ಜನವರಿ 19 ರಂದು ಬೆಂಗಳೂರಿಗೆ ಪ್ರಧಾನಿ ಮೋದಿ: ರೋಡ್​ ಶೋ ಸಾಧ್ಯತೆ

ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಇರುವಾಗ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿ ನಿಗದಿಯಾಗಿದೆ. ಜನವರಿ 19ರಂದು ಖೇಲೋ ಇಂಡಿಯಾ ಹಾಗೂ ಏರೋನಾಟಿಕ್ಸ್ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ತೆರಳುವ ಸಂದರ್ಭದಲ್ಲಿ ಬೆಂಗಳುರಿಗೆ ಭೇಟಿ ನೀಡಲಿರುವ ಮೋದಿ ರೋಡ್ ಶೋ ಕೂಡ ನಡೆಸುವ ಸಾಧ್ಯತೆ ಇದೆ.

ಜನವರಿ 19 ರಂದು ಬೆಂಗಳೂರಿಗೆ ಪ್ರಧಾನಿ ಮೋದಿ: ರೋಡ್​ ಶೋ ಸಾಧ್ಯತೆ
ಜನವರಿ 19 ರಂದು ಬೆಂಗಳೂರಿಗೆ ಪ್ರಧಾನಿ ಮೋದಿ: ರೋಡ್​ ಶೋ
Follow us
| Updated By: ಗಣಪತಿ ಶರ್ಮ

Updated on:Jan 16, 2024 | 11:36 AM

ಬೆಂಗಳೂರು, ಜನವರಿ 16: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಜನವರಿ 19 ರಂದು ಶುಕ್ರವಾರ ಬೆಂಗಳೂರಿಗೆ (Bengaluru) ಭೇಟಿ ನೀಡಲಿದ್ದಾರೆ. ಎರಡು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮೋದಿ, ರೋಡ್​ ಶೋ ಕೂಡ ನಡೆಸುವ ಸಾಧ್ಯತೆ ಇದೆ. ಖೇಲೋ ಇಂಡಿಯಾ ಹಾಗೂ ಏರೋನಾಟಿಕ್ಸ್ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ತೆರಳುವ ಸಂದರ್ಭದಲ್ಲಿ ಮೋದಿ ಅವರು ಬೆಂಗಳೂರಿಗೂ ಭೇಟಿ ನೀಡಲಿದ್ದಾರೆ. ಪ್ರಧಾನಿ ಭೇಟಿಯ ಕಾರಣ ಜನವರಿ 19ರಂದು ನಿಗದಿಯಾಗಿದ್ದ ಬಿಜೆಪಿ ಕಾರ್ಯಕಾರಿಣಿ ಸಭೆ ಮುಂದೂಡಿಕೆ ಮಾಡಲಾಗಿದೆ.

ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆಯೇ ಪ್ರಧಾನಿ ಬೆಂಗಳೂರಿಗೆ ಬರುತ್ತಿದ್ದಾರೆ. ಆದರೆ, ರೋಡ್​ ಶೋ ಸಂಬಂಧ ಬಿಜೆಪಿಯ ನಾಯಕರು ಅಧಿಕೃತ ಹೇಳಿಕೆ ನೀಡಿಲ್ಲ.

ಪ್ರಧಾನಿಯವರು ಬೆಂಗಳೂರಿಗೆ ಭೇಟಿ ನೀಡುವ ಸಂಬಂಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಸೋಮವಾರ ಸಂಜೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ. ಪ್ರಧಾನಿ ಕಾರ್ಯಾಲಯದಿಂದ ಹೆಚ್ಚಿನ ಮಾಹಿತಿಯ ನಿರೀಕ್ಷೆಯಲ್ಲಿ ಬಿಜೆಪಿ ರಾಜ್ಯ ನಾಯಕರು ಇದ್ದಾರೆ ಎನ್ನಲಾಗಿದೆ.

