ಬುರ್ಖಾಧಾರಿ ಯುವಕನಿಂದ ಆಲಮಟ್ಟಿ ಡ್ಯಾಂ ಆವರಣದಲ್ಲಿ ಆತಂಕ: ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಬಯಲಾಯ್ತು ಕಣ್ಣೀರ ಕಥೆ

ಪ್ರವೇಶ ದ್ವಾರದ ಬಳಿ ತಪಾಸಣೆ ಕರ್ತವ್ಯ ಮಾಡುತ್ತಿದ್ದ ಆಲಮಟ್ಟಿ ಪೊಲೀಸರು ಬುರ್ಖಾ ಧರಿಸಿದ್ದ ವ್ಯಕ್ತಿಯ ಧ್ವನಿ ಕೇಳಿ, ಇದು ಮಹಿಳೆಯಲ್ಲಾ, ಪುರುಷ ಎಂದು ಪೊಲೀಸರಿಗೆ ಸಂಶಯ ವ್ಯಕ್ತವಾಗಿತ್ತು.

ಬುರ್ಖಾಧಾರಿ ಯುವಕನಿಂದ ಆಲಮಟ್ಟಿ ಡ್ಯಾಂ ಆವರಣದಲ್ಲಿ ಆತಂಕ: ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಬಯಲಾಯ್ತು ಕಣ್ಣೀರ ಕಥೆ
ಕಿಶೋರ್ ಮಲ್ಲಿಕಾರ್ಜುನ ಸ್ವಾಮಿ
TV9kannada Web Team

| Edited By: Ayesha Banu

Jul 25, 2022 | 4:26 PM

ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಡ್ಯಾಂ(Almatti Dam) ಆವರಣದಲ್ಲಿ ಬುರ್ಖಾಧಾರಿಯೊಬ್ಬರು ಆತಂಕ ಮೂಡಿಸಿದ್ದಾರೆ. ಬೆಳಿಗ್ಗೆ ನಸುಕಿನ ಜಾವದಲ್ಲೇ ಡ್ಯಾಂ ಪ್ರವೇಶ ದ್ವಾರದಲ್ಲಿ ಬುರ್ಖಾ(Burkha) ಧರಿಸಿ ಡ್ಯಾಂ ಆವರಣಕ್ಕೆ ಹೋಗುತ್ತಿದ್ದ ಯುವಕನನ್ನು ತಡೆದ ಪೊಲೀಸರು ಸಂಶಯದಲ್ಲೇ ಇಷ್ಟು ಬೇಗ ಡ್ಯಾಂ ಒಳಗೆ ಪ್ರವೇಶ ನೀಡಲ್ಲ ಎಂದು ತಿಳಿಸಿದ್ದಾರೆ. ಈ ವೇಳೆ ಬುರ್ಖಾಧಾರಿ ಮಾತನಾಡಿದ್ದು, ಯುವಕನ ಧ್ವನಿ ಕೇಳಿ ಪೊಲೀಸರು ಬೆಚ್ಚಿಬಿದ್ದಿದ್ದಾರೆ.

ಪ್ರವೇಶ ದ್ವಾರದ ಬಳಿ ತಪಾಸಣೆ ಕರ್ತವ್ಯ ಮಾಡುತ್ತಿದ್ದ ಆಲಮಟ್ಟಿ ಪೊಲೀಸರು ಬುರ್ಖಾ ಧರಿಸಿದ್ದ ವ್ಯಕ್ತಿಯ ಧ್ವನಿ ಕೇಳಿ, ಇದು ಮಹಿಳೆಯಲ್ಲಾ, ಪುರುಷ ಎಂದು ಪೊಲೀಸರಿಗೆ ಸಂಶಯ ವ್ಯಕ್ತವಾಗಿತ್ತು. ಹೀಗಾಗಿ ಬುರ್ಖಾಧಾರಿ ಮೇಲೆ ನಿಗಾ ವಹಿಸಿದ್ದ ಖಾಕಿ ಪಡೆ ಕೆಲ ಸಮಯದ ಬಳಿಕ ಬುರ್ಖಾಧಾರಿ ಮುಳ್ಳು ಕಂಟಿಗಳಾಚೆ ಹೋಗಿ ಬುರ್ಖಾ ತೆಗೆದು ಆಚೆ ಬಂದಿದ್ದನ್ನು ಗಮನಿಸಿದ್ದಾರೆ. ಆಗಲೇ ಬುರ್ಖಾಧಾರಿ ಮಹಿಳೆಯಲ್ಲಾ ಪುರುಷ ಎಂಬುವುದು ಪೊಲೀಸರಿಗೆ ಬಹಿರಂಗವಾಗಿತ್ತು.

