವಾಗಿ ಎರಡನೇ ಬಾರಿ ಅಧಿಕಾರಕ್ಕೇರಲು  ಸಾಧ್ಯವಾಯಿತು. ಯುಪಿ ಚುನಾವಣೆಯ ಫಲಿತಾಂಶಗಳು ಬಿಜೆಪಿ ಪರವಾಗಿರುವುದರೊಂದಿಗೆ, ಪಕ್ಷದಲ್ಲಿ ಅನುರಾಗ್ ಠಾಕೂರ್ ಅವರ ಸ್ಥಾನಮಾನವು ಮತ್ತಷ್ಟು ಏರುವ ನಿರೀಕ್ಷೆಯಿದೆ.

ಅಪರಾಧಿಗಳನ್ನು ಸುಮ್ಮನೆ ಬಿಡುವುದಿಲ್ಲ ಎಂಬುದರ ಸಂಕೇತವಾದ ಬುಲ್ಡೋಜರ್ ಉತ್ತರ ಪ್ರದೇಶದ ಫಲಿತಾಂಶ ಬಿಜೆಪಿ ಪರವಾಗಿ ಬಂದ ನಂತರ ಟ್ವೀಟ್ ಮಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್ ಉತ್ತರ ಪ್ರದೇಶದ ಎಲ್ಲ ಗೌರವಾನ್ವಿತ ಮತದಾರರಿಗೆ ಮತ್ತು ಇಡೀ ರಾಜ್ಯದ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಬುಲ್ಡೋಜರ್, ಮಾಫಿಯಾ ಮತ್ತು ಕ್ರಿಮಿನಲ್‌ಗಳನ್ನು ಬೇರುಸಹಿತ ಕಿತ್ತೊಗೆಯುವ ಸಂಕೇತವಾಗಿದೆ ಎಂದು ಅವರು ಹೇಳಿದರು. ಈ ಗೆಲುವಿನೊಂದಿಗೆ ಬಿಜೆಪಿ ಮುನ್ನಡೆಯಲಿದ್ದು ಯುಪಿಯಲ್ಲಿ ಪ್ರಧಾನಿ ಮೋದಿಯವರ ಕಲ್ಯಾಣ ಯೋಜನೆಗಳ ತ್ವರಿತ ಅನುಷ್ಠಾನವನ್ನು ಕೈಗೊಳ್ಳಲಿದೆ ಎಂದು ಅವರು ಹೇಳಿದರು. ಉತ್ತರ ಪ್ರದೇಶದಲ್ಲಿಈ ಐತಿಹಾಸಿಕ ಗೆಲುವಿಗೆ ಕಾರಣರಾದ ಪಕ್ಷದ ಕಾರ್ಯಕರ್ತರ ಶ್ರಮವನ್ನು ಅವರು ಶ್ಲಾಘಿಸಿದರು.

ನಾಯಕತ್ವದ ಗುಣ ಸಾಬೀತು ಉತ್ತರ ಪ್ರದೇಶ ಚುನಾವಣೆಯಲ್ಲಿ ಅನುರಾಗ್ ಠಾಕೂರ್ ಮತ್ತೊಮ್ಮೆ ತಮ್ಮ ನಾಯಕತ್ವದ ಗುಣವನ್ನು ಸಾಬೀತುಪಡಿಸಿದ್ದಾರೆ. ಚುನಾವಣಾ ನಿರ್ವಹಣೆಯಲ್ಲಿ ಅವರ ಕೌಶಲ್ಯವನ್ನು ಗುರುತಿಸಿದ ಬಿಜೆಪಿ ಅವರನ್ನು 2022 ರ ಯುಪಿ ವಿಧಾನಸಭಾ ಚುನಾವಣೆಯ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೇರಿಸಿದೆ. ಅನುರಾಗ್ ಠಾಕೂರ್ ಅವರು ಪೂರ್ಣ ಉತ್ಸಾಹದಿಂದ ಈ ಜವಾಬ್ದಾರಿಯನ್ನು ವಹಿಸಿಕೊಂಡರು. 2019 ರ ಲೋಕಸಭೆ ಚುನಾವಣೆಯಂತೆ ರಾಜ್ಯಾದ್ಯಂತ, ವಿಶೇಷವಾಗಿ ಉತ್ತರ ಪ್ರದೇಶದಾದ್ಯಂತ ಪ್ರವಾಸ ಮಾಡಿ ಮತದಾರರಿಗೆ ಮತ್ತು ಕಾರ್ಯಕರ್ತರಿಗೆ ಪಕ್ಷದ ಸಂದೇಶವನ್ನು ತಲುಪಿಸಲು ಶ್ರಮಿಸಿದರು.

