ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಚ್ಚ ಹಸಿರಿನ ಹೊದಿಕೆಯಿಂದ ನಿಸರ್ಗದ ಮಧ್ಯೆ ಸ್ವಚ್ಚ ತಂಗಾಳಿಯಿಂದ ಕೂಡಿರುವ ಜಾಗ ಅಂದ್ರೆ ಅದು ಸಿಲಿಕಾನ್ ಸಿಟಿಯ ಬ್ರಹತ್ ಉದ್ಯಾನವನವಾಗಿರುವ ಕಬ್ಬನ್ ಪಾರ್ಕ್(Cubbon Park). ದುಡಿದು ದಣಿದು ಬಂದವರಿಗೆ ರಿಲ್ಯಾಕ್ಸ್ ಮಾಡಲು ಇರುವ ಜಾಗ. ಮಕ್ಕಳಿಗೆ ಆಟ ಆಡಲು, ಕುಟುಂಬ ಸಮೇತ ಬಂದು ಕಾಲ ಕಳೆಯಲು ಇರುವ ಜಾಗ. ಆದ್ರೀಗ ಕಬ್ಬನ್ ಪಾರ್ಕ್ ಗೆ ಬರಲು ಜನ ಯೋಚನೆ ಮಾಡ್ತಾ ಇದ್ದಾರೆ. ಏಕೆಂದರೆ ಇಲ್ಲಿ ಸಾಲಾಗಿ ಬ್ರಹತ್ ಮರಗಳು ಧರೆಗೆ ಉರುಳಿವೆ. ಅಧಿಕಾರಿಗಳು ತೆರವು ಕಾರ್ಯ ಮಾಡಿಲ್ಲ. ಜನರಿಗೆ ಯಾವಾಗ, ಯಾವ ಮರ ಬೀಳುತ್ತದೋ ಎಂಬ ಭಯ ಆವರಿಸಿದೆ.
ಕಬ್ಬನ್ ಪಾರ್ಕ್ನಲ್ಲಿ ಬೇರು ಸಮೇತ ಬ್ರಹತ್ ಮರಗಳು ಧರೆಗುರುಳಿವೆ, ಬುಡ ಸಮೇತ ಬಿದ್ದ ಮರಗಳು ಒಂದು ಕಡೆ ಪರಿಸರ ಪ್ರೇಮಿಗಳ ಹೊಟ್ಟೆ ಊರಿಗೆ ಕಾರಣವಾಗಿದ್ರೆ ಇನ್ನೊಂದು ಕಡೆ ಕಬ್ಬನ್ ಪಾರ್ಕ್ಗೆ ಬರುವವರ ಬೇಸರಕ್ಕೆ ಕಾರಣವಾಗಿದೆ. ಸಿಲಿಕಾನ್ ಸಿಟಿಯಲ್ಲಿ ಬಂದ ರಣಮಳೆಗೆ ಮರಗಳು ಬಿದ್ದಿವೆ. ಈ ಮರಗಳು ಹೀಗೆ ಬೇರು ಸಮೇತ ಬಿದ್ದು ತಿಂಗಳುಗಳೇ ಆಗಿ ಹೋಗಿವೆ. ಲೆಕ್ಕ ಪ್ರಕಾರ ಇವುಗಳ ತೆರವು ಮಾಡಬೇಕಾದ ತೋಟಗಾರಿಕಾ ಅಧಿಕಾರಿಗಳು ಕೈ ಕಟ್ಟಿ ಕುಳಿತಿದ್ದಾರೆ.
