ದೆಹಲಿಯಲ್ಲಿ ಗಣರಾಜ್ಯೋತ್ಸವ ಪರೇಡ್‍: ಕರ್ನಾಟಕ ಸ್ತಬ್ಧಚಿತ್ರಕ್ಕೆ ಅನುಮತಿ ನೀಡದ ಕೇಂದ್ರ ಸರ್ಕಾರ

| Updated By: ಆಯೇಷಾ ಬಾನು

Updated on: Jan 07, 2023 | 1:02 PM

ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ಥಬ್ದ ಚಿತ್ರ ಇರಲ್ಲ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹರ್ಷ ಅವರು ಟಿವಿ9ಗೆ ಮಾಹಿತಿ ನೀಡಿದ್ದಾರೆ.

ದೆಹಲಿಯಲ್ಲಿ ಗಣರಾಜ್ಯೋತ್ಸವ ಪರೇಡ್‍: ಕರ್ನಾಟಕ ಸ್ತಬ್ಧಚಿತ್ರಕ್ಕೆ ಅನುಮತಿ ನೀಡದ ಕೇಂದ್ರ ಸರ್ಕಾರ
2022ರ ಕರ್ನಾಟಕದ ಸ್ತಬ್ಧಚಿತ್ರ
Follow us on

ಬೆಂಗಳೂರು: ಪ್ರತಿ ವರ್ಷ ಜ.26ರಂದು ದೆಹಲಿಯ ರಾಜಪಥ್‍ನಲ್ಲಿ ನಡೆಯುವ ಗಣರಾಜ್ಯೋತ್ಸವ ದಿನಾಚರಣೆಯ ಪರೇಡ್‍ನಲ್ಲಿ(Delhi Republic Day Parade) ಕರ್ನಾಟಕದ ಸ್ತಬ್ಧಚಿತ್ರ ಪ್ರದರ್ಶನ(Karnataka Tableau) ಮಾಡಲಾಗುತ್ತಿತ್ತು. ಆದ್ರೆ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ಥಬ್ದ ಚಿತ್ರ ಇರಲ್ಲ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹರ್ಷ ಅವರು ಟಿವಿ9ಗೆ ಮಾಹಿತಿ ನೀಡಿದ್ದಾರೆ.

ಬೇರೆ ರಾಜ್ಯಗಳಿಗೆ ಅವಕಾಶ ನೀಡೋ ಕಾರಣಕ್ಕೆ ಕರ್ನಾಟಕದ ಮಾದರಿ ಸ್ಥಬ್ದ ಚಿತ್ರಕ್ಕೆ ಕೇಂದ್ರ ಅನುಮತಿ ನಿರಾಕರಣೆ ಮಾಡಿದೆ. ಕಳೆದ 13 ವರ್ಷಗಳಿಂದ ಕರ್ನಾಟಕ ಭಗವಹಿಸ್ತಾ ಇತ್ತು. ಆದ್ರೆ ಈ ಬಾರಿ ಬೇರೆ ರಾಜ್ಯಗಳಿಗೂ ಅವಕಾಶ ಕೊಡೋ ಹಿನ್ನಲೆ ಅನುಮತಿ ಇಲ್ಲ. ಅಂತಿಮ ಹಂತದಲ್ಲಿ ರಾಜ್ಯಗಳ ಆಯ್ಕೆಯಲ್ಲಿ ಅನುಮತಿ ನಿರಾಕರಿಸಲಾಗಿದೆ. ಕರ್ನಾಟಕ ಕಳೆದ ಬಾರಿ ಎರಡನೇ ಸ್ಥಾನ ಪ್ರಶಸ್ತಿ ಪಡೆದಿತ್ತು. ಈ ಬಾರಿ ಮಹಿಳಾ ಸಬಲೀಕರಣ ಥೀಮ್ ರೆಡಿ ಮಾಡಿದ್ದೆವು. ಆದ್ರೆ ಕೇಂದ್ರದಿಂದ ಅನುಮತಿ ಸಿಕ್ಕಿಲ್ಲ ಎಂದು ಹರ್ಷ ತಿಳಿಸಿದ್ದಾರೆ.

ಇದನ್ನೂ ಓದಿ: ​​ಚಿಕ್ಕಬಳ್ಳಾಪುರಕ್ಕೂ ಸಂಚಾರ ವಿಸ್ತರಣೆ ಮಾಡಿರುವ BMTC; ಆಕ್ಷೇಪ ವ್ಯಕ್ತಪಡಿಸುತ್ತಿರುವ KSRTC

ತಮಿಳುನಾಡು, ಕೇರಳ ಸೇರಿ ಈ ಬಾರಿ ಒಟ್ಟು 13 ರಾಜ್ಯಗಳ ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡಲಾಗಿದೆ. ಅಂತಿಮ ಹಂತದಲ್ಲಿ ಕರ್ನಾಟಕ ಸ್ತಬ್ಧ ಚಿತ್ರಕ್ಕೆ ಅವಕಾಶ ನಿರಾಕರಣೆ ಮಾಡಲಾಗಿದೆ. ಈ ವರ್ಷ ನಾರಿ ಶಕ್ತಿ ಸ್ತಬ್ಧ ಚಿತ್ರ ಕರ್ನಾಟಕದಿಂದ ಫೈನಲ್ ಆಗಿತ್ತು. ಸಾಲುಮರದ ತಿಮ್ಮಕ್ಕ, ಸೂಗಿಗಿತ್ತಿ ನರಸಮ್ಮರ ಸ್ತಬ್ಧ ಚಿತ್ರ ಫೈನಲ್ ಆಗಿತ್ತು. ಒಟ್ಟು ನಾಲ್ಕು ವಿಷಯಗಳನ್ನು ರಾಜ್ಯ ಕೊಟ್ಟಿತ್ತು. ನಾರಿ ಶಕ್ತಿ ಸ್ತಬ್ಧಚಿತ್ರ ಕಲ್ಪನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಅಂತಿಮ ಹಂತದ ಸಭೆಯಲ್ಲಿ ಕರ್ನಾಟಕ ಸ್ತಬ್ಧಚಿತ್ರ ರಿಜೆಕ್ಟ್ ಆಗಿದೆ.

ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡದಿದ್ರೆ ರಾಜ್ಯದೆಲ್ಲೆಡೆ ಧರಣಿ ಮಾಡ್ತಾರೆ

ಗಣರಾಜ್ಯೋತ್ಸವದಲ್ಲಿ ಕರ್ನಾಟಕ ಸ್ತಬ್ಧಚಿತ್ರಕ್ಕೆ ಅನುಮತಿ ನಕಾರ ಹಿನ್ನೆಲೆ ಕೇಂದ್ರದ ನಿರ್ಧಾರಕ್ಕೆ ಪ್ರವೀಣ್ ಶೆಟ್ಟಿ ಕರವೇ ಬಣ ಖಂಡನೆ ವ್ಯಕ್ತಪಡಿಸಿದೆ. ಗಣರಾಜ್ಯೋತ್ಸವದಲ್ಲಿ ಕರ್ನಾಟಕ ಸ್ತಬ್ಧಚಿತ್ರಕ್ಕೆ ಅನುಮತಿ ನೀಡಬೇಕು. ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡದಿದ್ರೆ ರಾಜ್ಯದೆಲ್ಲೆಡೆ ಧರಣಿ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಟಿವಿ9ಗೆ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.

ರಾಜ್ಯದ ಪರಂಪರೆ ತೋರಿಸಲು ಟ್ಯಾಬ್ಲೋಗೆ ಅವಕಾಶ ಮಾಡಿಕೊಟ್ಟಿಲ್ಲ

ಈ ಬಗ್ಗೆ ಬೆಂಗಳೂರು ನಗರದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಖಂಡನೆ ವ್ಯಕ್ತಪಡಿಸಿದ್ದಾರೆ. ಗಣರಾಜ್ಯೋತ್ಸವ ಸಂದರ್ಭದಲ್ಲಿ ಆಗುತ್ತಿರುವ ಅಪಮಾನ ಸಹಿಸುವುದಿಲ್ಲ. ಎಲ್ಲ ಸಂಸದರು ಪ್ರಧಾನಿ ಹಾಗೂ ಸಂಬಂಧಪಟ್ಟ ಸಚಿವರಿಗೆ ಒತ್ತಡ ಹೇರಿ. ಇಲ್ಲದಿದ್ದರೆ ಕೇಂದ್ರ ಸಚಿವರಿಗೆ ಮುತ್ತಿಗೆ​ ಹಾಕಬೇಕಾಗುತ್ತೆ. ಚುನಾವಣೆ ವೇಳೆ ಭಾವನಾತ್ಮಕ ವಿಷಯ ಮುಂದಿಟ್ಟುಕೊಂಡು ಹೋಗ್ತಾರೆ. ಕರ್ನಾಟಕ ತನ್ನದೇ ಆದ ಇತಿಹಾಸ ಹೊಂದಿರುವ ಪ್ರಗತಿಪರ ರಾಜ್ಯ. ರಾಜ್ಯದ ಪರಂಪರೆ ತೋರಿಸಲು ಟ್ಯಾಬ್ಲೋಗೆ ಅವಕಾಶ ಮಾಡಿಕೊಟ್ಟಿಲ್ಲ. ಗುಜರಾತ್​ಗೆ ಕೊಡೋ ಆದ್ಯತೆಯನ್ನು ಉಳಿದ ರಾಜ್ಯಗಳಿಗೆ ಕೊಡುತ್ತಿಲ್ಲ. ಏರ್ ಶೋ ವಿಚಾರದಲ್ಲೂ ಗೊಂದಲ ಸೃಷ್ಟಿ ಮಾಡಿದ್ದರು ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದ್ದಾರೆ.

ಕಳೆದ ವರ್ಷ ಎರಡನೇ ಸ್ಥಾನ ಪಡೆದಿದ್ದ ಕರ್ನಾಟಕ ಸ್ಥಬ್ದ ಚಿತ್ರ

ಕಳೆದ ವರ್ಷ ದೆಹಲಿಯ ರಾಜಪಥ್‍ನಲ್ಲಿ 73ನೇ ಗಣರಾಜ್ಯೋತ್ಸವ ದಿನಾಚರಣೆಯ ಪರೇಡ್‍ನಲ್ಲಿ ಭಾಗವಹಿಸಿದ್ದ ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳಗಳ ತೊಟ್ಟಿಲು ವಿಷಯಧಾರಿತ ರಾಜ್ಯದ ಸ್ತಬ್ಧಚಿತ್ರಕ್ಕೆ ದ್ವಿತೀಯ ಸ್ಥಾನ ಸಿಕ್ಕಿತ್ತು. ಸತತ 13 ವರ್ಷಗಳಿಂದ ಪ್ರದರ್ಶನಗೊಳ್ಳುತ್ತ ಬಂದಿದ್ದ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಈ ವರ್ಷ ಅವಕಾಶ ಸಿಕ್ಕಿಲ್ಲ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:36 am, Sat, 7 January 23