ಬೆಂಗಳೂರು: ಸಿಲಿಂಡರ್ ಸ್ಪೋಟಗೊಂಡು 7 ಮಂದಿಗೆ ಗಾಯ, ಐದು ಮನೆಗಳಿಗೆ‌ ಹಾನಿ

ಯಲಹಂಕದ ಎಲ್​ಬಿಎಸ್​​ ಲೇಔಟ್​ನಲ್ಲಿ ಸಿಲಿಂಡರ್ ಸ್ಫೋಟಗೊಂಡು ಆರು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಯಲಹಂಕದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು: ಸಿಲಿಂಡರ್ ಸ್ಪೋಟಗೊಂಡು 7 ಮಂದಿಗೆ ಗಾಯ, ಐದು ಮನೆಗಳಿಗೆ‌ ಹಾನಿ
ಮನೆಗೆ ಹಾನಿ
Edited By:

Updated on: Jan 16, 2024 | 9:57 AM

ಬೆಂಗಳೂರು, ಜನವರಿ 16: ಯಲಹಂಕದ (Yelahanka) ಎಲ್​ಬಿಎಸ್​​ ಲೇಔಟ್​ನ ಮನೆಯೊಂದರಲ್ಲಿನ ಸಿಲಿಂಡರ್ ಸ್ಫೋಟಗೊಂಡು (Cylinder Blast) ಏಳು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಯಲಹಂಕದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಸಿಲಿಂಡರ್ ಸ್ಫೋಟದ ತೀವ್ರತೆಗೆ ಐದು ಮನೆಗಳಿಗೆ ಹಾನಿಯಾಗಿದೆ. ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ಘಟನೆ ನಡೆದಿದೆ.  ದೆಹಲಿ ಮೂಲದ ಹಸ್ಮಾ ಬಾನು ಎಂಬುವರು ಮನೆ ಕೆಲಸ ಮಾಡಿಕೊಂಡು ನಗರದಲ್ಲಿ ವಾಸವಾಗಿದ್ದಾರೆ. ಹಸ್ಮಾ ಬಾನು ಅವರ ಸಿಲಿಂಡರ್​ ಸ್ಫೋಟಗೊಂಡಿದೆ. ಅವಘಡದಲ್ಲಿ ಸಲ್ಮಾ, ಶಾಹಿದ್ ಸೇರದಂತೆ ಐವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.  ಪಸಿಯಾ ಭಾನು ಮತ್ತು ಹಸ್ಮಾ ಇಬ್ಬರ ಸ್ಥಿತಿ ಗಂಭೀರವಾಗಿದೆ.

ಘಟನೆ ಸಂಬಂಧ ಗಾಯಾಳು ಅಫ್ರೋಜ್ ಮಾತನಾಡಿ, ಬೆಳಗ್ಗೆ 7.10 ರ ಸುಮಾರಿಗೆ ಸಿಲಿಂಡ್​ ಸ್ಪೋಟಗೊಂಡಿದೆ ಸಂಭವಿಸಿದೆ. ನಾವು ಮತ್ತು ನಮ್ಮ ತಂದೆ ಕೆಳಗೆ ಇದ್ವಿ. ನಮ್ಮ ಅಮ್ಮ ಮೊದಲ ಮಹಡಿಯಲ್ಲಿ ಇದ್ದರು. ಈ‌ ವೇಳೆ ಶಾರ್ಟ್ ಸರ್ಕ್ಯೂಟ್ ಕೂಡ ಆಗಿದೆ. ನನಗೆ ಕರೆಂಟ್ ಹೊಡೆದು ಬಿದ್ದುಹೋದೆ. ಆಸ್ಪತ್ರೆಗೆ ಕರೆತಂದಿದ್ದಾರೆ ಎಂದು ಹೇಳಿದರು.

ಚಿತ್ರದುರ್ಗದ ಅಯಪ್ಪಸ್ವಾಮಿ ದೇಗುಲದಲ್ಲಿ ಅವಘಡ

ಚಿತ್ರದುರ್ಗ: ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಕಟ್ಟಿಗೆಯಿಂದ ನಿರ್ಮಿಸಿದ್ದ ಸ್ಕೈವಾಕ್ ಮುರಿದುಬಿದ್ದಿದೆ. ಘಟನೆಯಲ್ಲಿ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಿತ್ರದುರ್ಗ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:08 am, Tue, 16 January 24