Bangalore Air Quality: ಭಾರತದ ಅತ್ಯಂತ ಕಲುಷಿತ ನಗರಗಳಲ್ಲಿ ಬೆಂಗಳೂರು ನಗರಕ್ಕೆ 6ನೇ ಸ್ಥಾನ
Bangalore News: ವಾಯು ಗುಣಮಟ್ಟ ಸೂಚ್ಯಂಕದಲ್ಲಿ ಬೆಂಗಳೂರು ನಗರವು ಸೋಮವಾರ ಬೆಳಗ್ಗೆ ಅತ್ಯಂತ ಕೆಟ್ಟ ವಾಯು ಗುಣಮಟ್ಟ ಸೂಚ್ಯಂಕ ದಾಖಲಾಗುವ ಮೂಲಕ ಭಾರತದ ಅತ್ಯಂತ ಕಲುಷಿತ ನಗರಗಳಲ್ಲಿ 6 ನೇ ಸ್ಥಾನವನ್ನು ಪಡೆದುಕೊಂಡಿದೆ. ನಗರವು ಬೆಳಿಗ್ಗೆ 7.30 ಗಂಟೆಗೆ 101ರ ವಾಯು ಗುಣಮಟ್ಟ ಸೂಚ್ಯಂಕವನ್ನು ದಾಖಲಿಸಿದೆ.
ಬೆಂಗಳೂರು: ವಾಯು ಗುಣಮಟ್ಟ ಸೂಚ್ಯಂಕ (AQI)ದಲ್ಲಿ ಬೆಂಗಳೂರು ನಗರವು ಸೋಮವಾರ ಬೆಳಗ್ಗೆ ಅತ್ಯಂತ ಕೆಟ್ಟ ವಾಯು ಗುಣಮಟ್ಟ ಸೂಚ್ಯಂಕ ದಾಖಲಾಗುವ ಮೂಲಕ ಭಾರತದ ಅತ್ಯಂತ ಕಲುಷಿತ ನಗರಗಳಲ್ಲಿ 6 ನೇ ಸ್ಥಾನವನ್ನು ಪಡೆದುಕೊಂಡಿದೆ. ನಗರವು ಬೆಳಿಗ್ಗೆ 7.30 ಗಂಟೆಗೆ 101ರ ವಾಯು ಗುಣಮಟ್ಟ ಸೂಚ್ಯಂಕವನ್ನು ದಾಖಲಿಸಿದೆ. ಅದಾಗ್ಯೂ ಮಧ್ಯಾಹ್ನದ ಹೊತ್ತಿಗೆ ಗುಣಮಟ್ಟವು 67ರೊಂದಿಗೆ ತೃಪ್ತಿಕರ ಮಟ್ಟಕ್ಕೆ ಇಳಿಯಿತು. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿಅಂಶಗಳ ಪ್ರಕಾರ, ಪಂಜಾಬ್‌ನ ರೂಪನಗರವು 141 ರ ವಾಯು ಗುಣಮುಟ್ಟ ದಾಖಲಾಗುವುದರೊಂದಿಗೆ ಅಗ್ರಸ್ಥಾನದಲ್ಲಿದೆ.
ಪಂಜಾಬ್‌ನ ರೂಪನಗರವು 141 ರ ವಾಯು ಗುಣಮುಟ್ಟದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಪಾಟ್ನಾ 113ರ ಗುಣಮಟ್ಟ ಸೂಚ್ಯಂಕದೊಂದಿಗೆ 2ನೇ ಸ್ಥಾನ, 114 ರ ಗುಣಮಟ್ಟ ಸೂಚ್ಯಂಕದೊಂದಿಗೆ ಧರುಹೆರಾ 3ನೇ ಸ್ಥಾನ, 106 ಗುಣಮಟ್ಟ ಸೂಚ್ಯಂಕದೊಂದಿಗೆ ದೆಹಲಿ 4ನೇ ಸ್ಥಾನ, 104 ರ ಸೂಚ್ಯಂಕದೊಂದಿಗೆ ಚಂದ್ರಾಪುರ್ ನಗರವು 5ನೇ ಸ್ಥಾನ ಪಡೆದಿದೆ. ಇದರ ನಂತರ 101ರ ವಾಯು ಗುಣಮಟ್ಟ ಸೂಚ್ಯಂಕದೊಂದಿಗೆ ಬೆಂಗಳೂರು ನಗರ 6ನೇ ಸ್ಥಾನ ಪಡೆದುಕೊಂಡಿದೆ.
