ಆಂಧ್ರದಲ್ಲಿ ಬೆಂಗಳೂರಿನ ಇಬ್ಬರು ಪೊಲೀಸರು ಸಾವು ಪ್ರಕರಣ; ಮೃತ ಪಿಸಿ ಅನಿಲ್ ಬ್ಯಾಚ್ ಸಿಬ್ಬಂದಿಯಿಂದ ಸಹಾಯಹಸ್ತ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 25, 2022 | 12:56 PM

ಈ ರೀತಿಯ ಸಾವು ದುರದೃಷ್ಟಕರ ಸಂಗತಿ. ನಾವು ಎಷ್ಟೇ ಸಹಾಯ ಮಾಡಿದರೂ ಕೋಟಿ ರೂಪಾಯಿ ಕೊಟ್ಟರು ಒಬ್ಬ ತಂದೆಗೆ ಅವರ ಮಗನನ್ನು ಮರಳಿ ಕೊಡಲಾಗದು ಎಂದು ಅಳಲು ತೊಡಿಕೊಂಡರು.

ಆಂಧ್ರದಲ್ಲಿ ಬೆಂಗಳೂರಿನ ಇಬ್ಬರು ಪೊಲೀಸರು ಸಾವು ಪ್ರಕರಣ; ಮೃತ ಪಿಸಿ ಅನಿಲ್ ಬ್ಯಾಚ್ ಸಿಬ್ಬಂದಿಯಿಂದ ಸಹಾಯಹಸ್ತ
ಪಿಸಿ ಅನಿಲ್ ಮುಲಿಕ್
Follow us on

ಬೆಂಗಳೂರು: ಚಿತ್ತೂರು ಬಳಿ ಶಿವಾಜಿನಗರ ಪೊಲೀಸರ ಅಪಘಾತ (accident) ಪ್ರಕರಣ ಹಿನ್ನೆಲೆ ಮೃತರಾದ ಪಿಸಿ ಅನಿಲ್ ಮುಲಿಕ್ ಕುಟುಂಬಕ್ಕೆ ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿಗಳಿಂದ ಕೈಲಾದ ಧನ ಸಹಾಯ ಮಾಡಲಾಗಿದೆ. 100, 200, 500 ರೂಪಾಯಿವರೆಗೆ 512 ಮಂದಿಯಿಂದ ಪೋನ್ ಪೇ ಮೂಲಕ ವೈಯಕ್ತಿಕವಾಗಿ ಹಣ ವರ್ಗಾವಣೆ ಮಾಡಲಾಗಿದೆ. ಆದರೆ ಈ ರೀತಿಯ ಸಾವು ದುರದೃಷ್ಟಕರ ಸಂಗತಿ. ನಮಗೆ ಅತ್ಯಂತ ವಿಷಾಧನೀಯ, ನೋವಿನ ವಿಚಾರ. ನಾವು ಎಷ್ಟೇ ಸಹಾಯ ಮಾಡಿದರೂ ಕೋಟಿ ರೂಪಾಯಿ ಕೊಟ್ಟರು ಒಬ್ಬ ತಂದೆಗೆ ಅವರ ಮಗನನ್ನು ಮರಳಿ ಕೊಡಲಾಗದು. ಇದು ಕೇವಲ‌ ಕಣ್ಣೀರು ಒರೆಸುವ ಪ್ರಯತ್ನವಷ್ಟೇ ಎನ್ನುವುದು ಕಾನ್ಸ್ ಟೇಬಲ್ ಅನಿಲ್ ಸಹದ್ಯೋಗಿಗಳ ಅಳಲಾಗಿದೆ. ಇನ್ನೂ ಅಪಘಾತದಲ್ಲಿ ಗಾಯಗೊಂಡಿದ್ದ PSI ದೀಕ್ಷಿತ್​​​​ರನ್ನ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಶಿಫ್ಟ್​ ಮಾಡಿದ್ದು, ಮತ್ತೋರ್ವ ಪಿಸಿ ಶರಣಪ್ಪ ಇಂದು ಬೆಂಗಳೂರಿಗೆ ಶಿಫ್ಟ್​ ಸಾಧ್ಯತೆ ಇದೆ.

ಇದನ್ನೂ ಓದಿ: Accident: ಆಂಧ್ರ ಪ್ರದೇಶದಲ್ಲಿ ಅಪಘಾತ; ಬೆಂಗಳೂರಿನ ಇಬ್ಬರು ಪೊಲೀಸ್ ಸಿಬ್ಬಂದಿ, ಚಾಲಕ ಸಾವು

ಘಟನೆ ಹಿನ್ನೆಲೆ:

ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಹಳ್ಳಿಯೊಂದರ ಸಮೀಪ ಭಾನುವಾರ ನಸುಕಿನ 3 ಗಂಟೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೆಂಗಳೂರು ಶಿವಾಜಿನಗರ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿ ಹಾಗೂ ಓರ್ವ ಚಾಲಕ ಮೃತಪಟ್ಟಿದ್ದಾರೆ. ಎಸ್​ಐ ಸೇರಿದಂತೆ ಹಲವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಪ್ರಕರಣವೊಂದರ ತನಿಖೆಗಾಗಿ ಈ ತಂಡವು ತೆರಳುತ್ತಿದ್ದಾಗ ಚಿತ್ತೂರು ಜಿಲ್ಲೆ ಪೂತಲಪಟ್ಟು ತಾಲ್ಲೂಕಿನ ಹಳ್ಳಿಯೊಂದರಲ್ಲಿ ರಸ್ತೆ ವಿಭಜಕಕ್ಕೆ ಇನ್ನೋವಾ ಕಾರು ಡಿಕ್ಕಿಯಾಯಿತು.

ಇದನ್ನೂ ಓದಿ; Bangalore News: ನಾಳೆಯಿಂದ ಬೆಂಗಳೂರು ಮತ್ತು ಮಂಗಳೂರು ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭ

ಅಪಘಾತದಲ್ಲಿ ಮೃತಪಟ್ಟ ಪಿಎಸ್​ಐ ಅವಿನಾಶ್ (29) ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ರೋಲವಾಡಿ ಗ್ರಾಮದವರು. ಕಾನ್ಸ್​ಟೆಬಲ್ ಅನಿಲ್ ಮುಲಿಕ್ (26) ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಚಿಕ್ಕಳಕೆರೆ ಗ್ರಾಮದವರು. ಖಾಸಗಿ ಕ್ಯಾಬ್ ಚಾಲಕ ಜೋಸೆಫ್ ಸಹ ಮೃತಪಟ್ಟಿದ್ದಾರೆ. ಪ್ರೊಬೆಷನರಿ ಪಿಎಸ್​ಐ ದೀಕ್ಷಿತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಮತ್ತೋರ್ವ ಗಾಯಾಳು ಕಾನ್ಸ್​ಟೆಬಲ್ ಶರಣಬಸವ ಅವರನ್ನು ವೆಲ್ಲೂರಿನ ಸಿಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪಘಾತದ ಮಾಹಿತಿ ಲಭ್ಯವಾದ ತಕ್ಷಣ ಪುಲಕೇಶಿನಗರ ಎಸಿಪಿ ಅಬ್ದುಲ್ಲಾ ಮತ್ತು ಶಿವಾಜಿನಗರ ಪೊಲೀಸರು ಸ್ಥಳಕ್ಕೆ ಧಾವಿಸುತ್ತಿದ್ದಾರೆ.