ಬೆಂಗಳೂರಿನಲ್ಲಿ ದೆಹಲಿ ಪಾಲಿಕಾ ಬಜಾರ್ ಮಾದರಿಯಲ್ಲಿ ನಿರ್ಮಾಣಗೊಳ್ಳುತ್ತಿದೆ ಅಗ್ಗದ ಮಾರುಕಟ್ಟೆ

|

Updated on: Aug 12, 2024 | 11:45 AM

ಬೆಂಗಳೂರಿನಲ್ಲಿ ದೆಹಲಿ ಬಜಾರ್ ಮಾದರಿಯ ಅಗ್ಗದ ಮಾರುಕಟ್ಟೆ ನಿರ್ಮಾಣವಾಗಲಿದೆ. ಬೆಂಗಳೂರು ವಿಜಯನಗರದಲ್ಲಿ ಉದ್ಘಾಟನೆಗೆ ಕಾಯುತ್ತಿರುವ ನೂತನ ಅಂಡರ್‌ ಗ್ರೌಂಡ್ ಪಾಲಿಕೆ ಬಜಾರ್‌ 100 ಮೀಟರ್ ಉದ್ದ, 11 ಮೀಟರ್ ಅಗಲ ಇದ್ದು, 3 ಮೀಟರ್ ಅಗಲದ ಪಾದಚಾರಿ ಮಾರ್ಗವನ್ನು ಹೊಂದಿದೆ. ಪಾದಚಾರಿ ಮಾರ್ಗದ ಎರಡೂ ಬದಿಗೆ 75ಕ್ಕೂ ಹೆಚ್ಚು ಮಳಿಗೆಗಳಿವೆ. ಸ್ಲೈಡಿಂಗ್ ಡೋರ್‌ಗಳು, ಎಸ್ಕಲೇಟರ್‌ಗಳು ಮತ್ತು ಲಿಫ್ಟ್ ಸೌಲಭ್ಯವನ್ನು ಹೊಂದಿರುವ ಮಾರುಕಟ್ಟೆಗೆ ಎರಡು ಗೇಟ್‌ಗಳ ಮೂಲಕ ಸುಲಭವಾಗಿ ಪ್ರವೇಶಿಸಬಹುದು.

ಬೆಂಗಳೂರಿನಲ್ಲಿ ದೆಹಲಿ ಪಾಲಿಕಾ ಬಜಾರ್ ಮಾದರಿಯಲ್ಲಿ ನಿರ್ಮಾಣಗೊಳ್ಳುತ್ತಿದೆ ಅಗ್ಗದ ಮಾರುಕಟ್ಟೆ
ಪಾಲಿಕಾ ಬಜಾರ್
Follow us on

ಬೆಂಗಳೂರಿನಲ್ಲಿ ಶೀಘ್ರ ದೆಹಲಿ ಮಾದರಿಯಲ್ಲಿ ಪಾಲಿಕಾ ಬಜಾರ್  ಉದ್ಘಾಟನೆಗೆ ಸಿದ್ಧಗೊಳ್ಳಲಿದೆ . ಇದು ಅಂಡರ್​ಗ್ರೌಂಡ್ ಹವಾನಿಯಂತ್ರಿತ ಮಾರುಕಟ್ಟೆಯಾಗಿರಲಿದೆ. ಇದನ್ನು ವಿಜಯನಗರದಲ್ಲಿ ನಿರ್ಮಿಸಲಾಗುತ್ತದೆ.

ಬೆಂಗಳೂರು ಪಾಲಿಕಾ ಬಜಾರ್ ಸೌಲಭ್ಯಗಳು
ಈ ಮಾರುಕಟ್ಟೆಯು ಆಧುನಿಕ ಮತ್ತು ಆರಾಮದಾಯಕವಾಗಿದ್ದು, ದೆಹಲಿಯ ಶಾಪಿಂಗ್ ಸೆಂಟರ್‌ಗಳ ಶೈಲಿಯಲ್ಲಿದೆ, ಹವಾನಿಯಂತ್ರಣ, ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲುಗಳು, ಎಸ್ಕಲೇಟರ್‌ಗಳು ಮತ್ತು ಎಲಿವೇಟರ್ ಕೂಡ ಇರಲಿದೆ.