ಕಳೆದ ವಾರ ಬಂದಂತಹ ಮಳೆ ಹಾಗೂ ಗಾಳಿಗೆ ಸಾಲು ಸಾಲು ಮರಗಳು ಧರೆಗೆ ಉರುಳಿ ತಿಂಗಳುಗಳೆ ಕಳೆದಿವೆ. ಆದ್ರೆ ಬಿದ್ದಂತಹ 50ಕ್ಕೂ ಅಧಿಕ ಮರಗಳ ಪೈಕಿ ಅಲ್ಲೊಂದು ಇಲ್ಲೊಂದು ಮರಗಳ ತೆರವು ಕಾರ್ಯಾಚರಣೆ ಮಾಡಿದ್ದಾರೆ ಬಿಟ್ರೆ ಬಹುತೇಕ ಮರಗಳು ಹಾಗೇ ಉಳಿದು ಕೊಂಡಿದೆ. ಹೀಗಾಗಿ ಪಾರ್ಕ್ ನಲ್ಲಿ ಓಡಾಡುವವರಿಗೂ ಇನ್ನಿಲ್ಲದ ಸಮಸ್ಯೆ ಉಂಟಾಗುತ್ತಿದೆ. ಅಲ್ಲದೇ ಮಳೆಗಾಲಕ್ಕು ಮೊದಲೇ ಕಬ್ಬನ್ ಪಾರ್ಕ್ ನಲ್ಲಿ ಬೀಳುವ ಹಂತದಲ್ಲಿರುವ ಮರಗಳನ್ನ ಗುರುತಿಸುವ ಕೆಲಸವನ್ನ ತೋಟಾಗಾರಿಕೆ ಇಲಾಖೆಯ ಅಧಿಕಾರಿಗಳು ಮಾಡಬೇಕಿತ್ತು. ಆದ್ರೆ ಮಳೆಗಾಲ ಆರಂಭವಾಗಿ ಮರಗಳು ಧರೆಗೆ ಉರುಳುತ್ತಿದ್ರು ಅಧಿಕಾರಿಗಳು ಕ್ರಮ ತೆಗದುಕೊಳ್ಳುತ್ತಿಲ್ಲ. ಪ್ರತಿದಿನ ಪಾರ್ಕ್ ನಲ್ಲಿ ಸಾಕಷ್ಟು ಜನ ಒಡಾಡ್ತಾ ಇರ್ತಾರೆ. ಯಾರಿಗಾದ್ರು ಹೆಚ್ಚು ಕಮ್ಮಿಯಾದ್ರೆ ಯಾರು ಹೊಣೆ ಅಂತ ನಡಿಗೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Rangoli Garden: ಕರುನಾಡ ಹಳ್ಳಿಯ ಸೊಬಗನ್ನು ಪರಿಚಯಿಸುತ್ತಿದೆ ಬೆಂಗಳೂರಿನ ರಂಗೋಲಿ ಗಾರ್ಡನ್
ಇನ್ನು, ಈ ಕುರಿತಾಗಿ ಕಬ್ಬನ್ ಪಾರ್ಕ್ ಡಿಡಿ ಬಾಲಕೃಷ್ಣ ಅವರನ್ನ ಪ್ರಶ್ನಿಸಿದ್ದಕ್ಕೆ ಮಳೆ ಗಾಳಿಗೆ 50ಕ್ಕೂ ಹೆಚ್ಚು ಮರಗಳು ಧರೆಗೆ ಉರುಳಿವೆ. ಈ ಬಗ್ಗೆ ಬಿವಿಎಂಪಿ ಅರಣ್ಯ ವಿಭಾಗಕ್ಕೆ ಮಾಹಿತಿ ನೀಡಿದೆ. ಇದೀಗಾ ಬಿಬಿಎಂಪಿ ಅಧಿಕಾರಿಗಳು ತೆರವು ಮಾಡುತ್ತಿದ್ದಾರೆ. ಮಳೆಗಾಲಕ್ಕೂ ಮೊದಲು 12 ಮರಗಳು ಬೀಳುವ ಹಂತದಲ್ಲಿದ್ವು. ಅವುಗಳನ್ನ ತೆರವು ಮಾಡಿದ್ವಿ. ಇದೀಗಾ ಬಾರಿ ಮಳೆ ಗಾಳಿಗೆ ಮರಗಳು ಬಿದ್ದಿವೆ. ಈ ಕುರಿತಾಗಿ ಕ್ರಮತೆಗೆದುಕೊಳ್ಳಲಾಗುತ್ತಿದೆ ಎಂದ್ರು.
ಒಟ್ಬಲ್ಲಿ, ಕಬ್ಬನ್ ಪಾರ್ಕ್ ಇನ್ನೂ ಸ್ಮಾರ್ಟ್ ಮಾಡ್ತೀವಿ ಅಂತ ಸ್ಮಾರ್ಟ್ ಸಿಟಿ ಕಾಮಗಾರಿ ಪಾರ್ಕ್ ಒಳಗಡೆ ಮಾಡಿರೋದೇ ಬಹುತೇಕ ಮರಗಳು ಧರೆಗುರುಳಲು ಕಾರಣ ಅಂತ ಹೇಳಲಾಗ್ತಾ ಇದೆ. ಕೊನೆ ಪಕ್ಷ ಧರೆಗೆ ಉರಿಳಿರುವ ಮರಗಳನ್ನ ತೆರವು ಮಾಡಿ ಪಾರ್ಕ್ ಗೆ ಬರುವ ಜನರಿಗೆ ಅನುಕೂಲ ಕಲ್ಪಿಸಿಕೊಡಲಿ ಅನ್ನೋದು ಜನರ ಬೇಡಿಕೆ. ಹೀಗಾಗಿ ಆದಷ್ಟು ಬೇಗ ಕಬ್ಬನ್ ಪಾರ್ಕ್ ತೋಟಗಾರಿಕೆ ಇಲಾಖೆ ಕ್ರಮ ತೆಗದುಕೊಳ್ಳಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