ಈ ಹಿಂದೆ ಚಂದ್ರಯಾನ ಯೋಜನೆಯ ಯಶಸ್ಸಿನ ಬಳಿಕ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುವುದಕ್ಕೆಂದೇ ಪ್ರಧಾನಿ ಬೆಂಗಳೂರಿಗೆ ಬಂದಿದ್ದರು. ಆ ಸಂದರ್ಭ ಪ್ರಧಾನಿಯವರು ರೋಡ್​ ಶೋ ಮಾಡಲಿದ್ದಾರೆ ಎಂದು ರಾಜ್ಯ ಬಿಜೆಪಿ ನಾಯಕರು ಹೇಳಿಕೆ ನೀಡಿ ನಂತರ ಮುಜುಗರಕ್ಕೀಡಾದ ಸನ್ನಿವೇಶ ಸೃಷ್ಟಿಯಾಗಿತ್ತು. ಯಾಕೆಂದರೆ, ಬಿಜೆಪಿ ನಾಯಕರ ಹೇಳಿಕೆಗಳ ಬೆನ್ನಲ್ಲೇ ರೋಡ್​​ ಶೋ ಉದ್ದೇಶವಿಲ್ಲ ಎಂದು ಪ್ರಧಾನಿ ಕಾರ್ಯಾಲಯದಿಂದ ಮಾಹಿತಿ ಬಂದಿತ್ತು.

ಇದನ್ನೂ ಓದಿ: ಕನ್ನಡ ಹಾಡಿಗೆ ತಲೆದೂಗಿದ ಪ್ರಧಾನಿ ಮೋದಿ: ಪೂಜಿಸಲೆಂದೇ ಹೂಗಳ ತಂದೆ ಹಾಡಿಗೆ ಮೆಚ್ಚುಗೆ

ನಂತರ, ಪ್ರಧಾನಿ ಭೇಟಿ ವೇಳೆ ಸ್ವಾಗತಿಸಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ತೆರಳದ ವಿಚಾರವೂ ರಾಜ್ಯ ರಾಜಕೀಯದಲ್ಲಿ ಜಿದ್ದಾಜಿದ್ದಿಗೆ ಕಾರಣವಾಗಿತ್ತು. ಸಿಎಂ ಹಾಗೂ ಡಿಸಿಎಂ ಶಿಷ್ಟಾಚಾರ ಪಾಲಿಸಿಲ್ಲ ಎಂದು ರಾಜ್ಯ ಬಿಜೆಪಿ ನಾಯಕರು ಟೀಕಿಸಿದ್ದರು. ಆದರೆ, ಪ್ರಧಾನಿ ಕಾರ್ಯಾಲಯದಿಂದಲೇ ಸೂಚನೆ ಬಂದ ಕಾರಣ ತಾವು ಅವರನ್ನು ಸ್ವಾಗತಿಸಲು ತೆರಳಲಿಲ್ಲ ಎಂದು ಸಿಎಂ, ಡಿಸಿಎಂ ಸ್ಪಷ್ಟನೆ ನೀಡಿದ್ದರು. ಇದು ಸಹ ರಾಜ್ಯ ಬಿಜೆಪಿ ನಾಯಕರನ್ನು ಮುಜುಗರಕ್ಕೀಡುಮಾಡಿತ್ತು. ಹೀಗಾಗಿ ಈ ಬಾರಿ ಹೆಚ್ಚು ಎಚ್ಚರಿಕೆ ಹೆಜ್ಜ ಇಡಲು ಅವರು ಯೋಜಿಸಿದ್ದಾರೆ ಎನ್ನಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:23 am, Tue, 16 January 24

