GM Siddeshwara: ಜಿಎಂ ಸಿದ್ದೇಶ್ವರ್​ಗೆ ಬೆತ್ತಲೆ ವಿಡಿಯೋ ಕಾಲ್ ಮಾಡಿ ಬ್ಲ್ಯಾಕ್​ಮೇಲ್; ದೂರು ದಾಖಲು

| Updated By: Ganapathi Sharma

Updated on: Jul 26, 2023 | 7:29 PM

ಸಂಸದರು ಕರ್ಮಷಿಯಲ್ ಸ್ಟ್ರೀಟ್ ಠಾಣಾ ವ್ಯಾಪ್ತಿಯಲ್ಲಿದ್ದ ಸಂದರ್ಭದಲ್ಲಿ ವಿಡಿಯೋ ಕಾಲ್ ಬಂದಿತ್ತು. ಹೀಗಾಗಿ ಕರ್ಮಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

GM Siddeshwara: ಜಿಎಂ ಸಿದ್ದೇಶ್ವರ್​ಗೆ ಬೆತ್ತಲೆ ವಿಡಿಯೋ ಕಾಲ್ ಮಾಡಿ ಬ್ಲ್ಯಾಕ್​ಮೇಲ್; ದೂರು ದಾಖಲು
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ದಾವಣಗೆರೆಯ ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ್​ಗೆ (GM Siddeshwara) ಅಪರಿಚಿತ ಸಂಖ್ಯೆಯಿಂದ ಮಹಿಳೆಯೊಬ್ಬರು ನಗ್ನವಾಗಿ ವಿಡಿಯೋ ಕಾಲ್ ಮಾಡಿ ಫೋಟೋ ತೆಗೆದು ಬ್ಲ್ಯಾಕ್​ಮೇಲ್ (Blackmail) ಮಾಡಿರುವ ಘಟನೆ ಇತ್ತೀಚೆಗೆ ನಡೆದಿದೆ. ಸದ್ಯ ಈ ವಿಚಾರವಾಗಿ ಬೆಂಗಳೂರಿನ ಕಮರ್ಷಿಯಲ್​ಸ್ಟ್ರೀಟ್ ಪೊಲೀಸ್​ ಠಾಣೆಗೆ ಸಂಸದರು ದೂರು ನೀಡಿದ್ದಾರೆ. ಅಪರಿಚಿತ ಸಂಖ್ಯೆಯಿಂದ ಬಂದ ಮೆಸೇಜ್​ಗೆ ಆರಂಭದಲ್ಲಿ ಸಂಸದರು ಉತ್ತರ ನೀಡಿರಲಿಲ್ಲ. ನಂತರ ವಿಡಿಯೋ ಹಾಗೂ ಆಡಿಯೋ ಕರೆ ಮಾಡಲಾಗಿದ್ದು, ಬ್ಲ್ಯಾಕ್​ಮೇಲ್ ಮಾಡಲಾಗಿದೆ.

ಜುಲೈ 20ರ ರಾತ್ರಿ 10.16ಕ್ಕೆ ಮೊದಲ ಬಾರಿಗೆ ಅಪರಿಚಿತ ಸಂಖ್ಯೆಯಿಂದ ಸಂಸದರ ಮೊಬೈಲ್​ಗೆ ‘Hi….How Are You.?’ ಎಂದು ಮೆಸೇಜ್​ ಬಂದಿದೆ. ಅಪರಿಚಿತರ ಮೆಸೇಜ್​ಗೆ ಸಿದ್ದೇಶ್ವರ್ ಪ್ರತಿಕ್ರಿಯೆ ನೀಡಿರಲಿಲ್ಲ. ಅದಾದ ನಂತರ 10.22ಕ್ಕೆ ದಿಢೀರ್ ಅಂತ ವಿಡಿಯೋ ಕಾಲ್ ಬಂದಿದೆ. ಯಾರು? ಏನು ಎಂದು ಪ್ರಶ್ನಿಸುತ್ತಿದ್ದಂತೆಯೇ ಹಿಂದಿಯಲ್ಲಿ ಮಾತನಾಡಿದ್ದು, ಬಳಿಕ ಮತ್ತೆ ರಾತ್ರಿ 10.24ಕ್ಕೆ ಆಡಿಯೋ ಕಾಲ್ ಮಾಡಿ ಮತ್ತದೇ ರೀತಿ ಹಿಂದಿಯಲ್ಲಿ ಮಾತನಾಡಿದ್ದಾರೆ. ಕರೆ ಕಟ್ ಮಾಡಿದ್ದರೂ ಮತ್ತೆ ಮತ್ತೆ ಕಾಲ್ ಮಾಡಿದ್ದ ಅಪರಿಚಿತ ಮಹಿಳೆ, ರಾತ್ರಿ 10.27ಕ್ಕೆ ವಾಟ್ಸಪ್ ವಿಡಿಯೋ ಕಾಲ್ ಮಾಡಿ ಖಾಸಗಿ ಅಂಗ ಪ್ರದರ್ಶನ ಮಾಡಿದ್ದಾಳೆ ಎಂದು ಸಂಸದರು ಆರೋಪಿಸಿದ್ದಾರೆ.

ಈ ಘಟನೆ ನಡೆದ ತುಸು ಹೊತ್ತಿನ ಬಳಿಕ ಮತ್ತೆ ಕರೆ ಮಾಡಿ ವಿಡಿಯೋ ರೆಕಾರ್ಡ್ ಅನ್ನು ಅಪ್ಲೋಡ್ ಮಾಡುವುದಾಗಿ ಬೆದರಿಕೆಯೊಡ್ಡಲಾಗಿತ್ತು.

ಇದನ್ನೂ ಓದಿ: ಯುವತಿಯಿಂದ ಬಂತು ವಾಟ್ಸ್​​ಅಪ್​ ವಿಡಿಯೋ! ಟೆಂಪ್ಟ್​​ ಆದ ಮುದುಕ ಅವಾಂತರ ಮಾಡಿಕೊಂಡ! ಸೈಬರಾಬಾದ್​​ ಪೊಲೀಸರು ನೀಡಿದ ಅಭಯ ಏನು?

ಸಂಸದರು ಕರ್ಮಷಿಯಲ್ ಸ್ಟ್ರೀಟ್ ಠಾಣಾ ವ್ಯಾಪ್ತಿಯಲ್ಲಿದ್ದ ಸಂದರ್ಭದಲ್ಲಿ ವಿಡಿಯೋ ಕಾಲ್ ಬಂದಿತ್ತು. ಹೀಗಾಗಿ ಕರ್ಮಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು  ಇಲ್ಲಿ ಕ್ಲಿಕ್ ಮಾಡಿ

Published On - 7:28 pm, Wed, 26 July 23