ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮೂಟೆಕಟ್ಟಿ ಕಾಲುವೆಗೆ ಎಸೆದ ಕೊಲೆಗಾರ, ರಾಜ ಕಾಲುವೆಯಲ್ಲಿ ಚೀಲದೊಳಗೆ ಶವ ಪತ್ತೆ

ಬೆಂಗಳೂರಿನಲ್ಲಿ ಭಯಾನಕ ಘಟನೆಯೊಂದು ಪತ್ತೆಯಾಗಿದೆ. ಕೊಲೆಗಾರ ವ್ಯಕ್ತಿಯನ್ನು ಕೊಂದು ಹಗ್ಗದಲ್ಲಿ ಕಟ್ಟಿ ದೇಹವನ್ನು ರೋಲ್ ಮಾಡಿ ಬಳಿಕ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಮೂಟೆ ಕಟ್ಟಿ ರಾಜ ಕಾಲುವೆಯಲ್ಲಿ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ.

ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಮೂಟೆಕಟ್ಟಿ ಕಾಲುವೆಗೆ ಎಸೆದ ಕೊಲೆಗಾರ, ರಾಜ ಕಾಲುವೆಯಲ್ಲಿ ಚೀಲದೊಳಗೆ ಶವ ಪತ್ತೆ
ಆರ್ಆರ್ ನಗರ ರಾಜ ಕಾಲುವೆಯಲ್ಲಿ ಚೀಲದೊಳಗೆ ಶವ ಪತ್ತೆಯಾಗಿದ್ದು ಜನರಲ್ಲಿ ಆತಂಕ ಹುಟ್ಟಿಸಿದೆ
Edited By:

Updated on: Nov 02, 2021 | 10:21 AM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಆರ್ಆರ್ ನಗರ ರಾಜ ಕಾಲುವೆಯಲ್ಲಿ ಚೀಲದೊಳಗೆ ಶವ ಪತ್ತೆಯಾಗಿದ್ದು ಜನರಲ್ಲಿ ಆತಂಕ ಹುಟ್ಟಿಸಿದೆ. ಕಿಡಿಗೇಡಿಗಳು ಪ್ಲಾಸ್ಟಿಕ್ ಚೀಲದಲ್ಲಿ ಶವ ಕಟ್ಟಿ ರಾಜ ಕಾಲುವೆಯಲ್ಲಿ ಬಿಸಾಕಿ ಹೋಗಿದ್ದಾರೆ. ಸದ್ಯ ಸ್ಥಳಕ್ಕೆ ರಾಜ ರಾಜೇಶ್ವರಿ ನಗರ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಭಯಾನಕ ಘಟನೆಯೊಂದು ಪತ್ತೆಯಾಗಿದೆ. ಕೊಲೆಗಾರ ವ್ಯಕ್ತಿಯನ್ನು ಕೊಂದು ಹಗ್ಗದಲ್ಲಿ ಕಟ್ಟಿ ದೇಹವನ್ನು ರೋಲ್ ಮಾಡಿ ಬಳಿಕ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಮೂಟೆ ಕಟ್ಟಿ ರಾಜ ಕಾಲುವೆಯಲ್ಲಿ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಕೊಲೆಯಾಗಿರುವುದು ಓರ್ವ ವ್ಯಕ್ತಿ ಎಂಬುದು ಪತ್ತೆಯಾಗಿದ್ದು ಕೊಲೆಯಾದ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಶ್ವಾನದಳ ಮತ್ತು ಎಫ್ಎಸ್ ಅಧಿಕಾರಿಗಳಿಗೆ ರಾಜರಾಜೇಶ್ವರಿ ನಗರ ಪೊಲೀಸರು ಮಾಹಿತಿ ನೀಡಿದ್ದಾರೆ. ಪರಿಶೀಲನೆ ಬಳಿಕ ಮತ್ತಷ್ಟು ಮಾಹಿತಿ ಹೊರ ಬೀಳಲಿದೆ.

ಇದನ್ನೂ ಓದಿ: Crime: ಬೀರೂರಿನಲ್ಲಿ ತಂದೆಯಿಂದ ಮಗಳ ಕೊಲೆ, ಶ್ರೀನಿವಾಸಪುರದಲ್ಲಿ ಅಪಘಾತ, ಚಡಚಣದಲ್ಲಿ ಕಬ್ಬಿನಗದ್ದೆಗೆ ಬೆಂಕಿ