ನಗರೋತ್ಥಾನ ಯೋಜನೆಯಡಿ 18 ಕೋಟಿ ರೂ. ವೆಚ್ಚ ಮಾಡಿ ನಿರ್ಮಿಸಲಾಗುತ್ತಿದೆ. ದೆಹಲಿಯ ಪಾಲಿಕಾ ಬಜಾರ್​ನಲ್ಲಿ ಬಟ್ಟೆ, ಆಭರಣಗಳು, ಚಪ್ಪಲಿ, ಶೂಗಳು, ಜಾಕೆಟ್, ಬ್ಯಾಗ್, ಸೂಟ್​ಕೇಸ್, ಎಲೆಕ್ಟ್ರಿಕ್ ವಸ್ತುಗಳು ಸೇರಿದಂತೆ ಹತ್ತು ಹಲವು ಕಡಿಮೆ ದರದಲ್ಲಿ ದೊರೆಯುತ್ತದೆ.

ವಿಜಯನಗರ ಮುಖ್ಯ ರಸ್ತೆಯಲ್ಲಿ 2017ರಲ್ಲಿ ಬೀದಿಬದಿಯ ವ್ಯಾಪಾರಿಗಳಿಗಾಗಿ ಸುಮಾರು ಹತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಅಂಡರ್ ಗ್ರೌಂಡ್ ಮಾರ್ಕೆಟ್ ಕಾಮಗಾರಿ ಆರಂಭ ಮಾಡಲಾಯಿತು. ಆದರೆ ಸುಮಾರು ಏಳು ವರ್ಷಗಳಿಂದ ಕಾಮಗಾರಿ ನಡೆಯುತ್ತಲೇ ಇದೆ ಇನ್ನೂ ಪೂರ್ಣಗೊಂಡಿಲ್ಲ.

ಹೊಸದಾಗಿ ನಿರ್ಮಾಣವಾದ ಪಾಲಿಕೆ ಬಜಾರ್ ಅಥವಾ ಮಾರುಕಟ್ಟೆ, 100 ಮೀಟರ್ ಉದ್ದ ಹಾಗೂ 11 ಮೀಟರ್ ಅಗಲದ ಅಳತೆಯನ್ನು ಹೊಂದಿದೆ.

ಈ ಹೊಸ ಮಾರುಕಟ್ಟೆ ನಿರ್ಮಾಣವಾಗಿರುವ ಪ್ರದೇಶದಲ್ಲಿ ಈ ಹಿಂದೆ 150 ಕ್ಕೂ ಹೆಚ್ಚು ಮಾರಾಟಗಾರರು ತರಕಾರಿಗಳು, ಹೂವುಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಒದಗಿಸುವ ವ್ಯಾಪಾರ ವಹಿವಾಟುಗಳು ನಡೆಯುತ್ತಿದ್ದವು. ಹೊಸ ಅಂಡರ್‌ಗ್ರೌಂಡ್‌ ಮಾರುಕಟ್ಟೆಗೆ ಸ್ಥಳಾವಕಾಶ ಕಲ್ಪಿಸಲು ಹಳೆಯ ಸರ್ವೀಸ್‌ ರಸ್ತೆಯನ್ನು ಪರಿವರ್ತಿಸಲಾಗಿದೆ. 2017ರ ಡಿಸೆಂಬರ್ ನಲ್ಲಿ ಶುರುವಾದ ಯೋಜನೆ ಇದು.

ಮತ್ತಷ್ಟು ಓದಿ: ಉದ್ಘಾಟನೆಗೂ ಮುನ್ನವೇ ಸೋರುತ್ತಿದೆ ವಿಜಯನಗರ ಪಾಲಿಕೆ ಬಜಾರ್: ಖರ್ಚಾಗಿದೆ 16 ಕೋಟಿ ರೂ.

ಪಾದಚಾರಿಗಳ ಓಡಾಟಕ್ಕಾಗಿ 3 ಮೀಟರ್ ಅಗಲದ ರಸ್ತೆ ಇರಲಿದ್ದು, ಆ ರಸ್ತೆಯ ಎರಡೂ ಬದಿಗಳಲ್ಲಿ ಅಂಗಡಿಗಳು ಇರಲಿವೆ. ಪಾಲಿಕೆ ಬಜಾರ್ ಒಳಗೆ ಒಟ್ಟು 75 ಅಂಗಡಿಗಳು ಇರಲಿವೆ ಎಂದು ಹೇಳಲಾಗುತ್ತಿದೆ.

ಪಾಲಿಕೆ ಬಜಾರ್ ನಿರ್ಮಾಣವಾಗುತ್ತಿರುವುದು ಎಲ್ಲರಿಗೂ ಸಂತಸ ತಂದಿದೆ ಆದರೆ ಈ ಭಾಗದಲ್ಲಿ ತರಕಾರಿ ಹಣ್ಣು, ಹೂವು ಮಾರಾಟ ಮಾಡುತ್ತಿರುವವರಿಗೆ ಜಾಗ ಸಿಗುವುದೇ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:39 am, Mon, 12 August 24