ಅದೇ ಸಮಯದಲ್ಲಿ ಅವರು ಪ್ರತಿಪಕ್ಷಗಳನ್ನು ವಿಶೇಷವಾಗಿ ಸಮಾಜವಾದಿ ಪಕ್ಷವನ್ನು ಗುರಿಯಾಗಿಟ್ಟುಕೊಂಡು ಬಿಜೆಪಿಯ ಪರವಾಗಿ ವಾಲುವ ವಾತಾವರಣವನ್ನು ಸೃಷ್ಟಿಸಿದರು. ಇದಾದ ನಂತರ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಮತದಾರರು ಬಿಜೆಪಿಯನ್ನು ಮತ್ತೆ ಗೆಲ್ಲಿಸಲು ನಿರ್ಧರಿಸಿದರು.

ಅನುರಾಗ್ ಠಾಕೂರ್ ಅವರ ರಾಜಕೀಯ ಪಯಣ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ರಾಜಕೀಯ ಪಯಣದ ಬಗ್ಗೆ ಮಾತನಾಡಿದರೆ, ಅವರಲ್ಲಿ ರಾಜಕೀಯ ಅಂತರ್ಗತವಾಗಿರುವುದನ್ನು ನಾವು ಕಾಣಬಹುದು. ಅವರ ತಂದೆ ಪ್ರೇಮ್ ಕುಮಾರ್ ಧುಮಾಲ್ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಅನುರಾಗ್ ಠಾಕೂರ್ 2008 ರಲ್ಲಿ ತಮ್ಮ ರಾಜಕೀಯ ಪ್ರಯಾಣ ಪ್ರಾರಂಭಿಸಿದರು. ಹಮೀರ್‌ಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಂಸತ್ ಪ್ರವೇಶಿಸಿದರು.ಅವರು 2009 ಮತ್ತು 2014 ರಲ್ಲಿ ಹಮೀರ್‌ಪುರ ಲೋಕಸಭಾ ಸ್ಥಾನವನ್ನು ಗೆದ್ದರು. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಇದೇ ಕ್ಷೇತ್ರದಲ್ಲಿ ಗೆದ್ದರು. ಪ್ರಸ್ತುತ ಇವರು ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಹುದ್ದೆಯನ್ನು ಹೊಂದಿದ್ದಾರೆ. ಮಾಹಿತಿ ಮತ್ತು ಪ್ರಸಾರ ಸಚಿವರೂ ಆಗಿದ್ದಾರೆ ಇವರು.

ಸಾಧನೆಗಳು ಠಾಕೂರ್​​ಗೆ 20 ಜನವರಿ 2019 ರಂದು ಸಂಸದ್ ರತ್ನ ಪ್ರಶಸ್ತಿಯನ್ನು ನೀಡಲಾಗಿದೆ. ಅನುರಾಗ್ ಅವರು 25 ನೇ ವಯಸ್ಸಿನಲ್ಲಿ ಹಿಮಾಚಲ ಪ್ರದೇಶ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ನ ಅತ್ಯಂತ ಕಿರಿಯ ಅಧ್ಯಕ್ಷರಾಗಿದ್ದಾರೆ. ಅವರು 2001 ರಲ್ಲಿ 26 ನೇ ವಯಸ್ಸಿನಲ್ಲಿ ಭಾರತೀಯ ಜೂನಿಯರ್ ಕ್ರಿಕೆಟ್ ತಂಡಗಳನ್ನು ಆಯ್ಕೆ ಮಾಡಿದ ಅತ್ಯಂತ ಕಿರಿಯ ರಾಷ್ಟ್ರೀಯ ಆಯ್ಕೆಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಲ್ಲದೆ ಠಾಕೂರ್ ಹಿಮಾಚಲ ಪ್ರದೇಶ ರೈಫಲ್ ಅಸೋಸಿಯೇಶನ್‌ನ ಅಧ್ಯಕ್ಷರು, ಹಿಮಾಚಲ ಪ್ರದೇಶ ಒಲಿಂಪಿಕ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ, ಹಾಕಿ ಹಿಮಾಚಲ ಪ್ರದೇಶದ ಪ್ರಧಾನ ಕಾರ್ಯದರ್ಶಿ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ ಕಾರ್ಯಕಾರಿ ಸದಸ್ಯರೂ ಆಗಿದ್ದರು. ಅವರು 22 ಮೇ 2016 ರಂದು ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾದರು. ಅನುರಾಗ್ ಠಾಕೂರ್ ಅವರು 34 ನೇ ಮತ್ತು ಎರಡನೇ-ಕಿರಿಯ ಅಧ್ಯಕ್ಷರಾಗಿದ್ದಾರೆ. ಇದಕ್ಕೂ ಮುನ್ನ 1963ರಲ್ಲಿ ಫತೇ ಸಿಂಗ್ ಗಾಯಕ್ವಾಡ್ ಅವರು ತಮ್ಮ 33ನೇ ವಯಸ್ಸಿನಲ್ಲಿ ಈ ಹುದ್ದೆಯನ್ನು ಅಲಂಕರಿಸಿದ್ದರು.ಅನುರಾಗ್ ಠಾಕೂರ್ ಕೂಡ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಕಾರಣವಾದ ಎಂ-ವೈ ಸಮೀಕರಣ; ಭರವಸೆಗಳು ಜನಮನ ಗೆದ್ದದ್ದು ಹೇಗೆ?