ಕ್ಷಣಾರ್ಧದಲ್ಲೇ ಜಲ ಸಮಾಧಿಯಾದ ಎರಡಂತಸ್ತಿನ ಮನೆ
ಕ್ಷಣಾರ್ಧದಲ್ಲೇ ಜಲ ಸಮಾಧಿಯಾದ ಎರಡಂತಸ್ತಿನ ಮನೆ
ಕೋಲಾರದಲ್ಲಿ ಅನುಮಾನಾಸ್ಪದ ಸೂಟ್​ಕೇಸ್​ ಪತ್ತೆ, ಸ್ಥಳೀಯರಿಗೆ ಆತಂಕ
ಕೋಲಾರದಲ್ಲಿ ಅನುಮಾನಾಸ್ಪದ ಸೂಟ್​ಕೇಸ್​ ಪತ್ತೆ, ಸ್ಥಳೀಯರಿಗೆ ಆತಂಕ
ಯುವ ದಸರಾ ವೇದಿಕೆ ಮೇಲೆ ನಕ್ಕ ರುಕ್ಮಿಣಿ ವಸಂತ್; ವಿಡಿಯೋ ನೋಡಿ
ಯುವ ದಸರಾ ವೇದಿಕೆ ಮೇಲೆ ನಕ್ಕ ರುಕ್ಮಿಣಿ ವಸಂತ್; ವಿಡಿಯೋ ನೋಡಿ
Daily Devotional: ಯಾವ ಗ್ರಹ ಪೂಜಿಸಿದರೆ ಏನೇನು ಫಲ ಸಿಗುತ್ತೆ?
Daily Devotional: ಯಾವ ಗ್ರಹ ಪೂಜಿಸಿದರೆ ಏನೇನು ಫಲ ಸಿಗುತ್ತೆ?
Nithya Bhavishya: ಈ ರಾಶಿಯ ಮಹಿಳೆಯರು ಇಂದು ಉದ್ಯಮದಲ್ಲಿ ಪ್ರಗತಿ ಕಾಣುವರು
Nithya Bhavishya: ಈ ರಾಶಿಯ ಮಹಿಳೆಯರು ಇಂದು ಉದ್ಯಮದಲ್ಲಿ ಪ್ರಗತಿ ಕಾಣುವರು
ರಸ್ತೆಯಲ್ಲಿ ಬಿದ್ದ ಮೀನುಗಳನ್ನು ಕವರ್​ನಲ್ಲಿ ತುಂಬಿಕೊಳ್ಳಲು ಮುಗಿಬಿದ್ದ ಜನ
ರಸ್ತೆಯಲ್ಲಿ ಬಿದ್ದ ಮೀನುಗಳನ್ನು ಕವರ್​ನಲ್ಲಿ ತುಂಬಿಕೊಳ್ಳಲು ಮುಗಿಬಿದ್ದ ಜನ
ರಾಜೀನಾಮೆ ಬಗ್ಗೆ ಕಡ್ಡಿ ಮುರಿದಂತೆ ಮಾತನಾಡಿದ ಸಿದ್ದರಾಮಯ್ಯ
ರಾಜೀನಾಮೆ ಬಗ್ಗೆ ಕಡ್ಡಿ ಮುರಿದಂತೆ ಮಾತನಾಡಿದ ಸಿದ್ದರಾಮಯ್ಯ
ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್ ಸ್ಥಾವರ ಲೋಕಾರ್ಪಣೆ, ನೌಕರರಿಗೆ ಬೋನಸ್
ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್ ಸ್ಥಾವರ ಲೋಕಾರ್ಪಣೆ, ನೌಕರರಿಗೆ ಬೋನಸ್
ನಾನಿನ್ನೂ ಮಾತು ನಿಲ್ಲಿಸಿಲ್ಲ..ಸಡನ್ ಸಿಟ್ಟಾದ ಸಿದ್ರಾಮಯ್ಯ ನೋಡಿ DCM ಶಾಕ್​
ನಾನಿನ್ನೂ ಮಾತು ನಿಲ್ಲಿಸಿಲ್ಲ..ಸಡನ್ ಸಿಟ್ಟಾದ ಸಿದ್ರಾಮಯ್ಯ ನೋಡಿ DCM ಶಾಕ್​
ಜಾಮೀನಿಗೆ ಹೈಕೋರ್ಟ್​ನಲ್ಲಿ ದರ್ಶನ್ ಅರ್ಜಿ ಹಾಕೋದು ಯಾವಾಗ? ವಿವರಿಸಿದ ಲಾಯರ್
ಜಾಮೀನಿಗೆ ಹೈಕೋರ್ಟ್​ನಲ್ಲಿ ದರ್ಶನ್ ಅರ್ಜಿ ಹಾಕೋದು ಯಾವಾಗ? ವಿವರಿಸಿದ ಲಾಯರ್