ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಾಯಿಲೆಗಳು ಹೆಚ್ಚುತ್ತಿದೆ. ಕೊರೊನಾ, ನಿಫಾ, ಡೆಲ್ಟಾ ಮಧ್ಯೆ ಡೆಂಗ್ಯೂ ( Dengue) ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ರಾಜ್ಯದಲ್ಲಿ ಕಳೆದೊಂದು ತಿಂಗಳಲ್ಲಿ 893 ಡೆಂಗ್ಯೂ ಪ್ರಕರಣ ಪತ್ತೆಯಾಗಿದ್ದು, ಬೆಂಗಳೂರಿನಲ್ಲಿಯೇ 446 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದೆ. ಆ ಮೂಲಕ ರಾಜಧಾನಿಯಲ್ಲಿಯೇ ಹೆಚ್ಚು ಡೆಂಗ್ಯೂ ಕೇಸ್ ಪತ್ತೆಯಾಗಿದೆ.
ರಾಜ್ಯದಲ್ಲಿ ಪತ್ತೆಯಾದ ಡೆಂಗ್ಯೂ ಪ್ರಕರಣ
ಶಿವಮೊಗ್ಗದಲ್ಲಿನ ಡೆಂಗ್ಯೂ ಪ್ರಕರಣ 202
ಉಡುಪಿಯಲ್ಲಿ ಪತ್ತೆಯಾದ ಡೆಂಗ್ಯೂ ಪ್ರಕರಣ 293
ಕಲಬುರಗಿಯಲ್ಲಿ ಪತ್ತೆಯಾದ ಡೆಂಗ್ಯೂ ಪ್ರಕರಣ 280
ದಕ್ಷಿಣ ಕನ್ನಡದಲ್ಲಿ ಪತ್ತೆಯಾದ ಡೆಂಗ್ಯೂ ಪ್ರಕರಣ 178
ಕೊಪ್ಪಳದಲ್ಲಿ ಪತ್ತೆಯಾದ ಡೆಂಗ್ಯೂ ಪ್ರಕರಣ 150
ದಾವಣಗೆರೆಯಲ್ಲಿ ಪತ್ತೆಯಾದ ಡೆಂಗ್ಯೂ ಪ್ರಕರಣ 120
ಬಳ್ಳಾರಿಯಲ್ಲಿ ಪತ್ತೆಯಾದ ಡೆಂಗ್ಯೂ ಪ್ರಕರಣ 113
ಹಾವೇರಿಯಲ್ಲಿ ಪತ್ತೆಯಾದ ಡೆಂಗ್ಯೂ ಪ್ರಕರಣ 100
ಅಚ್ಚರಿಗೆ ಕಾರಣವಾದ ಚಿಕನ್ ಗುನ್ಯಾ ಪ್ರಕರಣಗಳು
ರಾಜ್ಯದಲ್ಲಿ ಒಟ್ಟು ಡೆಂಘಿ ಪ್ರಕರಣಗಳ ಸಂಖ್ಯೆ 2736 ಕ್ಕೆ ಏರಿಕೆಯಾಗಿದೆ. ಇದರ ಮಧ್ಯೆ ಚಿಕನ್ ಗುನ್ಯಾ ಪ್ರಕರಣಗಳು ಸಹ ಏರಿಕೆಯಾಗಿದೆ. ಕಲಬುರುಗಿಯಲ್ಲಿ ಪತ್ತೆಯಾದ ಚಿಕನ್ ಗುನ್ಯಾ ಪ್ರಕರಣ 121, ಕೋಲಾರದಲ್ಲಿ ಪತ್ತೆಯಾದ ಚಿಕನ್ ಗುನ್ಯಾ ಪ್ರಕರಣ 106, ಶಿವಮೊಗ್ಗದಲ್ಲಿ ಪತ್ತೆಯಾದ ಚಿಕನ್ ಗುನ್ಯಾ ಪ್ರಕರಣ 93, ತುಮಕೂರಿನಲ್ಲಿ ಪತ್ತೆಯಾದ ಚಿಕನ್ ಗುನ್ಯಾ ಪ್ರಕರಣ 68, ವಿಜಯಪುರದಲ್ಲಿ ಪತ್ತೆಯಾದ ಚಿಕನ್ ಗುನ್ಯಾ ಪ್ರಕರಣ 66, ಯಾದಗಿರಿಯಲ್ಲಿ ಪತ್ತೆಯಾದ ಚಿಕನ್ ಗುನ್ಯಾ ಪ್ರಕರಣ 51, ಬೆಂಗಳೂರಿನಲ್ಲಿ 51 ಪ್ರಕರಣಗಳು ದಾಖಲಾಗಿದೆ. ಆ ಮೂಲಕ ಒಟ್ಟು ಚಿಕನ್ ಗುನ್ಯಾ ಪ್ರಕರಣಗಳ ಸಂಖ್ಯೆ 918 ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ:
Dengue: ಮುಂಬೈನಲ್ಲಿ ಏರಿಕೆಯಾದ ಡೆಂಗ್ಯೂ ಪ್ರಕರಣ, ಆಗಸ್ಟ್ ತಿಂಗಳಲ್ಲಿ ಆಸ್ಪತ್ರೆಗೆ ದಾಖಲಾದವರ ಸಂಖ್ಯೆಯಲ್ಲಿ ಹೆಚ್ಚಳ
Covid 19 Karnataka Update: ಕರ್ನಾಟಕದ 1074 ಜನರಲ್ಲಿ ಕೊರೊನಾ ಸೋಂಕು ಪತ್ತೆ, 1136 ಮಂದಿ ಗುಣಮುಖ
Published On - 10:33 am, Fri, 10 September 21