ವಾಯು ಗುಣಮಟ್ಟ ಸೂಚ್ಯಂಕದಲ್ಲಿ 100 ಕ್ಕಿಂತ ಹೆಚ್ಚಿನ AQI ಮೌಲ್ಯವನ್ನು ಮಧ್ಯಮ ತೀವ್ರವೆಂದು ಪರಿಗಣಿಸಲಾಗುತ್ತದೆ. CPCB ಪ್ರಕಾರ, ಇಂತಹ ಕಲುಷಿತ ವಾಯು ಗುಣಮಟ್ಟವು ಜನರಲ್ಲಿ ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡಬಹುದು.
ನಗರದ ಅತ್ಯಂತ ಕಲುಷಿತ ಪ್ರದೇಶ ಬಿಟಿಎಂ ಲೇಔಟ್
ದೇಶದ ಪ್ರಮುಖ ನಗರಗಳ ಕೆಟ್ಟ ವಾಯು ಗುಣಮಟ್ಟ ಸೂಚ್ಯಂಕದಲ್ಲಿ 6ನೇ ಸ್ಥಾನದಲ್ಲಿರುವ ಬೆಂಗಳೂರು ನಗರದ ಬಿಟಿಎಂ ಲೇಔಟ್ ನಗರದ ಅತ್ಯಂತ ಕಲುಷಿತ ಪ್ರದೇಶವೆಂಬ ಕುಖ್ಯಾತಿಗಳಿಸಿದೆ. 101ರ ಕೆಟ್ಟ ವಾಯು ಗುಣಮಟ್ಟ ಸೂಚ್ಯಂಕವನ್ನು ದಾಖಲಿಸಿತು. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವು ಇತ್ತೀಚಿನ ದಿನಗಳಲ್ಲಿ ನಾಗರಿಕರನ್ನು ಚಿಂತೆಗೆ ದೂಡಿದೆ. ಗ್ರೀನ್ ಇಂಡಿಯಾ ಎಂಬ ಸಂಸ್ಥೆಯ ವರದಿ ಪ್ರಕಾರ, ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳಿಗಿಂತ ಹೆಚ್ಚಿನ ವಾಯುಮಾಲಿನ್ಯವನ್ನು ಹೊಂದಿರುವ 10 ದಕ್ಷಿಣ ಭಾರತದ ನಗರಗಳಲ್ಲಿ ಬೆಂಗಳೂರು ಸ್ಥಾನ ಪಡೆದಿದೆ ಎಂದು ಹೇಳಿದೆ.
ಬೆಂಗಳೂರು ನಗರದಾದ್ಯಂತ ಮಾಲಿನ್ಯ ಮಟ್ಟವನ್ನು ಪತ್ತೆಹಚ್ಚಲು ಸಿಪಿಸಿಬಿ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು 10 ಮೇಲ್ವಿಚಾರಣಾ ಕೇಂದ್ರಗಳನ್ನು ಸ್ಥಾಪಿಸಿದೆ. ಆ ಮೂಲಕ ಬೆಂಗಳೂರಿನ ಬಿಟಿಎಂ ಲೇಔಟ್, ಬಾಪೂಜಿ ನಗರ, ಹೊಂಬೇಗೌಡ ನಗರ, ಜಯನಗರ 5ನೇ ಬ್ಲಾಕ್, ಸಿಟಿ ರೈಲು ನಿಲ್ದಾಣ, ಸಾಣೆಗುರುವನಹಳ್ಳಿ, ಹೆಬ್ಬಾಳ, ಸಿಲ್ಕ್ ಬೋರ್ಡ್, ಪೀಣ್ಯ ಮತ್ತು ಬಿಡಬ್ಲ್ಯುಎಸ್‌ಎಸ್‌ಬಿ ಕಾಡುಬೀಸನಹಳ್ಳಿಯಲ್ಲಿ ಮಾಲಿನ್ಯದ ಬಗ್ಗೆ ನಿಗಾ ಇಡಲಾಗಿದೆ.
Published On - 3:55 pm, Mon, 25 July 22