ಬುರ್ಖಾ ಧರಿಸಿ ಬಂದಿದ್ದು ಯುವಕ ಎಂಬುದನ್ನು ಕಂಡು ಹಿಡಿದ ಪೊಲೀಸರು ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ, ತಾನು ಹಾಸನ ಜಿಲ್ಲೆಯ ಸಕಲೇಶಪುರ ನಿವಾಸಿ ಎಂದು ಯುವಕ ಹೇಳಿಕೊಂಡಿದ್ದಾನೆ. ಕಿಶೋರ್ ಮಲ್ಲಿಕಾರ್ಜುನ ಸ್ವಾಮಿ ಎಂಬ ಹೆಸರಿನ ಯುವಕ ನನ್ನಲ್ಲಿ ಹೆಣ್ತನ ಬೆಳೆಯುತ್ತಿದೆ, ಹೀಗಾಗಿ ತೃತೀಯ ಲಿಂಗಿಯಾಗಿ ಪರಿವರ್ತನೆ ಹೊಂದುತ್ತಿದ್ದೇನೆ. ನನಗೆ ಮದುವೆ ಬೇಡ ಎಂದರೂ ಮನೆಯಲ್ಲಿ ಒತ್ತಡ ಹೇರುತ್ತಿದ್ದಾರೆ. ಆದ್ದರಿಂದ ಮನೆ ಬಿಟ್ಟು ಬಂದಿದ್ದಾಗಿ ವಿಚಾರಣೆಯಲ್ಲಿ ಹೇಳಿಕೊಂಡಿದ್ದಾನೆ. ಸದ್ಯ ಪೊಲೀಸರ ವಿಚಾರಣೆ ಮುಂದುವರೆದಿದ್ದು ಆಲಮಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಚಿವ ಉಮೇಶ ಕತ್ತಿ ನೇತೃತ್ವದಲ್ಲಿ ಕೆಡಿಪಿ ಸಭೆ

ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ನೇತೃತ್ವದಲ್ಲಿ ಜಿ.ಪಂ. ಸಭಾಭವನದಲ್ಲಿ 2022-23ನೇ ಸಾಲಿನ 1ನೇ ತ್ರೈಮಾಸಿಕ ಕೆಡಿಪಿ ಸಭೆ ನಡೆಯುತ್ತಿದ್ದು ಸಭೆಗೂ ಮುನ್ನ ಸಚಿವರಿಂದ ವಿಕಲಚೇತನರಿಗೆ ಇಂಧನ ಚಾಲಿತ ತ್ರಿಚಕ್ರ 10 ವಾಹನಗಳ ವಿತರಣೆ ಮಾಡಲಾಗಿದೆ. ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಟ್ರೈಸಿಕಲ್ ನೀಡಲಾಗಿದೆ. ಇದೇ ವೇಳೆ ಸಚಿವ ಕತ್ತಿ ಹರ್ ಘರ್ ತಿರಂಗಾ ಪ್ರಚಾರ ಸಾಮಗ್ರಿ ಬಿಡುಗಡೆ ಮಾಡಿದ್ದಾರೆ. ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ, ಸೋಮನಗೌಡ ಪಾಟೀಲ್ ಸಾಸನೂರ, ರಮೇಶ ಭೂಸನೂರ, ಶಿವಾನಂದ ಪಾಟೀಲ್, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್, ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸಿಇಓ ರಿ ರಾಹುಲ್ ಶಿಂಧೆ ಹಾಗೂ ಇತರೆ ಆಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada