ಬಂದ್ ಭವಿಷ್ಯ ಹೇಗಿದೆ? ಮಾಡ್ಲೇಬೇಕು MES ಬ್ಯಾನ್, ಫಿಲ್ಮ್‌ ಚೇಂಬರ್ ನೈತಿಕ ಬೆಂಬಲ ಬೇಡ ಎಂದು ಗುಡುಗಿದ ವಾಟಾಳ್ ನಾಗರಾಜ್‌

| Updated By: ಸಾಧು ಶ್ರೀನಾಥ್​

Updated on: Dec 25, 2021 | 11:11 AM

Vatal Nagaraj: ಎಂಇಎಸ್ ಬ್ಯಾನ್​ ಆಗ್ರಹಿಸಿ ಕರೆ ನೀಡಲಾಗಿರುವ ರಾಜ್ಯ ಬಂದ್‌ಗೆ ಫಿಲ್ಮ್‌ ಚೇಂಬರ್ ನೈತಿಕ ಬೆಂಬಲ ನೀಡುವುದಾಗಿ ಹೇಳಿದೆ. ಆದರೆ ಈ ವಿಚಾರವನ್ನು ಖಂಡತುಂಡವಾಗಿ ತಿರಸ್ಕರಿಸಿರುವ ವಾಟಾಳ್ ನಾಗರಾಜ್‌ ಫಿಲ್ಮ್‌ ಚೇಂಬರ್ ನೈತಿಕ ಬೆಂಬಲವನ್ನು ತಿರಸ್ಕರಿಸಿದ್ದೇನೆ. ಅವರು ಮಾತ್ರ ನೈತಿಕ ಬೆಂಬಲ ನೀಡಿ ಮನೆಯಲ್ಲಿರಬೇಕಾ? ಕನ್ನಡ ಚಿತ್ರರಂಗದ ಪರ ನಾನೂ ಹೋರಾಟವನ್ನು ಮಾಡಿದ್ದೇನೆ. ಕನ್ನಡ ಬಾವುಟವನ್ನು ಸುಟ್ಟಿದ್ದಾರೆ, ಸುಡಬಹುದಾ? ಎಂದು ಫಿಲ್ಮ್‌ ಚೇಂಬರ್ ನಿಲುವನ್ನು ವಾಟಾಳ್‌ ಪ್ರಶ್ನಿಸಿದ್ದಾರೆ.

ಬಂದ್ ಭವಿಷ್ಯ ಹೇಗಿದೆ? ಮಾಡ್ಲೇಬೇಕು MES ಬ್ಯಾನ್, ಫಿಲ್ಮ್‌ ಚೇಂಬರ್ ನೈತಿಕ ಬೆಂಬಲ ಬೇಡ ಎಂದು ಗುಡುಗಿದ ವಾಟಾಳ್ ನಾಗರಾಜ್‌
ಬಂದ್ ಭವಿಷ್ಯ ಹೀಗಿದೆ: ಮಾಡ್ಲೇಬೇಕು ಡಿಸೆಂಬರ್ 31ಕ್ಕೆ ಬಂದ್-MES ಬ್ಯಾನ್: ಫಿಲ್ಮ್‌ ಚೇಂಬರ್ ನೈತಿಕ ಬೆಂಬಲ ನಮಗೆ ಬೇಡ ಎಂದ ವಾಟಾಳ್ ನಾಗರಾಜ್‌
Follow us on

ಬೆಂಗಳೂರು: ಕನ್ನಡ ವಿರೋಧಿ ಎಂಇಎಸ್ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧ ಮಾಡಬೇಕು (Demand for MES Ban) ಎಂದು ಆಗ್ರಹಿಸಿ ಡಿಸೆಂಬರ್ 31ಕ್ಕೆ ಕರ್ನಾಟಕ ಕಂಪ್ಲೀಟ್ ಬಂದ್​ಗೆ (December 31 Karnataka Bandh) ಕರೆ ನೀಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್ ಮಾಡುವ ಸಾಧ್ಯತೆಯಿದೆ. ಹಾಗಾದರೆ ಡಿಸೆಂಬರ್ 31ರಂದು ಸಮಸ್ತ ಕರ್ನಾಟಕ ಸ್ತಬ್ಧವಾಗುತ್ತಾ…? ವರ್ಷಾಂತ್ಯದ ಕರ್ನಾಟಕ ಬಂದ್‌ಗೆ ಹೇಗೆ ಸಾಗಿದೆ ಸಿದ್ಧತೆ…? ಹೋರಾಟಕ್ಕೆ ಯಾವೆಲ್ಲಾ ಸಂಘಟನೆಗಳು ಬೆಂಬಲ ನೀಡ್ತಿವೆ…? ಹೋಟೆಲ್, ಪಬ್, ಬಾರ್, ಸಿನಿಮಾ, ಮಾಲ್ ಇರೋದಿಲ್ವಾ…? ಬಸ್, ಆಟೋ, ಟ್ಯಾಕ್ಸಿ, ಮೆಟ್ರೋ, ರೈಲು ಓಡುತ್ತೋ ಇಲ್ವೋ…? ಸಮಸ್ತ ಚಿತ್ರರಂಗವೇ (Karnataka Film Chamber) ಕನ್ನಡದ ಕಹಳೆಗೆ ಧ್ವನಿಯಾಗುತ್ತಿದೆಯಾ…? ಹೇಗಿದೆ ಬಂದ್ ಭವಿಷ್ಯ? ಇಲ್ಲಿದೆ ಸವಿವರ.

ಬಂದ್ ಪಕ್ಕಾ ಆದರೆ ಕಂಡೀಷನ್​ ಅಪ್ಲೈ:

ಎಂಇಎಸ್ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧ ಮಾಡಬೇಕು. ನಿಷೇಧ ಮಾಡದಿದ್ರೆ ಬಂದ್ ಪಕ್ಕಾ. ನಿಷೇಧ ಮಾಡಲು ಡಿಸೆಂಬರ್ 29ರ ವರೆಗೆ ಸರ್ಕಾರಕ್ಕೆ ಡೆಡ್ ಲೈನ್ ನೀಡಲಾಗಿದೆ ಎಂದು ಬಂದ್​ಗೆ ಕರೆ ನೀಡಿರುವ ಕನ್ನಡ ಒಕ್ಕೂಟದ ಅಧ್ಯಕ್ಷ ಹಾಗೂ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದ್ದಾರೆ. ಒಂದು ವೇಳೆ ಡಿಸೆಂಬರ್ 29ರೊಳಗೆ ಎಂಇಎಸ್ ನಿಷೇಧ ಮಾಡಿದರೆ ಬಂದ್ ವಾಪಸ್, ನಿಷೇಧ ಮಾಡದಿದ್ದರೆ ಡಿ. 31ಕ್ಕೆ ಕರುನಾಡು ಬಂದ್ ಫಿಕ್ಸ್ ಎಂದಿರುವ ವಾಟಾಳ್ ನಾಗರಾಜ್ ನೈತಿಕ ಬೆಂಬಲ ಯಾರದೂ ಬೇಡ, ಸಂಪೂರ್ಣ ಬೆಂಬಲ ಕೊಡಿ ಎಂದು ಗುಡುಗಿದ್ದಾರೆ. ಇದೇ ವೇಳೆ ಸರ್ಕಾರದ ಕಡೆಯಿಂದ ಬಂದಿರುವ ಮಾಹಿತಿ ಪ್ರಕಾರ ಎಂಇಎಸ್ ಸಂಘಟನೆ ಎಂಬುದು ರಾಜಕೀಯ ಪಕ್ಷವಾಗಿದೆ. ಅಧಿಕೃತವಾಗಿ ನೋಂದಣಿಯಾಗಿದೆ. ಹಾಗಾಗಿ ಅದನ್ನು ನಿಷೇಧಿಸಬೇಕು ಅಂದರೆ ಕಾನೂನು ಪ್ರಕ್ರಿಯೆ ಮೂಲಕವೇ ಸಾಧ್ಯ ಎಂದು ಸದ್ಯಕ್ಕೆ ಕೈಚೆಲ್ಲಿದೆ.

ಅವರು ಮಾತ್ರ ನೈತಿಕ ಬೆಂಬಲ ನೀಡಿ ಮನೆಯಲ್ಲಿರಬೇಕಾ? ವಾಟಾಳ್ ನಾಗರಾಜ್ ಗುಡುಗು

ಇನ್ನು, ಎಂಇಎಸ್ ಸಂಘಟನೆ ಬ್ಯಾನ್​ ಆಗ್ರಹಿಸಿ ಕರೆ ನೀಡಲಾಗಿರುವ ರಾಜ್ಯ ಬಂದ್‌ಗೆ ಫಿಲ್ಮ್‌ ಚೇಂಬರ್ ನೈತಿಕ ಬೆಂಬಲ ನೀಡುವುದಾಗಿ ಹೇಳಿದೆ. ಆದರೆ ಈ ವಿಚಾರವನ್ನು ಖಂಡತುಂಡವಾಗಿ ತಿರಸ್ಕರಿಸಿರುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್‌ ಫಿಲ್ಮ್‌ ಚೇಂಬರ್ ನೈತಿಕ ಬೆಂಬಲವನ್ನು ತಿರಸ್ಕರಿಸಿದ್ದೇನೆ. ಫಿಲ್ಮ್‌ ಚೇಂಬರ್ ನೀಡಿರುವ ನೈತಿಕ ಬೆಂಬಲ ನಮಗೆ ಬೇಡ. ಎಲ್ಲರೂ ಬೀದಿಗಿಳಿದು ಬಂದ್‌ಗೆ ಬೆಂಬಲ ನೀಡಲು ಆಗ್ರಹಿಸುವೆ. ಯಾವ ಉದ್ದೇಶಕ್ಕೆ ನೈತಿಕ ಬೆಂಬಲ ನೀಡಿದ್ದಾರೆಂದು ಗೊತ್ತಿಲ್ಲ. ನಾವೆಲ್ಲಾ ಬೀದಿಯಲ್ಲಿ ಹೋರಾಟ ಮಾಡಬೇಕಾ? ಅವರು ಮಾತ್ರ ನೈತಿಕ ಬೆಂಬಲ ನೀಡಿ ಮನೆಯಲ್ಲಿರಬೇಕಾ? ಕನ್ನಡದವರು ನಿಮ್ಮ ಸಿನಿಮಾಗಳನ್ನ ನೋಡಬೇಕು- ಆದ್ರೆ ಕನ್ನಡಪರ ಹೋರಾಟಕ್ಕೆ ನೈತಿಕ ಬೆಂಬಲ ನೀಡುತ್ತೀರಿ! ಕನ್ನಡ ಚಿತ್ರರಂಗದ ಪರ ನಾನು ಹೋರಾಟವನ್ನು ಮಾಡಿದ್ದೇನೆ. ಕನ್ನಡ ಬಾವುಟವನ್ನು ಸುಟ್ಟಿದ್ದಾರೆ, ಸುಡಬಹುದಾ? ಎಂದು ಫಿಲ್ಮ್‌ ಚೇಂಬರ್ ನಿಲುವನ್ನು ವಾಟಾಳ್‌ ಪ್ರಶ್ನಿಸಿದ್ದಾರೆ.

ಭಾನುವಾರ ಬೆಳಗ್ಗೆ 11ಗಂಟೆಗೆ ಫಿಲ್ಮ್‌ ಚೇಂಬರ್ ಎದುರು ಸತ್ಯಾಗ್ರಹ

ರಾಯಣ್ಣ ಪ್ರತಿಮೆ ಹಾಳು ಮಾಡಿದ್ದಾರೆ, ಮಾಡಬಹುದಾ? ಇಂತಹ ಪರಿಸ್ಥಿತಿಯಲ್ಲೂ ನೀವು ನೈತಿಕ ಬೆಂಬಲ ಅಂತೀರಲ್ಲಾ? ಚಿತ್ರರಂಗದವರಾದ ನೀವು ಮೊದಲು ಬೆಂಬಲ ನೀಡಬೇಕಿತ್ತು. ಬಾವುಟ ಸುಟ್ಟಿರೋದಕ್ಕೆ ನೈತಿಕ ಬೆಂಬಲ‌ ನೀಡಿದ್ದೀರಿ ಅಂದ್ರೆ ಕನ್ನಡ ಬಾವುಟವನ್ನು ಸುಡಲು ನಿಮ್ಮ ಬೆಂಬಲ ಇದೆ ಎಂದರ್ಥ. ನಿಮ್ಮ ನೈತಿಕ ಬೆಂಬಲ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಿ. ಇಲ್ಲದಿದ್ದರೆ ನಿಮ್ಮ ವಿರುದ್ಧವೇ ಹೋರಾಟ ಮಾಡಬೇಕಾಗುತ್ತೆ. ಚಿತ್ರಮಂದಿರಗಳ ವಿರುದ್ಧ ಪ್ರತಿಭಟನೆ ಮಾಡ್ತೇವೆಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್‌ ಎಚ್ಚರಿಕೆ ನೀಡಿದ್ದಾರೆ. ನಾಳೆ ಭಾನುವಾರ ಬೆಳಗ್ಗೆ 11ಗಂಟೆಗೆ ಫಿಲ್ಮ್‌ ಚೇಂಬರ್ ಎದುರು ಸತ್ಯಾಗ್ರಹ ಸಹ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ರಾಜ್ಯ ಬಂದ್ ಮಾಡುವುದೇ ಎಲ್ಲದಕ್ಕೂ ಪರಿಹಾರವಲ್ಲ: ಹೋಟೆಲ್ ಮಾಲೀಕರ ಸಂಘ

ಡಿಸೆಂಬರ್ 31ರ ಕರ್ನಾಟಕ ಬಂದ್‌ಗೆ ನಮ್ಮ ಬೆಂಬಲ ಇಲ್ಲ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಹೇಳಿದ್ದಾರೆ. ಡಿಸೆಂಬರ್ 31ರಂದು ಹೆಚ್ಚು ವ್ಯಾಪಾರ ವಹಿವಾಟು ಇರುತ್ತದೆ. ನಾವು ಕೊವಿಡ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ. ಇದರ ನಡುವೆ ವ್ಯಾಪಾರದ ವೇಳೆ ಬಂದ್ ಮಾಡುವುದಿಲ್ಲ. ರಾಜ್ಯ ಬಂದ್ ಮಾಡುವುದೇ ಎಲ್ಲದಕ್ಕೂ ಪರಿಹಾರವಲ್ಲ. ಎಂಇಎಸ್ ಪುಂಡಾಟಕ್ಕೆ ವಿರೋಧ ಇದೆ. ಆದರೆ ಹೋಟೆಲ್ ಬಂದ್ ಮಾಡಿ ಬೆಂಬಲ ನೀಡಲ್ಲ ಎಂದು ಟಿವಿ9ಗೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಹೇಳಿದ್ದಾರೆ.

Karnataka Bund on Dec-31: ಬೆಂಬಲ ಕೊಡ್ತೀವಿ ಹೊರತು ಹೋಟೆಲ್​ ಬಂದ್​ ಮಾಡಲ್ಲ|Tv9Kannada

ಡಿಸೆಂಬರ್ 31ರ ಬಂದ್ ಗೆ ಬೆಂಬಲ ನೀಡಿರುವ ಸಂಘಟನೆಗಳು

– ಓಲಾ ಉಬರ್ ಟ್ಯಾಕ್ಸಿ ಡ್ರೈವರ್ ಅಂಡ್ ಓನರ್ಸ್ ಅಸೋಸಿಯೇಷನ್
– ಬೆಂಗಳೂರು ಆದರ್ಶ ಆಟೋ ಯೂನಿಯನ್
– ಕರ್ನಾಟಕ ರಾಜ್ಯ ಬೀದಿಬದಿ ವ್ಯಾಪಾರಿಗಳ ಸಂಘಟನೆ ಒಕ್ಕೂಟ
– ದಾಸನಪುರ ಎಂಪಿಎಂಸಿ ತರಕಾರಿ ಮಾರುಕಟ್ಟೆ ವ್ಯಾಪಾರಿಗಳ ಸಂಘ
– ಏರ್ಪೋರ್ಟ್ ಟ್ಯಾಕ್ಸಿ ಸಂಪೂರ್ಣ ಬಂದ್

ಯಾವೆಲ್ಲ ಸಂಘಟನೆಗಳು ಬಂದ್​ಗೆ ಬೆಂಬಲ ನೀಡ್ತಿಲ್ಲ..!

– ಕರ್ನಾಟಕ ರಕ್ಷಣಾ ವೇದಿಕೆ
– ಪೀಸ್ ಆಟೋ ಅಸೋಸಿಯೇಷನ್
– ಬೆಂಗಳೂರು ಹೋಟೆಲ್ ಮಾಲೀಕರ ಸಂಘ
– ಕರ್ನಾಟಕ ರಾಜ್ಯ ಖಾಸಗಿ ಬಸ್ ಟ್ರಾವಲ್ಸ್ ಅಸೋಸಿಯೇಷನ್

ನೈತಿಕ ಬೆಂಬಲ ಯಾರು ಯಾರು ನೀಡ್ತಿದ್ದಾರೆ..?

– ಲೇಬರ್ಸ್ ವರ್ಕರ್ಸ್ ಯೂನಿಯನ್
– ಬಾರ್ ಅಂಡ್ ರೆಸ್ಟೊರೆಂಟ್, ಪಬ್ ಮಾಲೀಕರ ಸಂಘ
– ಖಾಸಗಿ ಮತ್ತು ಅನುದಾನ ರಹಿತ ಶಾಲೆಗಳ ಸಂಘಟನೆ (ಕ್ಯಾಮ್ಸ್)
– ಪೆಟ್ರೋಲ್ ಬಂಕ್ ಮಾಲೀಕರ ಸಂಘ

ಬಂದ್ ಗೆ ಬಗ್ಗೆ ಇನ್ನು ನಿರ್ಧಾರ ಮಾಡದ ಅಸೋಸಿಯೇಷನ್ ಗಳು..!

– ಬೆಂಗಳೂರು ಬಟ್ಟೆ ಅಂಗಡಿ ಮಾಲೀಕರ ಸಂಘ
– ಬೆಂಗಳೂರು ಮಾಲ್ ಅಸೋಸಿಯೇಷನ್‌
– ಪೀಣ್ಯಾ ಕೈಗಾರಿಕಾ ಸಂಘ
– ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟ
– ಕರ್ನಾಟಕ ರಾಜ್ಯ ಜಿಮ್ ಮಾಲೀಕರ ಸಂಘ
– ಸಾರಿಗೆ ನೌಕರರ ಕೂಟ

ಬಂದ್ ಬಗ್ಗೆ ಗೊಂದಲದಲ್ಲಿರುವ ಕೆಲ ಸಂಘಟನೆಗಳು

ಕೊರೊನಾದಿಂದ ವ್ಯಾಪಾರ-ವಹಿವಾಟು ಕುಸಿದಿದೆ. ಒಂದು ದಿನ ಅಂಗಡಿ ಬಾಗಿಲು ಹಾಕಿದ್ರೂ ದೊಡ್ಡ ಮಟ್ಟದ ನಷ್ಟವಾಗಲಿದೆ. ಸಣ್ಣ ಮತ್ತು ಮಧ್ಯಮ ವರ್ಗದ ಅಂಗಡಿಗಳಿಗೆ ಭಾರೀ ಹೊಡೆತ ಬೀಳಲಿದೆ. ಹೀಗಾಗಿ ಕೆಲವು ಸಂಘಟನೆಗಳು ತಟಸ್ಥವಾಗಿ ಇರಲು ನಿರ್ಧರಿಸಿವೆ. ಸದ್ಯಕ್ಕೆ ಸರ್ಕಾರಕ್ಕೆ ಡಿ. 29ರವರೆಗೆ ಗಡುವು ನೀಡಿದ್ದಾರೆ. ಡಿ. 29ರವರೆಗೆ ಕಾದು ನೋಡೋಣ ಎಂದೂ ಕೆಲವರು ಸುಮ್ಮನಿದ್ದಾರೆ. ಇಂದು ಕೆಲ ಅಸೋಸಿಯೇಷನ್ ಗಳು ಸಭೆ ನಡೆಸಿ ಬಂದ್ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

Vatal Nagaraj : ಮಾಡ್ಲೇಬೇಕು.. ಮಾಡ್ಲೇಬೇಕು.. MES ಬ್ಯಾನ್ ಮಾಡ್ಲೇಬೇಕು |Tv9kannada

Published On - 8:04 am, Sat, 25 December 21