ಬೆಂಗಳೂರು: ಗೃಹ ಬಳಕೆ ವಸ್ತುಗಳು ಒಂದೇ ಸೂರಿನ ಅಡಿ ಗ್ರಾಹಕರಿಗೆ ನೀಡುವ ಬಹುರಾಷ್ಟ್ರೀಯ ಕಂಪನಿ ಐಕಿಯ (IKEA) ಇತ್ತೀಚಿಗೆ ನಾಗಸಂದ್ರ (Nagsandra) ಬಳಿ ಪ್ರಾರಂಭವಾಗಿದೆ. ನೆದರ್ಲ್ಯಾಂಡ್ಸ್ ಮೂಲದ ಸ್ವೀಡಿಷ್ನ ಐಕಿಯ ಮಳಿಗೆಯಲ್ಲಿ ಪೀಠೋಪಕರಣಗಳು, ಅಡುಗೆ ಉಪಕರಣಗಳು, ಅಲಂಕಾರ, ಗೃಹ ಪರಿಕರಗಳು ಮತ್ತು ಇತರ ವಸ್ತುಗಳು ಸಿಗುವ ಮೂಲಕ ಗ್ರಾಹಕ ಉತ್ತಮ ಸೇವೆ ನೀಡುತ್ತಿದೆ. ಆದರೆ ಇದೊಂದು ಪ್ರಕರಣದಲ್ಲಿ ಓರ್ವ ಮಹಿಳಾ ಗ್ರಾಹಕರಿಗೆ ಕೆಟ್ಟ ಅನುಭವ ನೀಡಿದೆ. ಹೌದು ಮಹಿಳೆಯೊಬ್ಬರು ಫುಡ್ ಕೋರ್ಟ್‌ನಲ್ಲಿ (Food Court) ಉಪಹಾರ ಸೇವಿಸುತ್ತಿದ್ದ ವೇಳೆ ಟೇಬಲ್ ಮೇಲೆ ಸತ್ತ ಇಲಿ ಬಿದ್ದಿದೆ.
ಈ ಕುರಿತ ಭಾವಚಿತ್ರವನ್ನುಮಾಯಾ (@ಶರಣ್ಯಶೆಟ್ಟಿ) ಎಂಬುವರು “ಇದು ಅತ್ಯಂತ ವಿಲಕ್ಷಣ ಕ್ಷಣ” ಎಂದು ಟ್ವೀಟ್ ಮಾಡಿದ್ದಾರೆ. Wtf.. ikea ನಾವು ಉಪಹಾರ ಸೇವಿಸುತ್ತಿದ್ದ ವೇಳೆ ಟೇಬಲ್ ಮೇಲೆ ಅಚಾನಕ್ ಆಗಿ ಸತ್ತ ಇಲಿ ಬಿದ್ದಿದೆ. ಇದು ಅತ್ಯಂತ ವಿಲಕ್ಷಣ ಕ್ಷಣ..! ಎಂದಿದ್ದಾರೆ.
Wtf.. guess what fell in our food table at ikea ????? I can’t even.
We were eating and this rat just dropped dead..
Most bizzare moment ever!@IKEA@IKEAIndia pic.twitter.com/R45C1BCNkc— Maya (@Sharanyashettyy) July 16, 2023
ಅಂಕಿತ್ ಜೈನ್ ಎಂಬ ನೆಟಿಜನ್ ಪ್ರತಿಕ್ರಿಯಿಸಿ ಹೆಚ್ಚುವರಿ ಖಾದ್ಯಕ್ಕೆ ಪಾವತಿಸಬೇಡಿ ಎಂದು ಐಕಿಯ ವಿರುದ್ಧ ವ್ಯಂಗ್ಯವಾಗಿ ಆಕ್ರೋಶ ಹೊರಹಾಕಿದ್ದಾರೆ.
Pay mat karna extra dish ka
— Ankit Jain (@indiantweeter) July 16, 2023
FireInTheHole ಟ್ವೀಟ್ ಮಾಡಿ ಅದು ಸತ್ತಿಲ್ಲ, ಅತಿಯಾದ ಕೆಲಸದಿಂದ ದಣಿದಿದೆ ಎಂದು ಕುಹಕವಾಡಿದ್ದಾರೆ.
not dead, just exhausted after a hectic day of work.?
— FireInTheHole (@DevBLRwale) July 17, 2023
ಇದನ್ನೂ ಓದಿ: IKEA ಸ್ಟೋರ್ನಲ್ಲಿ ಸರತಿ ಸಾಲುಗಳು: ಜನಸಂದಣಿಯ ತಮಾಷೆಯ ವಿಡಿಯೋಗಳು ಇಲ್ಲಿವೆ ನೋಡಿ
Hej! We apologize for the unpleasant incident at IKEA Nagasandra. We’re currently investigating the situation & ensuring to take all precautionary efforts. Food safety and hygiene is our top priority, and we want our customers to always have the best shopping experience at IKEA.
— IKEAIndia (@IKEAIndia) July 17, 2023
ಟ್ವೀಟ್ ವೈರಲ್ ಆದ ನಂತರ, IKEA ಇಂಡಿಯಾ ಕ್ಷಮೆಯಾಚಿಸಿದೆ. ನಾಗಸಂದ್ರದಲ್ಲಿರುವ ಐಕಿಯದಲ್ಲಿ ನಡೆದ ಅಹಿತಕರ ಘಟನೆಗೆ ನಾವು ಕ್ಷಮೆಯಾಚಿಸುತ್ತೇವೆ. ನಾವು ಪ್ರಸ್ತುತ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಎಲ್ಲಾ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಆಹಾರ ಸುರಕ್ಷತೆ ಮತ್ತು ನೈರ್ಮಲ್ಯವು ನಮ್ಮ ಪ್ರಮುಖ ಆದ್ಯತೆಯಾಗಿದೆ ಮತ್ತು ನಮ್ಮ ಗ್ರಾಹಕರು ಯಾವಾಗಲೂ IKEA ನಲ್ಲಿ ಅತ್ಯುತ್ತಮ ಶಾಪಿಂಗ್ ಅನುಭವವನ್ನು ಹೊಂದಬೇಕೆಂದು ಎಂದು ನಾವು ಬಯಸುತ್ತೇವೆ ಎಂದು ಸಂಸ್ಥೆ ಟ್ವೀಟ್ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